ಕಾಡುಕೋಣ ಹಾವಳಿಗೆ ರೈತ ಕಂಗಾಲು: ಕೃಷಿಕರಿಗೆ ಸಂಕಷ್ಟ ; ಬೆಳೆಗಳ ರಕ್ಷಣೆಗೆ ಅಧಿಕಾರಿಗಳಿಗೆ ಮನವಿ

baffelo
ದಾಳಿ ಮಾಡಿದ ಗದ್ದೆಯ ನಡುವೆ ಕಂಗೆಟ್ಟ ರೈತ
Published on

ಕೊಕ್ಕರ್ಣೆ: ನಾಲ್ಕೂರು ಗ್ರಾಮದ ಮಾರಾಳಿ ಕಾಡ್ತಿ ಹಾಂಡ, ಕೃಷ್ಣ, ಗುಲಾಬಿ, ರತ್ನಾ, ಪಾರ್ವತಿ, ರುಕ್ಮಿಣಿ, ಸೀತಾ, ಚಂದ್ರಶೇಖರ, ಪುರುಷ, ರಾಮ, ಅಂಬ್ರು ಅವರ ಗದ್ದೆಗೆ ನಾಟಿ ಮಾಡಲು ಸಿದ್ಧವಾಗಿದ್ದ ನೇಜಿಗಳನ್ನು ಗುರುವಾರ ಕಾಡುಕೋಣಗಳು ನಾಶ ಮಾಡಿವೆ. ಇನ್ನೇನು ಎರಡು ದಿನಗಳಲ್ಲಿ 50 ಎಕರೆ ಪ್ರದೇಶದಲ್ಲಿ ನಾಟಿ ಮಾಡಲು ತಯಾರಾಗಿದ್ದರು. ಕಾಡುಕೋಣಗಳ ದಾಳಿ ನಾಶ ಮಾಡಿರುವುದರಿಂದ ರೈತರು ಕಂಗೆಟ್ಟಿದ್ದಾರೆ.

ಪ್ರತಿ ವರ್ಷವೂ ಈ ಭಾಗಗಳಲ್ಲಿ ಫಸಲನ್ನು ನಾಶ ಮಾಡುತ್ತಿವೆ. ಸರ್ಕಾರದ ಪರಿಹಾರ ಸಿಗುವುದು ಎಳ್ಳಷ್ಟು ಮಾತ್ರ. ರೈತರು ತಮ್ಮ ಆಕ್ರೋಶ ಹೊರಹಾಕಿದ್ದು, ತಮ್ಮ ಜಮೀನಿನ ಸುತ್ತಲೂ ಫ್ಯಾಸ್ನಿಂಗ್ ಬೇಲಿ ಅಥವಾ ಕಂದಕ ನಿರ್ಮಿಸಿ ಬೆಳೆಗಳ ರಕ್ಷಣೆ ಮಾಡಬೇಕು ಎಂದು ರೈತರು ಅಧಿಕಾರಿಗಳಿಗೆ ಈ ಮೂಲಕ ಮನವಿ ಮಾಡಿದ್ದಾರೆ.

ಪ್ರತಿವರ್ಷ ಭತ್ತದ ಫಸಲು ತಿಂದು ಹಾಳು ಮಾಡುತ್ತಿದ್ದ ಕಾಡುಕೋಣಗಳು ಈ ಬಾರಿ ನಡಲು ಸಿದ್ಧವಾಗಿದ್ದ ನೇಜಿ ಹಾಳು ಮಾಡಿವೆ. ಇನ್ನು ಮತ್ತೆ ನೇಜಿ ಮಾಡಲು ಹೆಚ್ಚು ಕಡಿಮೆ 25 ದಿನ ಬೇಕು. ಈ ರೀತಿ ಪದೇಪದೆ ಕಾಡುಕೋಣಗಳ ಹಿಂಡು ಗದ್ದೆಗೆ ದಾಳಿ ಮಾಡಿದರೆ ರೈತರು ಕೃಷಿ ಕೈಬಿಡಬೇಕಾದಿತು. ನಷ್ಟಕ್ಕೆ ಸೂಕ್ತ ಗರಿಷ್ಠ ಪರಿಹಾರ ನೀಡಬೇಕು.-ಚಂದ್ರ ಮಾರಾಳಿ ರೈತ

ಕಾಡುಕೋಣಗಳು ಗದ್ದೆಯಲ್ಲಿನ ನೇಜಿ ಹಾಳು ಮಾಡಿದರ ಕುರಿತು ಸೂಕ್ತ ದಾಖಲೆಗಳಾದ ಪಹಣಿ ಪತ್ರ, ಆಧಾರ್, ಬ್ಯಾಂಕ್ ಪಾಸ್ ಪುಸ್ತಕ, ಫೋಟೋ ಇವುಗಳನ್ನು ನೀಡಿದರೆ ಅರಣ್ಯ ಇಲಾಖೆ ಗರಿಷ್ಠ ಮೊತ್ತದ ಪರಿಹಾರ ನೀಡುತ್ತದೆ.-ಮಂಜು ಗಾಣಿಗ, ಚೇರ್ಕಾಡಿ ಉಪವಲಯ ಅರಣ್ಯ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net