ಕರೆಂಟ್​ ಶಾಕ್​ಗೆ ಮತ್ತೊಬ್ಬ ಬಾಲಕ ಬಲಿ; ನಿನ್ನೆ ಆಟ ಆಡಲು ಹೋಗಿದ್ದ ಬಾಲಕ ಇಂದು ಶವವಾಗಿ ಪತ್ತೆ

Boy
Published on

ಬೆಂಗಳೂರು: ನಿನ್ನೆಯಷ್ಟೇ ಬಾಲಕನೊಬ್ಬ ಕರೆಂಟ್​ ಶಾಕ್​ಗೆ ಬಲಿಯಾಗಿದ್ದು, ಅದರ ಬೆನ್ನಿಗೆ ಇನ್ನೊಬ್ಬ ಬಾಲಕನೂ ಕರೆಂಟ್ ಶಾಕ್​ನಿಂದಾಗಿ ಸಾವಿಗೀಡಾಗಿದ್ದು, ಇಂದು ಶವ ಪತ್ತೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಸಾದರಹಳ್ಳಿಯಲ್ಲಿ ಈ ದುರಂತ ಸಂಭವಿಸಿದೆ.

ಇಲ್ಲಿನ ಗ್ರಾನೈಟ್​ ಕಟಿಂಗ್ ಫ್ಯಾಕ್ಟರಿಯವರು ಅವೈಜ್ಞಾನಿಕವಾಗಿ‌ ಎಳೆದುಕೊಂಡಿದ್ದ ವಿದ್ಯುತ್ ತಂತಿಯೇ ಇಷ್ಟೆಲ್ಲ ಅವಾಂತರಕ್ಕೆ ಕಾರಣ. ನಿನ್ನೆ ಆಟ ಆಡಲು ಎಂದು ಹೋಗಿದ್ದ ಏಳು ವರ್ಷದ ಬಾಲಕ ಗ್ರಾನೈಟ್​ ಕಟಿಂಗ್ ಮಿಷನ್​ಗೆ ಬಳಸಿದ್ದ ಹೈ ಪವರ್ ತಂತಿಯ ಸ್ಪರ್ಶಕ್ಕೆ ಒಳಗಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಪ್ರಕರಣ ಇಂದು ಬೆಳಗ್ಗೆ ಗಮನಕ್ಕೆ ಬಂದಿದೆ.

ಸಾವಿಗೀಡಾಗಿರುವುದು ಸ್ಥಳೀಯವಾಗಿ ಕೆಲಸ ಮಾಡುತ್ತಿದ್ದ ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕ ದಂಪತಿಯ ಪುತ್ರ. ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net