

ಕಡಬ: ಸವಣೂರು ಗ್ರಾಮದ ಪರಣೆ-ತುಳುಸಿಪುರಂನಲ್ಲಿ ಶ್ರೀದೇವಿ ಸೇವಾ ಸಮಿತಿ ಆಶ್ರಯದಲ್ಲಿ ವಿವಿಧ ಸಂಘ-ಸಂಸ್ಥೆ ಸಹಕಾರದಲ್ಲಿ ಸೋಮವಾರ ಬಿಸು ಆಚರಣೆ ನಡೆಯಿತು.
ಬೆಳಗ್ಗೆ ಬಿಸು ಕಣಿ ಇಟ್ಟು ಪ್ರಾರ್ಥನೆ ಸಲ್ಲಿಸಲಾಯಿತು. ವಿವಿಧ ಭಜನಾ ತಂಡಗಳಿಂದ ಭಜನೆ, ಆಟೋಟ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಧ್ಯಾಹ್ನ ಬಿಸು ಪರ್ಬದ ವಿಶೇಷ ಸಹಭೋಜನ ನಡೆಯಿತು.
ಸವಣೂರು ಶ್ರೀ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ರಾಘವ ಗೌಡ ಬಿಸು ಆಚರಣೆ ಉಪನ್ಯಾಸ ನೀಡಿದರು. ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ತಾರಾನಾಥ ಕಾಯರ್ಗ, ಸವಣೂರು ಗ್ರಾಪಂ ಮಾಜಿ ಸದಸ್ಯ ಸತೀಶ್ ಬಲ್ಯಾಯ, ಸವಣೂರು ಯುವಕ ಮಂಡಲ ಮಾಜಿ ಅಧ್ಯಕ್ಷ ದಿವಾಕರ್ ಬಸ್ತಿ, ಕಾಯದರ್ಶಿ ಕೀರ್ತನ್ ಕೋಡಿಬೈಲು, ಸವಣೂರು ಕ್ಲಸ್ಟರ್ ಸಿಆರ್ಪಿ, ಸಾಕ್ಷಾತ್ ಶಿವ ಭಜನಾ ಮಂಡಳಿ ಜಯಂತ್ ವೈ, ಸವಣೂರು ಬೊಳ್ಳಿ-ಬೊಲ್ಪು ತುಳುಕೂಟ ಪ್ರಧಾನ ಕಾರ್ಯದರ್ಶಿ ಉಮಾಪ್ರಸಾದ್ ರೈ ನಡುಬೈಲು ಮೊದಲಾದವರಿದ್ದರು. ತುಳುಸಿಪುರಂ ಶ್ರೀದೇವಿ ಸೇವಾ ಸಮಿತಿ ಸಂಚಾಲಕ ಪದ್ಮಯ್ಯ ಗೌಡ ಪರಣೆ ಸ್ವಾಗತಿಸಿದರು.