ಭಜನಾ ಕಮ್ಮಟ ಪೂರ್ವಭಾವಿ ಸಭೆ

ba
Published on

ಕೋಟ: ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಮೇ 18ರಂದು ನಡೆಯಲಿರುವ ಉಡುಪಿ ಜಿಲ್ಲಾ ಭಜನಾ ಕಮ್ಮಟದ ಪೂರ್ವಭಾವಿ ಸಭೆ ಭಾನುವಾರ ದೇಗುಲದಲ್ಲಿ ನಡೆಯಿತು.

ಆಡಳಿತ ಧರ್ಮದರ್ಶಿ ಕೆ.ರಮಣ ಉಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು. ವಿವಿಧ ತಾಲೂಕುಗಳಿಂದ 50 ಭಜನಾ ತಂಡಗಳು ಈ ಕಮ್ಮಟದಲ್ಲಿ ಭಾಗವಹಿಸಲಿದ್ದು, ಕಮ್ಮಟ ಯಶಸ್ವಿ ನಿರ್ವಹಣೆಗೆ ಸಮರ್ಪಕ ರೂಪುರೇಷಗಳ ಬಗ್ಗೆ ಚರ್ಚಿಸಲಾಯಿತು.

ಗೌರವ ಉಪಾಧ್ಯಕ್ಷ ಬಿ.ಜಿ.ಸೀತಾರಾಮ ಧನ್ಯಾ, ಕರಾವಳಿ ಭಜನಾ ಸಂಸ್ಕಾರ ವೇದಿಕೆ ಕುಂದಾಪುರ ತಾಲೂಕಿನ ಅಧ್ಯಕ್ಷ ರಾಘವೇಂದ್ರ ಶೆಟ್ಟಿಗಾರ್, ಉಪಾಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ, ಕರಾವಳಿ ಭಜನಾ ಸಂಸ್ಕಾರ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಅರುಣ್ ಕುಂದರ್, ಕಾರ್ಯದರ್ಶಿ ಪ್ರಕಾಶ್ ಕುಲಾಲ್ ಇನ್ನಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net