20ರಿಂದ ಲಾಲ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನ ಬ್ರಹ್ಮಕಲಶೋತ್ಸವ

Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಲೈಾಲ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಶ್ರೀ ರಾಮಚಂದ್ರ ಮುಖ್ಯಪ್ರಾಣ ಸಹಿತ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಏ.20ರಿಂದ 23ರವರೆಗೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಮ್ ಹೇಳಿದರು.

ದಿ.ಅವಿರಾಜ ಹೆಗ್ಡೆ, ದಿ.ಡಾ.ಉಮಾನಾಥ ಪ್ರಭು, ದಿ.ಕೆ.ವಸಂತ ಬಂಗೇರರ ಸೇವಾ ಸಾಧನೆ, ಪೀತಾಂಬರ ಹೆರಾಜೆ ಮಾರ್ಗದರ್ಶನದಲ್ಲಿ ಎರಡು ಬಾರಿ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆದಿತ್ತು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಕಳ ಶ್ರೀ ಭಾರತಿ ರಮಣ ಆಚಾರ್ಯರ ಮಾರ್ಗದರ್ಶನದಲ್ಲಿ, ಅರ್ಚಕ ರಾಘವೇಂದ್ರ ಭಾಂಗಿಣ್ಣಾಯರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಳ್ಳಲಿವೆ. ಏ.20ರಂದು ಸಂಜೆ ವೈದಿಕ ವಿಧಿ-ವಿಧಾನ, ಭಜನಾ ಕಾರ್ಯಕ್ರಮ ಬಳಿಕ ನಡೆಯುವ ಧಾರ್ಮಿಕ ಸಭೆಯಲ್ಲಿ ಸುಜಿತಾ ವಿ. ಬಂಗೇರ ಅಧ್ಯಕ್ಷತೆ ವಹಿಸುವರು. 21ರಂದು ಬೆಳಗ್ಗೆ ವೈದಿಕ ಕಾರ್ಯಕ್ರಮ, ಸಂಜೆ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡುವರು. ಸಾಂಸ್ಕೃಕ ಕಾರ್ಯಕ್ರಮದ ಅಂಗವಾಗಿ ಮೈಸೂರು ಶ್ರೀ ರಾಮಚಂದ್ರ ರಾವ್ ಅವರಿಂದ ದಾಸರ ಹಾಡು ಪ್ರಸ್ತುತಗೊಳ್ಳಲಿದೆ. 23ರಂದು ಬೆಳಗ್ಗೆ 9.24ಕ್ಕೆ ಶ್ರೀ ಮೂಲ ರಾಮ ಸಹಿತ ಶ್ರೀ ರಾಘವೇಂದ್ರ ಗುರುಗಳ ವೃಂದಾವನದಲ್ಲಿ ರಾಯರ ಮೃತ್ತಿಕಾ ಪ್ರತಿಷ್ಠಾಪನೆ ನೆರವೇರಲಿದೆ. 11.30ಕ್ಕೆ ಧಾರ್ಮಿಕ ಸಭೆಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಆಶೀರ್ವಚನ ನೀಡಲಿದ್ದಾರೆ. ಸಂಜೆ 7ರಿಂದ ಶ್ರೀ ನರೇಶ್ ಸಸಿಹಿತ್ಲು ನಿರ್ದೇಶನದಲ್ಲಿ ‘ಅಪ್ಪೆ ಭಗವತಿ’ ನಾಟಕ ಪ್ರದರ್ಶನಗೊಳ್ಳಲಿದೆ. ನಾಲ್ಕು ದಿನಗಳಲ್ಲಿ ಅನ್ನ ಸಂತರ್ಪಣೆ ಸೇವಾಕರ್ತರಾಗಿ ಸುಜಿತಾ ವಿ.ಬಂಗೇರ, ಹೇರಾಜೆ ಕುಟುಂಬಸ್ಥರು, ಮುಗುಳಿ ಜಗದೀಶ ರಾವ್ ಬೆಂಗಳೂರು, ಸುಮಂತ್‌ಕುಮಾರ್ ಜೈನ್ ಎಕ್ಸೆಲ್ ವಿದ್ಯಾಸಂಸ್ಥೆ ಗುರುವಾಯನಕೆರೆ, ಶ್ರೀ ರಾಘವೇಂದ್ರ ಪ್ರತಿಷ್ಠಾನದ ಸದಸ್ಯರು, ಕೃಷ್ಣ ಶೆಟ್ಟಿ ರಾಘವೇಂದ್ರ ನಗರ, ಶಾಂತಾ ರಾಮಕೃಷ್ಣ ಭಾಂಗಿಣ್ಣಾಯ ಕುಂಟಿನಿ ಸಹಕರಿಸಲಿದ್ದಾರೆ ಎಂದರು.

ರಾಘವೇಂದ್ರ ಪ್ರತಿಷ್ಠಾನ ಅಧ್ಯಕ್ಷ ಪೀತಾಂಬರ ಹೇರಾಜೆ, ಪ್ರತಿಷ್ಠಾನದ ಕಾರ್ಯದರ್ಶಿ ವಸಂತ ಸುವರ್ಣ, ಟ್ರಸ್ಟಿ ಪ್ರೊ.ಕೃಷ್ಣಪ್ಪ ಪೂಜಾರಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕುಶಾಲಪ್ಪ ಗೌಡ ಶಿರ್ಲಾಲ್, ಆರ್ಥಿಕ ಸಮಿತಿ ಸಂಚಾಲಕ ಸಂತೋಷ್ ಕುಮಾರ್ ಲಾಯಿಲ, ಪ್ರತಿಷ್ಠಾನ ಉಪಾಧ್ಯಕ್ಷ ಮಹಾಬಲ ಶೆಟ್ಟಿ, ಟ್ರಸ್ಟಿ ಸೋಮೇಗೌಡ, ಹೊರೆಕಾಣಿಕೆ ಸಂಚಾಲಕ ಪ್ರವೀಣ್ ಫರ್ನಾಂಡಿಸ್ ಉಪಸ್ಥಿತರಿದ್ದರು.

ಭಜನೆ, ಧಾರ್ಮಿಕ ಸಭಾ ಕಾರ್ಯಕ್ರಮ

ಏ.22ರಂದು ಬೆಳಗ್ಗೆ ಧಾರ್ಮಿಕ ವಿಧಿ, ಭಜನಾ ಕಾರ್ಯಕ್ರಮ, ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನ ಮಠಾಧೀಶ ಮಹಾ ಮಂಡಲೇಶ್ವರ 108 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಆರ್ಶೀವಚನ ನೀಡಲಿದ್ದಾರೆ. ಸಚಿವ ಮಂಕಾಳ ಎಸ್.ವೈದ್ಯ, ನಟ ವಿಜಯ ರಾಘವೇಂದ್ರ ಮೊದಲಾದವರು ಭಾಗವಹಿಸಲಿದ್ದಾರೆ. ರಾತ್ರಿ ಶ್ರೀದೇವಿ ಸಚಿನ್ ಮುಂಡ್ರುಪಾಡಿ ಧರ್ಮಸ್ಥಳ ಅವರ ನಿನಾದ ಕ್ಲಾಸಿಕಲ್ಸ್ ವತಿಯಿಂದ ಭಕ್ತಿ ಗೀತಾ ಕಾರ್ಯಕ್ರಮ ನೆರವೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net