More

    ಗಾನ ಗಂಧರ್ವನಿಗೆ ಹೀಗೊಂದು ನಮನ: 339 ಕೆ.ಜಿ ತೂಕದ ಚಾಕೊಲೇಟ್ ಪ್ರತಿಮೆ

    ಪುದುಚೇರಿ: ಸಂಗೀತ ಲೋಕ ಕಂಡ ಅಪರೂಪದ ಗಾಯಕ, ಗಾನ ಗಂಧರ್ವ ಎಸ್​.ಪಿ.ಬಾಲಸುಬ್ರಹ್ಮಣ್ಯಂ ಅವರು ನಿಧನರಾಗಿ ನಾಳೆಗೆ (ಡಿ.25) ಮೂರು ತಿಂಗಳು ಕಳೆದಿದೆ. ಕರೊನಾ ವೈರಸ್​ನಿಂದ ಚೇತರಿಸಿಕೊಂಡರೂ ನಂತರ ಕಳೆದ ಸೆಪ್ಟೆಂಬರ್​ 25ರಂದು ಕೊನೆಯುಸಿರೆಳೆದಿದ್ದಾರೆ.

    ಇವರಿಗಾಗಿ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಲು ಬಯಸಿದ್ದ ಪುದುಚೇರಿಯಲ್ಲಿ ಅಪೋಪುಲರ್ ಬೇಕರಿಯು ಎಸ್​ಪಿಬಿ ಅವರ ಚಾಕೊಲೇಟ್ ಪ್ರತಿಮೆ ಮಾಡಿದೆ. ಅತ್ಯಂತ ಸುಂದರವಾದ ಪ್ರತಿಮೆ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    339 ಕಿಲೋ ತೂಗುವ ಈ ಪ್ರತಿಮೆಯು ಸಂಪೂರ್ಣ ಚಾಕಒಲೇಟ್​ಮಯವಾಗಿದ್ದು, 5.8 ಅಡಿ ಎತ್ತರವಿದೆ. ಜುಕಾ ಚಾಕೊಲೇಟ್ ಕೆಫೆಯಲ್ಲಿ ಕೆಲಸ ಮಾಡುತ್ತಿರುವ ಮುಖ್ಯ ಬಾಣಸಿಗ ರಾಜೇಂದ್ರನ್ ಅವರ ನೇತೃತ್ವದಲ್ಲಿ ಈ ಪ್ರತಿಮೆಯನ್ನು ರಚಿಸಲಾಗಿದೆ. ಈ ಪ್ರತಿಮೆ ರಚಿಸಲು ತಮಗೆ 161 ಗಂಟೆಗಳು ಹಿಡಿದಿರುವುದಾಗಿ ತಂಡ ಹೇಳಿದೆ.

    ಇದೇ ತಂಡ, ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಮತ್ತು ಚಲನಚಿತ್ರ ನಟ ರಜನಿಕಾಂತ್ ಅವರ ಚಾಕೊಲೇಟ್ ಪ್ರತಿಮೆಗಳನ್ನು ತಯಾರಿಸಿ ಹೆಸರು ಮಾಡಿದೆ.

    ಈ ನಡುವೆಯೇ ಕೊಯಮತ್ತೂರಿನಲ್ಲಿ ಬಾಲಸುಬ್ರಹ್ಮಣ್ಯಂ ಅವರ ಹೆಸರಿನಲ್ಲಿ ಮಿನಿ ಫಾರೆಸ್ಟ್​ ನಿರ್ಮಿಸಲಾಗಿದೆ. ಎಸ್​ಪಿಬಿಯವರು ಚಲನಚಿತ್ರಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸುವ ಹಿನ್ನೆಲೆಯಲ್ಲಿ, ಸಿರತುಲಿ ಎಂಬ ಸ್ವಯಂಸೇವಾ ಸಂಸ್ಥೆಯು ಇದನ್ನು ಆರಂಭಿಸಿದೆ. ಇದರಲ್ಲಿ ಹಲವಾರು ಗಿಡಗಳನ್ನು ನೆಡಲಾಗಿದೆ.

    ಹಲಸು, ಮಾವು, ತೇಗ, ರೋಸ್‌ವುಡ್, ಬಿದಿರು, ಮಹೋಗಾನಿ ಸೇರಿಂದ ಒಟ್ಟೂ 9 ವಿವಿಧ ಬಗೆಯ ಹಲವಾರು ಗಿಡಗಳನ್ನು ನೆಡುವ ಮೂಲಕ ಅಗಲಿದ ಗಾಯಕನಿಗೆ ನಮನ ಸಲ್ಲಿಸಲಾಗಿದೆ. ಕಳೆದ ಅಕ್ಟೋಬರ್​ 15ರಂದು ಇದನ್ನು ಬಾಲಸುಬ್ರಹ್ಮಣ್ಯಂ ಅವರ ಪುತ್ರ ಪುತ್ರ ಎಸ್‌ಪಿ ಚರಣ್ ಮತ್ತು ಸಹೋದರಿ ಎಸ್‌ಪಿ ಶೈಲಜಾ ವಿಡಿಯೋ ಕಾನ್ಫರೆನ್ಸ್​ ಮೂಲಕ ಉದ್ಘಾಟಿಸಿದರು.

    ಅಮ್ಮನಿಗಾಗಿ ಪ್ರೀತಿ ಬಲಿಕೊಟ್ಟು ಮಾವನಮಗನ ಮದ್ವೆಯಾಗಿ ಜೀವನವೇ ನರಕವಾಗಿದೆ- ಏನು ಮಾಡಲಿ?

    ಎದೆಯ ಮೇಲೆ ಪುರುಷರಂತೆ ಕೂದಲುಬೆಳೆಯುತ್ತಿದೆ- ಮದುವೆಯಾಗಲು ಭಯವಾಗುತ್ತಿದೆ; ಪರಿಹಾರವೇನು?

    ಹನಿಮೂನ್​ನಲ್ಲೂ ದೂರವಿದ್ದ, ಔಷಧ ಕೊಟ್ರೂ ಹತ್ರ ಬರಲಿಲ್ಲ- ಪತಿಯ ವಿರುದ್ಧ ಪೊಲೀಸರಲ್ಲಿ ದೂರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts