ಮಳೆ-ಗಾಳಿಗೆ ಕಳಚಿ ಹೋಯ್ತು ಬಿಜೆಪಿ ಕಾರ್ಯಕಾರಿಣಿ ಪ್ರವೇಶದ್ವಾರ, ಕುಸಿಯುವ ಭೀತಿಯಲ್ಲಿ ಮತ್ತೊಂದು ಆರ್ಚ್..

BJP
Published on

ವಿಜಯನಗರ: ರಾಜ್ಯಾದ್ಯಾಂತ ಭಾರಿ ಪ್ರಮಾಣದಲ್ಲಿ ಗಾಳಿ-ಮಳೆ ಆಗುತ್ತಿದ್ದು, ಗುಡುಗು-ಸಿಡಿಲಿನ ಅಬ್ಬರವೂ ಕೇಳಿ ಬರುತ್ತಿದೆ. ಪರಿಣಾಮವಾಗಿ ರಾಜ್ಯದ ಹಲವೆಡೆ ಮಳೆ ಅವಾಂತರ ಸೃಷ್ಟಿಯಾಗಿದೆ.

ಅದರಲ್ಲೂ ಭಾರತೀಯ ಜನತಾ ಪಕ್ಷದ ಕಾರ್ಯಕಾರಿಣಿ ಸಭೆಗಾಗಿ ವಿಜಯನಗರದ ಹೊಸಪೇಟೆಯಲ್ಲಿ ಅಳವಡಿಸಿದ್ದ ಪ್ರಮುಖ ಪ್ರವೇಶ ದ್ವಾರ ಕಳಚಿ ಬಿದ್ದಿದೆ‌. ಜೊತೆಗೆ ಕಾರ್ಯಕಾರಿಣಿಗೆ ಶುಭ ಕೋರಿ ಹಲವೆಡೆ ಅಳವಡಿಸಿದ್ದ ಕಟೌಟ್‌ಗಳು ಮಳೆ-ಗಾಳಿಯ ಅಬ್ಬರಕ್ಕೆ ಕಿತ್ತು ಹಾರಿ ಹೋಗುತ್ತಿವೆ.

ಅಲ್ಲದೆ ಮುಖ್ಯ ವೇದಿಕೆಯ ದೊಡ್ಡ ಕಟೌಟ್ ಬಿಳುವ ಹಂತಕ್ಕೆ ಬಂದಿದೆ. ಮಳೆಗಿಂತ ಗಾಳಿ ಹೆಚ್ಚಾದ ಹಿನ್ನಲೆಯಲ್ಲಿ ಅಂಜನಾ ದೇವಿ ಮಾಹಾದ್ವಾರದ ವೇದಿಕೆ ಆರ್ಚ್ ಕೂಡ ಕುಸಿಯುವ ಭೀತಿ ಉಂಟಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net