

ಹರಿಪ್ರಸಾದ್ ನಂದಳಿಕೆ ಕಾರ್ಕಳ ಬಸ್‌ಗಳ ಸಮಯ ತಿಳಿಯದೇ ತಾಸುಗಟ್ಟಲೆ ಕಾಯುವ ಬೆಳ್ಮಣ್ ಭಾಗದ ಪ್ರಯಾಣಿಕರ ಕಷ್ಟಕ್ಕೆ ಕೊನೆಗೂ ಮುಕ್ತಿ ಸಿಕ್ಕಿದ್ದು, ಬೆಳ್ಮಣ್ ಬಸ್‌ನಿಲ್ದಾಣದಲ್ಲಿ ಅಳವಡಿಸಿರುವ ಡಿಜಿಟಲ್ ಕ್ಯೂಆರ್ ಕೋಡ್ ಮೂಲಕ ಸ್ವತಃ ಪ್ರಯಾಣಿಕರೇ ಬಸ್‌ಗಳ ವೇಳಾಪಟ್ಟಿ ಹಾಗೂ ಸಂಚರಿಸುವ ಮಾರ್ಗದ ಕುರಿತು ತಿಳಿದುಕೊಳ್ಳಬಹುದಾಗಿದೆ. ಬೆಳ್ಮಣ್ ಜೆಸಿಐ ಘಟಕದಿಂದ ಈ ಹೊಸ ಯೋಜನೆ ಅಳವಡಿಸಿಲಾಗಿದ್ದು, ಸ್ಮಾರ್ಟ್‌ೆನ್ ಬಳಸುವ ಪ್ರಯಾಣಿಕರು ಇಲ್ಲಿ ಅಳವಡಿಸಿರುವ ಕ್ಯೂಆರ್ ಕೋಡ್ ಸ್ಕಾೃನ್ ಮಾಡಿ ಬಸ್‌ಗಳ ಮಾಹಿತಿ ಪಡೆಯಬಹುದಾಗಿದೆ. ಬಸಗಳ ಮಾಹಿತಿ ಡಿಜಿಟಲೀಕರಣಗೊಂಡಿದ್ದರಿಂದ ನಿಖರ ಮಾಹಿತಿ ಪಡೆಯಲು ಸಾಧ್ಯವಿದೆ. ಬಸ್‌ಗಳು ಯಾವಾಗ ಬರುತ್ತವೆ ಅಥವಾ ತಾವು ಹೋಗಾಬೇಕಾದ ಬಸ್ ತಪ್ಪಿತೇ ಎಂದು ಪ್ರಯಾಣಿಕರು ಚಿಂತಿಸುವುದು ತಪ್ಪಲಿದೆ. ಜನರಿಂದ ಮೆಚ್ಚುಗೆ: ಬೆಳ್ಮಣ್ ಜೆಸಿಐ ಘಟಕವು 46 ವರ್ಷಗಳಿಂದ ಬೆಳ್ಮಣ್ ಪರಿಸರದಲ್ಲಿ ಜನರಿಗೆ ಪೂರಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಈ ಸಾಲಿಗೆ ಬಸ್‌ನಿಲ್ದಾಣಗಳ ಕ್ಯೂಆರ್ ಕೋಡ್ ಅಳವಡಿಕೆಯೂ ಸೇರ್ಪಡೆಯಾಗಿದೆ. ಸಾರ್ವಜನಿಕರು ಬೆಳ್ಮಣ್ ಜೆಸಿಐ ಘಟಕದ ಪ್ರಯಾಣಿಕರ ಸ್ನೇಹಿಯಾಗಿರುವ ಈ ವಿನೂತನ, ಆಧುನಿಕ ವ್ಯವಸ್ಥೆಯನ್ನು ಶ್ಲಾಸಿದ್ದಾರೆ.
ಬಸ್ ನಿಲ್ದಾಣದ ಗೋಡೆಗೆ ಬೃಹತ್ ಗಾತ್ರದ ಸ್ಕಾೃನರ್ ಅಳವಡಿಸಲಾಗಿದ್ದು, ಸಾವಾಜಿಕ ಜಾಲತಾಣಗಳಲ್ಲಿಯೂ ಈ ಕ್ಯೂರ್ ಕೋಡ್ ಹಂಚಿಕೊಳ್ಳಲಾಗಿದೆ. ಪ್ರಯಾಣಿಕರು ಮೊಬೈಲ್‌ನಿಂದ ಸ್ಕಾೃನ್ ವಾಡಿದಾಗ ವೆಬ್‌ಸೈಟೊಂದು ಸಂಪರ್ಕಗೊಳ್ಳಲಿದ್ದು, ಇದರಲ್ಲಿ ಬಸ್ಸುಗಳ ಪೂರ್ತಿ ಮಾಹಿತಿ ಇರುತ್ತವೆ. ಈ ವೇಳಾಪಟ್ಟಿ ಪರಿಶೀಲಿಸಿಕೊಂಡು ಪ್ರಯಾಣಿಕರು ಬಸ್‌ನಿಲ್ದಾಣಕ್ಕೆ ಆಗಮಿಸಬಹುದಾಗಿದೆ. ಡಿಜಿಟಲ್ ಇಂಡಿಯಾ ಯೋಜನೆಗೆ ಇದು ಹೊಸ ಸೇರ್ಪಡೆಯಾಗಲಿದ್ದು, ಜನರ ಪ್ರತಿಕ್ರಿಯೆ ಆಧರಿಸಿ ಇತರ ನಿಲ್ದಾಣಗಳಲ್ಲೂ ಅಳವಡಿಸುವ ಚಿಂತನೆ ಇದೆ.
ಪ್ರಯಾಣಿಕರು ಬಸ್‌ಗಳು ಯಾವಾಗ ಬರುತ್ತವೆ, ಹೋಯಿತೇ ಎಂದು ಕೇಳುತ್ತಲೇ ಇದ್ದರು. ಈಗ ಹೊಸದಾಗಿ ಅಳವಡಿಸಿದ ಕ್ಯೂಆರ್ ಕೋಡ್‌ನಿಂದ ಬಹಳ ಉಪಕರವಾಗಿದ್ದು, ಪ್ರಯಾಣಿಕರು ಕುಳಿತಲ್ಲಿಂದಲೇ ಬಸ್ ವೇಳಾಪಟ್ಟಿ ಪರಿಶೀಲಿಸಬಹುದು. ಈ ಯೋಜನೆ ಜಾರಿಗೊಳಿಸಿದ ಬೆಳ್ಮಣ್ ಜೆಸಿಐ ಘಟಕ ಮೆಚ್ಚುಗೆಗೆ ಅರ್ಹವಾಗಿದೆ. -ರವಿ ಮುಂಡ್ಕೂರು, ಬಸ್ ಏಜೆಂಟ್. ಸ್ಮಾರ್ಟ್‌ಫೋನ್ ಬಳಸಿ ಬಸ್‌ಗಳ ವೇಳಾಪಟ್ಟಿ ತಿಳಿದುಕೊಳ್ಳಬಹುದು. ಪ್ರಯಾಣಿಕರ ಸಮಯವೂ ವ್ಯರ್ಥವಾಗುವುದಿಲ್ಲ. ಬೆಳ್ಮಣ್ ಭಾಗದಿಂದ ಯಾವ್ಯಾವ ಪ್ರದೇಶಕ್ಕೆ ಯಾವುದೆಲ್ಲ ಬಸ್‌ಗಳು ಯಾವ ಸಮಯಕ್ಕೆ ಬರುತ್ತವೆ ಎಂಬ ಸಮಗ್ರ ವಾಹಿತಿಯೂ ಇದರಲ್ಲಿ ಸಿಗಲಿದೆ. -ಪ್ರದೀಪ್ ಶೆಟ್ಟಿ, ಬೆಳ್ಮಣ್ ಜೆಸಿಐ ಅಧ್ಯಕ್ಷ ಮುಂದಿನ ದಿನಗಳಲ್ಲಿ ಈ ಸ್ಕಾೃನರ್‌ನಲ್ಲೇ ತುರ್ತು ಸಂಪರ್ಕ ಸಂಖ್ಯೆಗಳು, ಆಟೋ, ಟ್ಯಾಕ್ಸಿ ಮುಂತಾದ ಸಮಗ್ರ ವಾಹಿತಿ ಸಿಗುವಂತೆ ವೆಬ್‌ಸೈಟ್ ಅಭಿವೃದ್ಧಿ ಪಡಿಸುವ ಚಿಂತನೆಯಿದೆ. -ವೀರೇಂದ್ರ ಆರ್.ಕೆ., ಬೆಳ್ಮಣ್ ಜೆಸಿಐ ಕಾರ್ಯದರ್ಶಿ