ಗುರುಪುರದಲ್ಲಿ ಹಿಂದು ಸಂಘಟನೆಗಳಿಂದ ರಕ್ತದಾನ, ಉಚಿತ ಆರೋಗ್ಯ ತಪಾಸಣೆ ಶಿಬಿರ

web - gurupura rakthadhana
ಗುರುಪುರ ಕುಕ್ಕುದಕಟ್ಟೆಯ ವೈದ್ಯನಾಥ ಸಮುದಾಯ ಭವನದಲ್ಲಿ ಭಾನುವಾರ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಶಾಸಕ ಡಾ.ಭರತ್ ಶೆಟ್ಟಿ ಪಾಲ್ಗೊಂಡರು. ವೈದ್ಯನಾಥ ದೈವಸ್ಥಾನದ ಪಾತ್ರಿಗಳಾದ ಚಂದ್ರಹಾಸ ಕೌಡೂರು ಮತ್ತು ತನಿಯಪ್ಪ ಪೂಜಾರಿ, ವಿಹಿಂಪ ಜಿಲ್ಲಾ ಪ್ರಮುಖರಾದ ವಸಂತ ಗುರುಪುರ ಮೊದಲಾದವರಿದ್ದರು.
Published on

ಗುರುಪುರ: ಇಲ್ಲಿನ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ವಜ್ರದೇಹಿ ಘಟಕ, ಮಂಗಳೂರು ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ, ಲಯನ್ಸ್ ಕ್ಲಬ್ ಮಂಗಳೂರು ಸ್ಮಾರ್ಟ್ ಸಿಟಿ, ಎಸ್‌ಸಿಐ ಮಂಗಳೂರು ಬಿಗ್ ಸಿಟಿ ಸಹಯೋಗದಲ್ಲಿ ಗುರುಪುರ ಕುಕ್ಕುದಕಟ್ಟೆಯ ವೈದ್ಯನಾಥ ಸಮುದಾಯ ಭವನದಲ್ಲಿ ಭಾನುವಾರ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಈ ಮಧ್ಯೆ ಆಯೋಜಿಸಲಾದ ಸರಳ ಕಾರ್ಯಕ್ರಮದಲ್ಲಿ 15 ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಿಸಲಾಯಿತು. ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ, ವೈದ್ಯನಾಥ ದೈವಸ್ಥಾನದ ಪಾತ್ರಿಗಳಾದ ಚಂದ್ರಹಾಸ ಕೌಡೂರು ಮತ್ತು ತನಿಯಪ್ಪ ಪೂಜಾರಿ, ವಿಹಿಂಪ ಜಿಲ್ಲಾ ಪ್ರಮುಖರಾದ ವಸಂತ ಗುರುಪುರ, ದೀಪಕ್ ಮರೋಳಿ, ಚಾಮುಂಡೇಶ್ವರೀ ಕ್ಷೇತ್ರದ ಶಿವಸ್ವರೂಪ ಚೈತನ್ಯ, ಗುರುಪುರ ಪಂಚಾಯಿತಿ ಸದಸ್ಯರಾದ ಜಿ.ಎಂ. ಉದಯ ಭಟ್, ಸಚಿನ್ ಅಡಪ, ಸುನೀಲ್ ಕುಮಾರ್, ನಳಿನಿ ಶೆಟ್ಟಿ, ಗುರುಪುರ ಪ್ರಖಂಡದ ನವೀನ್ ಆದ್ಯಪಾಡಿ, ಅಧ್ಯಕ್ಷ ನಾಗೇಶ್ ಕೊಟ್ಟಾರಿ, ಮಾತೃಶಕ್ತಿಯ ಹೇಮಾ ಪಾಲನ್, ಸಂಯೋಜಕ ಹೇಮಚಂದ್ರ, ಲಯನ್ಸ್ ಕ್ಲಬ್‌ನ ಹರಿಪ್ರಸಾದ್ ರೈ ಹಾಗೂ ಎ.ಜೆ. ಆಸ್ಪತ್ರೆಯ ವೈದ್ಯರು ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net