ಉಪ್ಪಿನಂಗಡಿಯಲ್ಲಿ ಶೋಭಾಯಾತ್ರೆ

New Project (2)
Published on

ಉಪ್ಪಿನಂಗಡಿ: ಇಲ್ಲಿನ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ 46ನೇ ವರ್ಷದ ಮೊಸರು ಕುಡಿಕೆ ಉತ್ಸವದ ಶೋಭಾಯಾತ್ರೆ ಶನಿವಾರ ನಡೆಯಿತು.

ವಿವಿಧ ಭಜನಾ ತಂಡಗಳಿಂದ ನೃತ್ಯ ಭಜನೆ, ಚೆಂಡೆ ವಾದ್ಯಗಳು, ಶ್ರೀಕೃಷ್ಣ ವೇಷಧಾರಿ ಮಕ್ಕಳ ಉಪಸ್ಥಿತಿಯೊಂದಿಗೆ ಸಾಗಿ ಬಂದ ಶೋಭಾಯಾತ್ರೆಯಲ್ಲಿ ಯುವಕರ ಸಾಹಸಿ ತಂಡಗಳಿಂದ ಪಿರಮಿಡ್ ರಚಿಸಿ ಮಡಕೆ ಒಡೆಯಲಾಯಿತು.

ಮಾಜಿ ಶಾಸಕ ಸಂಜೀವ ಮಠಂದೂರು, ಸುರೇಶ್ ಅತ್ರಮಜಲು, ಚಂದಪ್ಪ ಮೂಲ್ಯ, ಕಂಗ್ವೆ ವಿಶ್ವನಾಥ ಶೆಟ್ಟಿ, ತಿಮ್ಮಪ್ಪ ಗೌಡ, ಹರೀಶ್ ಶೆಟ್ಟಿ, ಹರಿರಾಮಚಂದ್ರ, ವಿದ್ಯಾಧರ ಜೈನ್, ಲೋಕೇಶ್ ಜೈನ್, ಧನಂಜಯ ನಟ್ಟಿಬೈಲ್, ಸಂತೋಷ್ ಅಡೆಕ್ಕಲ್, ಜಯಂತ ಪೊರೋಳಿ, ರಾಮಚಂದ್ರ ಮಣಿಯಾಣಿ, ಲೋಕೇಶ್ ಬೆತ್ತೋಡಿ, ಸುನೀಲ್ ದಡ್ಡು, ಸುದರ್ಶನ್, ಯು.ಜಿ.ರಾಧಾ, ಪ್ರತಾಪ್ ಪೆರಿಯಡ್ಕ, ಕರುಣಾಕರ ಸುವರ್ಣ, ನವೀನ್ ಪರಿಯಡ್ಕ, ಉಷಾ ಮುಳಿಯ, ಜಯಶ್ರೀ ಜನಾರ್ದನ್, ಸಂತೋಷ್ ಪೆರಿಯಡ್ಕ, ಚಿದಾನಂದ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net