ಮನೆಯ ಒಳಗಡೆಯೇ ಸರಳ ವಿವಾಹವಾಗಿ ಲಾಕ್​ಡೌನ್​ಗೆ ಸಾಥ್​ ನೀಡಿದ ನವಜೋಡಿ!

Untitled
Published on

ಬೀದರ್: ಅದ್ಧೂರಿಯಾಗಿ ನಿಗದಿಯಾಗಿದ್ದ ಮದುವೆಯನ್ನು ಮನೆಯಲ್ಲೇ ತುಂಬಾ ಸರಳವಾಗಿ ಮಾಡಿಕೊಳ್ಳುವ ಮೂಲಕ ನವಜೋಡಿಗಳು ಲಾಕ್​ಡೌನ್​ಗೆ ಸಾಥ್​ ನೀಡಿ ಮಾದರಿ ಆಗಿದ್ದಾರೆ.

ಪರಸ್ಪರ ಒಬ್ಬರಿಗೊಬ್ಬರು ಮಾಸ್ಕ್ ಹಾಕಿಕೊಂಡು ತಮ್ಮ ಮನೆಯಲ್ಲಿಯೇ ಸರಳವಾಗಿ ಮದುವೆ ಆಗಿದ್ದಾರೆ. ಬೀದರ್​​ ನಗರದ ಗುಮ್ಮೆ ಕಾಲೋನಿಯ ನಿವಾಸಿಗಳಾದ ರಾಜಕುಮಾರ ಸ್ವಾಮಿ ಹಾಗೂ ಯೊಗೇಶ್ವರಿ ಇಬ್ಬರು ಇಂದು ಹಸೆಮಣೆ ಏರಿದರು.

ಅದ್ಧೂರಿಯಾಗಿ ಮದುವೆ ಮಾಡಲು ಮೊದಲೇ ನಿಗದಿಯಾಗಿತ್ತು. ಆದರೆ, ಮಹಾಮಾರಿ ಕರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ತಮ್ಮ ಮನೆಯಲ್ಲೇ ಅತ್ಯಂತ ಸರಳವಾಗಿ ಮದುವೆ ಸಮಾರಂಬವನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ.

ಮನೆಯಲ್ಲೇ ತಮ್ಮ ಸಂಪ್ರದಾಯದಂತೆ ಪೂಜೆ, ಮಂತ್ರ ಪಠಣ ಮಾಡುವ ಮೂಲಕ ಸರಳವಾಗಿ ನವಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net