ಆಹಾರವೆಂದು ಸಿಡಿಮದ್ದು ತಿಂದ ಗರ್ಭಿಣಿ ಎಮ್ಮೆ ಬಾಯಿ ಛಿದ್ರ: ಮಾನವನ ಎಡವಟ್ಟಿಗೆ ಮೂಕ ಪ್ರಾಣಿಗೇಕೆ ಶಿಕ್ಷೆ?

Buffalo
Published on

ಕಲಬುರಗಿ: ಮಾನವ ಮಾಡಿದ ಒಂದು ತಪ್ಪಿನಿಂದ ಮೂಕ ಪ್ರಾಣಿಯೊಂದು ನರಕಯಾತನೆ ಅನುಭವಿಸುವಂತಾಗಿದೆ.

ಹೌದು, ಹಸಿವಿನಿಂದ ಆಹಾರವೆಂದು ಸಿಡಿಮದ್ದು‌ ತಿನ್ನಲು ಹೋದ ಎಮ್ಮೆಯೊಂದರ ಬಾಯಿಯೊಳಗೆ ಸಿಡಿಮದ್ದು ಸ್ಫೋಟಗೊಂಡ ಪರಿಣಾಮ ತುಂಬು ಗರ್ಭಿಣಿ ಎಮ್ಮೆಯ ಬಾಯಿ ಛಿದ್ರ ಛಿದ್ರವಾಗಿದೆ.

ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಿನ್ನೆ(ಬುಧವಾರ) ಚಾಮನೂರು ರಸ್ತೆಯ ಹೊಲವೊಂದರಲ್ಲಿ‌ ಎಮ್ಮೆ ಮೇಯಿಸಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಕಾಡು ಹಂದಿಯನ್ನು ಓಡಿಸಲು ಇಟ್ಟಿದ್ದ ಸಿಡಿಮದ್ದು ತಿಂದು ಎಮ್ಮೆ ಬಾಯಿ ಛಿದ್ರವಾಗಿದೆ.

ಸಾಕು ಪ್ರಾಣಿಗಳು ಆಹಾರವನ್ನು ಅರಸಿ ಬರುತ್ತವೆ ಎಂಬುದು ತಿಳಿದಿದ್ದರೂ ಸಿಡಿಮದ್ದು ಇಡುವ ಮಾನವ ಗುಣಕ್ಕೆ ಏನನ್ನಬೇಕೋ? ಸಿಡಿಮದ್ದಿನಿಂದಾಗಿ ಇಡೀ ಬಾಯಿ ಛಿದ್ರಗೊಂಡು ಮೂಕ ಪ್ರಾಣಿ ಅದೆಷ್ಟು ಸಂಕಟ ಪಡುತ್ತಿದೆಯೋ? ಈಗಲಾದರೂ ಎಚ್ಚೆತ್ತುಕೊಂಡು ಸಿಡಿಮದ್ದು ಇಡುವಾಗ ಸಾಕಷ್ಟು ಮುಂಜಾಗ್ರತೆ ವಹಿಸಿ ಎಂಬುದು ಎಲ್ಲರ ಕಳಕಳಿಯಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net