More

    ಪತ್ನಿಗೆ ಮಕ್ಕಳಾಗದಿದ್ದರೆ ಮತ್ತೊಂದು ಮದುವೆಯಾಗಬಹುದಾ? ಪತಿಯ ಪ್ರಶ್ನೆಗೆ ವಕೀಲೆ ನೀಡಿರುವ ಉತ್ತರ ಇಲ್ಲಿದೆ ನೋಡಿ…

    ಪತ್ನಿಗೆ ಮಕ್ಕಳಾಗದಿದ್ದರೆ ಮತ್ತೊಂದು ಮದುವೆಯಾಗಬಹುದಾ? ಪತಿಯ ಪ್ರಶ್ನೆಗೆ ವಕೀಲೆ ನೀಡಿರುವ ಉತ್ತರ ಇಲ್ಲಿದೆ ನೋಡಿ... ಮದುವೆ ಆಗಿ 9 ವರ್ಷ ಆಯಿತು. ಪತ್ನಿಗೆ ಮಕ್ಕಳಾಗುವುದಿಲ್ಲ ಎಂದುಪರೀಕ್ಷೆಗಳಿಂದ ತಿಳಿಯಿತು. ನನ್ನ ತಾಯಿ ನನಗೆ ಇನ್ನೊಂದು ಮದುವೆ ಮಾಡಬೇಕೆಂದಿದ್ದಾರೆ. ಆದರೆ ಇದಕ್ಕೆ ನನ್ನ ಪತ್ನಿ ಮತ್ತು ಅವಳ ಮನೆಯವರು ತೊಂದರೆ ಮಾಡುತ್ತಿದ್ದಾರೆ. ನಾನು ಇನ್ನೊಂದು ಮದುವೆ ಆದರೆ ಹೇಗೆ? ಈ ಸಮಸ್ಯೆಗೆ ಪರಿಹಾರ ಏನಿದೆ?

    ಉತ್ತರ: ನಿಮ್ಮ ಪತ್ನಿಯಿಂದ ವಿಚ್ಛೇದನ ಪಡೆಯದೆ ಇನ್ನೊಂದು ಮದುವೆ ಆದರೆ ಎರಡನೇ ಮದುವೆಯಾಗಿ ಅಪರಾಧ ಮಾಡಿದ ಕಾರಣ ನಿಮಗೆ ಶಿಕ್ಷೆ ಆಗುತ್ತದೆ.

    ಕೇವಲ ಮಕ್ಕಳಾಗಲಿಲ್ಲ ಎನ್ನುವ ಕಾರಣದಿಂದ ಒಂಬತ್ತು ವರ್ಷದ ದಾಂಪತ್ಯ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ. ಯಾವುದಾದರೂ ಮಗುವನ್ನು ದತ್ತಕಕ್ಕೆ ಪಡೆಯಬಹುದೇ ಎಂದು ಯೋಚಿಸಿ. ತಂದೆ ತಾಯಿ ಇಲ್ಲದ ಅನಾಥ ಮಗುವಿಗೆ ಒಂದು ನೆಲೆ ಕೊಟ್ಟ ಸಮಾಧಾನವೂ ನಿಮಗೆ ಆಗುತ್ತದೆ.

    ಒಂದು ವೇಳೆ ನಿಮ್ಮಲ್ಲಿಯೇ ವೀರ್ಯಾಣು ಕೊರತೆ ಅಥವಾ ಇನ್ನಾವುದೋ ನ್ಯೂನ್ಯತೆ ಇದ್ದು ಮಕ್ಕಳಾಗದಿದ್ದರೆ ಆಗ ನಿಮ್ಮ ಪತ್ನಿ ನಿಮ್ಮಿಂದ ವಿಚ್ಛೇದನ ಬಯಸಿ ಇನ್ನೊಂದು ಮದುವೆಯಾಗುತ್ತಿದ್ದರೆ ನಿಮಗೆ ಹೇಗೆ ಅನ್ನಿಸುತ್ತಿತ್ತು ಎನ್ನುವುದನ್ನು ಒಂದು ಕ್ಷಣ ಯೋಚಿಸಿ. ಇನ್ನೊಂದು ಮದುವೆ ಆದಮೇಲೆ ಆಗಲೂ ನಿಮಗೆ ಮಕ್ಕಳಾಗದಿದ್ದರೆ ಏನು ಮಾಡುತ್ತೀರಿ ಎನ್ನುವುದನ್ನೂ ಯೋಚಿಸಿ.

    ನಿಮ್ಮ ಪತ್ನಿಯಿಂದ ನಿಮಗೆ ಕ್ರೂರತೆ, ಹಿಂಸೆ ಆಗಿದ್ದರೆ ಮಾತ್ರ ನೀವು ಆಕೆಯ ವಿರುದ್ಧ ವಿಚ್ಛೇದನದ ಪ್ರಕರಣ ಹಾಕಬಹುದು. ನ್ಯಾಯಾಲಯದಿಂದ ವಿಚ್ಛೇದನದ ಆದೇಶ ಪಡೆದ ನಂತರವೇ ನೀವು ಇನ್ನೊಂದು ಮದುವೆ ಆಗಬಹುದು. ಅಲ್ಲಿಯವರೆಗೆ ಆಗುವಂತಿಲ್ಲ.

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ   https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ಸಂಸಾರ ಮಾಡಲು ಗಂಡ ಒಪ್ಪದಿದ್ದರೆ ಏನಾದರೂ ಪರ್ಯಾಯ ಮಾರ್ಗಗಳಿವೆಯೆ?

    ನಿನ್ನ ಜತೆ ಮಲಗಲ್ಲ- ಡಿವೋರ್ಸೂ ಕೊಡಲ್ಲ ಎಂದರೆ ಕಾನೂನಿನಲ್ಲಿ ಪತಿ ಏನು ಮಾಡಬಹುದು?

    ಡಿವೋರ್ಸ್​ ಆದ ಕೆಲ ವರ್ಷಗಳ ನಂತರ ಜೀವನಾಂಶ ಕೇಳುವ ಅವಕಾಶವಿದೆಯೆ?

    ವಿಚ್ಛೇದನ ಕೊಟ್ಟ ನಂತರ ದಿಢೀರ್​ ಮರುಮದುವೆಯಾಗಲು ಬರುವುದಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts