ನಗರ ಸಾರಿಗೆ ಬಸ್ ಸೇವೆ ಆರಂಭಿಸಿ

BJP-2
Published on

ಯಾದಗಿರಿ: ನಗರದಲ್ಲಿನ ಜನರ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ನಗರಸಾರಿಗೆ ಬಸ್ ಕಾರ್ಯಾಚರಣೆ ಆರಂಭಿಸುವಂತೆ ಒತ್ತಾಯಿಸಿ ಬಿಜೆಪಿ ನಗರ ಮಂಡಲದ ವತಿಯಿಂದ ಬುಧವಾರ ಇಲ್ಲಿನ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಮಂಡಲ ಉಪಾಧ್ಯಕ್ಷ ದೀಪಕ ಪೊದ್ದಾರ ಮಾತನಾಡಿ, ಕೋವಿಡ್-19 ನಿಯಂತ್ರಣದ ಹಿನ್ನೆಲೆಯಲ್ಲಿ ಕಳೆದ 8 ತಿಂಗಳಿನಿಂದ ನಗರಸಾರಿಗೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಸಧ್ಯ ಕರೊನಾ ನಿಯಂತ್ರಣದಲ್ಲಿದ್ದು, ಜನರ ಅನುಕೂಲಕ್ಕಾಗಿ ಬಸ್ ಸೇವೆ ಆರಂಭಿಸುವ ಅವಶ್ಯಕತೆ ಇದೆ ಎಂದು ಮನವರಿಕೆ ಮಾಡಿದರು.

ಸಿಟಿಬಸ್ ಸಂಚಾರ ಸ್ಥಗಿತಗೊಳಿಸಿದ ಕಾರಣ ಸಾಮಾನ್ಯ ವರ್ಗದ ಜನತೆ ದುಬಾರಿ ಬಾಡಿಗೆ ನೀಡಿ ಆಟೋರಿಕ್ಷಾದಲ್ಲಿ ಪ್ರಯಾಣ ಮಾಡುವಂತಾಗಿದೆ. ಹಣ ಇಲ್ಲದವರು ಕಾಲ್ನಡಿಗೆಯಲ್ಲೇ ಮೈಲಿಗಟ್ಟಲೇ ದೂರ ನಡೆದುಕೊಂಡು ಹೋಗುತ್ತಿದ್ದಾರೆ. ನಗರದಿಂದ ಜಿಲ್ಲಾಡಳಿತ ಭವನ, ಎಸ್.ಪಿ.ಕಚೇರಿ, ಕೇಂದ್ರ ಬಸ್ ನಿಲ್ದಾಣ ದೂರ ಇರುವುದರಿಂದ ಜನತೆಗೆ ತೊಂದರೆಯಾಗುತ್ತಿದೆ ಎಂದರು.

ಕಾರಣ ಕೂಡಲೇ ಗಿರಿನಗರ ಸಾರಿಗೆಯನ್ನು ಆರಂಭಿಸಬೇಕು. ಬೆಳಗ್ಗೆ 6 ರಿಂದ 10ರ ವರಗೆ ನಗರದ ಗಾಂಧಿವೃತ್ತ, ಮೈಲಾಪುರ ಅಗಸಿ, ಗಂಜ್, ಹಾಗೂ ನೂತನ ಸರ್ಕಾರಿ, ಆಸ್ಪತ್ರೆ, ವಿಧಾನಸೌಧ ಕಡೆಗಳಲ್ಲಿ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು. ಮಂಡಲ ಅಧ್ಯಕ್ಷ ಸುರೇಶ್ ಅಂಬಿಗರ, ಮಲ್ಲು ನಾಟೇಕರ, ಸಾಬಣ್ಣ ಕಡ್ಡಿ, ಭೀಮಶಂಕರ, ಬಿ.ಶ್ರೀರಾಮುಲು ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಅಶೋಕ ಮುದ್ನಾಳ್ ಇದ್ದರು.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net