ಪುಸ್ತಕ ಅವಲೋಕನಾ ಕಾರ್ಯಕ್ರಮ

New Project (11)
Published on

ಕಾಸರಗೋಡು: ಪತ್ರಕರ್ತ ಹಜ್ ಶಾಫಿ ತೆರುವತ್ ಯಾತ್ರಿಕರ ಅನುಕೂಲಕ್ಕಾಗಿ ಬರೆದ ಹಜ್ ಮತ್ತು ಮೆಕ್ಕಾ ಮದೀನಾಗಳ ವೃತ್ತಾಂತಗಳನ್ನೊಳಗೊಂಡ ‘ಪವಿತ್ರ ಭೂಮಿಯ ಮೂಲಕ ಮೆಕ್ಕಾ-ಮದೀನಾ’ ಎಂಬ ಪುಸ್ತಕದ ಕುರಿತು ಅವಲೋಕನಾ ಕಾರ್ಯಕ್ರಮ ಮೊಗ್ರಾಲಿನ ರಾಷ್ಟ್ರೀಯ ವೇದಿ ವತಿಯಿಂದ ಜರುಗಿತು.

ವಾಗ್ಮಿ ಎಂ.ಎ.ಅಬ್ದುಲ್ ರಹಮಾನ್ ಪುಸ್ತಕದ ಬಗ್ಗೆ ಮಾತನಾಡಿ, ಹಜ್ ಸಮಯದಲ್ಲಿ ಇಂತಹ ಪುಸ್ತಕ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದ್ದು, ಪುಸ್ತಕದಲ್ಲಿನ ಮಾಹಿತಿ ಯಾತ್ರೆಗೆ ಸಹಾಯವಾಗುತ್ತದೆ ಎಂದರು.

ರಾಷ್ಟ್ರೀಯ ವೇದಿಕೆ ಅಧ್ಯಕ್ಷ ಟಿ.ಕೆ.ಅನ್ವರ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ವೇದಿ ಯುಎಇ ಸಮಿತಿ ಮಾಜಿ ಉಪಾಧ್ಯಕ್ಷ ಎ.ಕೆ.ಶಂಸುದ್ದೀನ್, ಶಾಫಿ ತೆರುವತ್ ಪುಸ್ತಕ ಪಡೆದುಕೊಂಡರು. ಉದ್ಯಮಿ ಎಂ.ಎ.ಹಮೀದ್, ಹಮೀದ್ ಪೆರ್ವಾಡ್, ಪಿ.ಟಿ.ಎ. ಅಧ್ಯಕ್ಷ ಅಶ್ರಫ್ ಪೆರ್ವಾಡ್, ಮುಹಮ್ಮದ್ ಅಬ್ಕೋ, ಬಿ.ಎ.ಮುಹಮ್ಮದ್ ಕುಞಿ, ಮುಹಮ್ಮದ್ ಅಶ್ರಫ್ ಸಾಹಿಬ್, ಖಾದರ್‌ಮೊಗ್ರಾಲ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಎಂ.ಎ.ಮೂಸಾ ಸ್ವಾಗತಿಸಿದರು. ಕೋಶಾಧಿಕಾರಿ ಪಿ.ಎಂ.ಮುಹಮ್ಮದ್ ಕುಞಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net