

ಮೈಸೂರು: ರೂಪಾಂತರಿ ಕರೊನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ರಾತ್ರಿ ಕರ್ಫ್ಯೂ ನಿರ್ಧಾರವನ್ನು ಬಿಜೆಪಿ ಎಂಎಲ್ಸಿ ಎಚ್. ವಿಶ್ವನಾಥ್ ಟೀಕಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನೈಟ್ ಕರ್ಫ್ಯೂ ಬಗ್ಗೆ ಜನಾಭಿಪ್ರಾಯ ಬರುತ್ತಿದೆ. ಸರ್ಕಾರದ ಪರವಾಗಿ ನಾನು ಸರಿಯಿದೆ ಎಂದು ಹೇಳಬಹುದು. ಆದರೆ ನಾಡಿನ ಜನರು ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ನೈಟ್ ಕರ್ಫ್ಯೂ ವಿಚಾರದಲ್ಲಿ ಪುನರ್ ವಿಮರ್ಶೆ ಮಾಡಬೇಕಿದೆ ಎಂದರು.
ಹೊಸವರ್ಷದ ಆಚರಣೆಗೆ ಜನ ಸೇರುತ್ತಾರೆ. ಡಿಸೆಂಬರ್ 30 ಮತ್ತು 31ರಂದು ನೈಟ್ ಕರ್ಫ್ಯೂ ಮಾಡಿ. ಆದರೆ,
ಶಾಲೆಗಳ ಆರಂಭ ಕುರಿತು ಮಾತನಾಡಿದ ಅವರು ಉತ್ತರಾಯಣ ಪುಣ್ಯ ಕಾಲದ ನಂತರ ಶಾಲೆಗಳನ್ನು ಆರಂಭ ಮಾಡಿ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಮಾತು ವಾಪಸ್ಸು ಪಡೆಯುವ ಕಾಯಿಲೆ ಇದ್ದಂತೆ ಕಾಣುತ್ತಿದೆ. ಸುರೇಶ್ ಕುಮಾರ್ ಆದೇಶ ಮಾಡುತ್ತಾರೆ ವಾಪಸ್ಸು ಪಡೆಯುತ್ತಾರೆ. ಸದ್ಯ ಕರೊನಾ ಎರಡನೇ ಅಲೆ ಜೋರಾಗಿದೆ. ಮಕ್ಕಳ ಜೀವದ ಜತೆ ಚೆಲ್ಲಾಟ ಸರಿಯಲ್ಲ ಎಂದು ಎಚ್ಚರಿಸಿದರು.
ಮಕ್ಕಳು ಮನೆಯ ಆಸ್ತಿ. ಒಂದನೇ ತಾರೀಖಿನಿಂದ ಶಾಲೆ ಬೇಡ. ಸುರೇಶ್ ಕುಮಾರ್ ಹೇಳಿದ್ದು ಯಾವುದಾದಾರೂ ಒಂದು ಆಗಿದೆಯಾ? ಪೋಷಕರನ್ನು ಮಕ್ಕಳನ್ನು ಆತಂಕಕ್ಕೀಡು ಮಾಡಬೇಡಿ. ಸಂಕ್ರಾಂತಿ ಆದ ಮೇಲೆ ಶಾಲೆ ಆರಂಭಿಸಿ ಈಗ ಬೇಡ. ಮಕ್ಕಳೆ ನಮ್ಮ ಜೀವ, ನಮ್ಮ ಆಸ್ತಿ. ಎರಡನೇ ಅಲೆ ಬಗ್ಗೆ ಆತಂಕ ಇದೆ. ಯಾರು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಹೀಗಾಗಿ ಜನವರಿ 1 ರಿಂದ ಶಾಲೆ ಆರಂಭ ಬೇಡವೆಂದರು. (ದಿಗ್ವಿಜಯ ನ್ಯೂಸ್)