ಗ್ರಂಥಾಲಯಗಳಿಗೆ ಪುಸ್ತಕ ವಿತರಣೆ

book
ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಪ್ರಾಂಶುಪಾಲ ವಾಸುದೇವ ಕೊಲ್ಪೆ ಮುಖಾಂತರ ಪುಸ್ತಕವನ್ನು ಶಿವಪ್ರಸಾದ್ ಮೈಲೇರಿ ಹಸ್ತಾಂತರಿಸಿದರು.
Published on

ಕಡಬ: ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ವತಿಯಿಂದ, ಕಡಬ ತಾಲೂಕಿನ ಕಡಬ ವಲಯದ ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ಡಾ.ಬಿ.ಎ.ವಿವೇಕ ರೈ ಬರೆದಿರುವ ಬದುಕು ಕಟ್ಟಿದ ಬಗೆಗಳು ಎಂಬ ಪುಸ್ತಕವನ್ನು ವಿತರಿಸಲಾಯಿತು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ವಲಯದ ಕಡಬ ಸರ್ಕಾರಿ ಪದವಿಪೂರ್ವ ಕಾಲೇಜು, ಸೇಂಟ್ ಜೋಕಿಮ್ಸ್ ಪದವಿಪೂರ್ವ ಕಾಲೇಜು ಕಡಬ, ಬೆಥನಿ ಪದವಿಪೂರ್ವ ಕಾಲೇಜು ನೂಜಿಬಾಳ್ತಿಲ, ಸರ್ಕಾರಿ ಪ್ರೌಢಶಾಲೆ ಕಡಬ, ಸೇಂಟ್ ಆ್ಯನ್ಸ್ ಪ್ರೌಢಶಾಲೆ ಕಡಬ, ಸರಸ್ವತಿ ಪ್ರೌಢಶಾಲೆ ಹನುಮಾನ್ ನಗರ ಶಾಲೆಗಳಿಗೆ ಪುಸ್ತಕ ವಿತರಿಸಲಾಯಿತು.

ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ, ತಾಲೂಕು ಯುವಜನ ಒಕ್ಕೂಟ ಅಧ್ಯಕ್ಷ ಶಿವಪ್ರಸಾದ್ ರೈ ಮೈಲೇರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಮೊದಲಾದವರು ಪುಸ್ತಕ ಹಸ್ತಾಂತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net