ಬಂಟ್ವಾಳ: ತುಂಬೆ ಗ್ರಾಮದ ವಳವೂರು ನಡಿಬೆಟ್ಟು ನಿವಾಸಿ ಕಾರ್ತಿಕ್ ಎಂಬುವರು ಮೇಯಲು ಬಿಟ್ಟ ದನವನ್ನು ಕಿಡಿಗೇಡಿಗಳು ಸ್ಥಳದಲ್ಲೇ ಕೊಂದು ಪರಾರಿಯಾದ ಕೃತ್ಯಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಬೇಕೆಂದು ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲು ನೇತೃತ್ವದ ನಿಯೋಗ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಗೆ ಮನವಿ ಸಲ್ಲಿಸಿತು.
ಮಂಡಲ ಉಪಾಧ್ಯಕ್ಷ ಮನೋಜ್ ಆಚಾರ್ಯ ನಾಣ್ಯ, ಹಿಂದುಳಿದ ಮೋರ್ಚಾ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ, ಪುದು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುಕೇಶ್ ಶೆಟ್ಟಿ ತೇವು, ಪ್ರಧಾನ ಕಾರ್ಯದರ್ಶಿ ರೂಪೇಶ್ ಜ್ಯೋತಿಗುಡ್ಡೆ, ಮಂಗಳೂರು ಮಂಡಲ ರೈತ ಮೋರ್ಚಾದ ಅಧ್ಯಕ್ಷ ಪದ್ಮನಾಭ ಗಟ್ಟಿ, ಮಂಡಲ ಉಪಾಧ್ಯಕ್ಷ ಹುಕ್ರಪ್ಪ ನಾಯ್ಕ, ಮಂಗಳೂರು ಮಂಡಲ ಯುವ ಮೋರ್ಚಾ ಅಧ್ಯಕ್ಷ ಮುರಳಿ ಕೊಣಾಜೆ, ತುಂಬೆ ಶಕ್ತಿ ಕೇಂದ್ರ ಅಧ್ಯಕ್ಷ ಸುಶಾನ್ ಆಚಾರ್ಯ, ತುಂಬೆ ಗ್ರಾಪಂ ಸದಸ್ಯರಾದ ಕಿಶೋರ್ ರಾಮಲ್‌ಕಟ್ಟೆ, ಮನೋಹರ್ ಪೆರ್ಲಕ್ಕೆ, ರಾವ ಬಂಗೇರ ಪೆರ್ಲಬೈಲು ಮೊದಲಾದವರಿದ್ದರು.