ಬೈಕ್​ ಡಿಕ್ಕಿ ಹೊಡೆದು ಕೃಷ್ಣಮೃಗ ಸಾವು; ಬೈಕ್​ ಸವಾರನಿಗೆ ಗಾಯ...

Krishna mruga
Published on

ರಾಣೆಬೆನ್ನೂರ: ರಸ್ತೆಯಲ್ಲಿ ವಾಹನ ಅಪಘಾತವಾದರೆ ಮನುಷ್ಯರು ಪ್ರಾಣ ಕಳೆದುಕೊಳ್ಳುವುದು ಸಾಮಾನ್ಯ. ಆದರೆ ಇಲ್ಲೊಂದು ಕಡೆ ವಾಹನ ಅಪಘಾತದಲ್ಲಿ ಕಾಡುಪ್ರಾಣಿಯೊಂದು ಪ್ರಾಣ ಕಳೆದುಕೊಂಡಿದೆ. ಅರ್ಥಾತ್, ಬೈಕ್ ಡಿಕ್ಕಿಯಾಗಿ ಕೃಷ್ಣಮೃಗವೊಂದು ಮೃತಪಟ್ಟಿದ್ದು, ಬೈಕ್ ಸವಾರ ಗಾಯಗೊಂಡಿದ್ದಾನೆ.

ರಾಣೆಬೆನ್ನೂರಿನ ಕೂಸಗೂರ ಗ್ರಾಮದ ಬಳಿ ಸೋಮವಾರ ರಾತ್ರಿ ಈ ಅಪಘಾತ ಸಂಭವಿಸಿದೆ. ಬೈಕ್ ಸವಾರ ಹಿರೇಕೆರೂರ ತಾಲೂಕಿನ ಬತ್ತಿಕೊಪ್ಪ‌ ಗ್ರಾಮದ ಮಂಜುನಾಥ (35) ಗಾಯಗೊಂಡಿದ್ದಾನೆ. ಇವರು ಹಲಗೇರಿ ಕಡೆಯಿಂದ ಬತ್ತಿಕೊಪ್ಪದ ಕಡೆಗೆ ಹೊರಟಿದ್ದರು.

ದಾರಿ ಮಧ್ಯೆ ಕೃಷ್ಣಮೃಗ ಅಡ್ಡ ಬಂದಿದ್ದು, ನಿಯಂತ್ರಿಸಲಾಗದೆ ಬೈಕ್ ಕೃಷ್ಣಮೃಗಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕೃಷ್ಣಮೃಗ ಸ್ಥಳದಲ್ಲಿಯೇ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗಾಯಾಳನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net