ತಂಗಿಗೆ ಮೆಣಸಿನಪುಡಿ ಎರಚಿ ಮಾರಕಾಸ್ತ್ರದಿಂದ ಹೊಡೆದು ಸಾಯಿಸಿದ ಅಣ್ಣ!

death
ಸಾಂದರ್ಭಿಕ ಚಿತ್ರ
Published on

ಧಾರವಾಡ: ಅಣ್ಣ ಎಂದರೆ ಸದಾ ತಂಗಿಯ ರಕ್ಷಣೆಗೆ ಇರುವವನು ಎಂಬ ಭಾವನೆ ಇದೆ. ಆದರೆ ಇಲ್ಲಿ ಒಬ್ಬ ಅಣ್ಣನೇ ತಂಗಿಯನ್ನು ಕೊಲೆ ಮಾಡಿದ್ದಾನೆ. ಆತ ತಂಗಿಯ ಮೇಲೆ ಮೆಣಸಿನ ಪುಡಿ ಎರಚಿದ್ದಲ್ಲದೆ ಮಾರಕಾಸ್ತ್ರಗಳಿಂದ ಹೊಡೆದು ಸಾಯಿಸಿದ್ದಾನೆ.

ಧಾರವಾಡದ ನವಲಗುಂದ ಪಟ್ಟಣದ ಕಲ್ಮೇಶ್ವರ ಗುಡಿ ಬಳಿ ಈ ದುರ್ಘಟನೆ ನಡೆದಿದೆ. ಶಶಿಕಲಾ ಸುಣಗಾರ ಹತ್ಯೆಗೀಡಾದ ತಂಗಿ. ಮಹಾಂತೇಶ ಶರಣಪ್ಪನವರ ಎಂಬಾತನೇ ಕೊಲೆಪಾತಕಿ ಅಣ್ಣ. ಇಬ್ಬರ ಮಧ್ಯೆ ವಿನಾಕಾರಣ ಜಗಳವಾಗಿತ್ತು ಎನ್ನಲಾಗಿದ್ದು, ಇದು ಕೊಲೆಯೊಂದಿಗೆ ಪರ್ಯಾವಸಾನಗೊಂಡಿದೆ.

ತಂಗಿ ತವರು ಮನೆಗೆ ಬಂದಿರುವ ಸಂದರ್ಭ ಈ ಕೊಲೆ ನಡೆದಿದೆ. ಗಲಾಟೆ ಸಂದರ್ಭ ಹರಿತವಾದ ಆಯುಧದಿಂದ ಸಾಯಿಸಿದ ಅಣ್ಣ ಪರಾರಿಯಾಗಿದ್ದಾನೆ. ತಂಗಿಯ ಶವ ರಕ್ತದ ಮಡುವಿನಲ್ಲಿ ಬಿದ್ದಿದೆ. ನವಲಗುಂದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net