ಆನೆಗುಡ್ಡೆಯಲ್ಲಿ ಅರ್ಚಕ, ಧರ್ಮದರ್ಶಿಗಳ ಸಭೆ

sabe
Published on

ಕೋಟ: ವಿಶ್ವ ಹಿಂದು ಪರಿಷತ್ ಮಂದಿರ, ಅರ್ಚಕ, ಪುರೋಹಿತ್ ಆಯಾಮದ ವತಿಯಿಂದ ದೇವಸ್ಥಾನದ ಧರ್ಮದರ್ಶಿಗಳು ಹಾಗೂ ಅರ್ಚಕ, ಪುರೋಹಿತರ ಒಳಗೊಂಡ ಸಭೆ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆಯಿತು.

ವಿಶ್ವ ಹಿಂದು ಪರಿಷತ್ ರಾಷ್ಟ್ರೀಯ ಜತೆ ಕಾರ್ಯದರ್ಶಿ ಅರುಣ್ ನೆಟ್ಜಿ ಸಾನ್ನಿಧ್ಯ ಹಾಗೂ ಪಾವಿತ್ರೃ ಕುರಿತು ಪಂಚಸೂತ್ರಗಳ ಮೂಲಕ ಮಾರ್ಗದರ್ಶನ ಮಾಡಿದರು.

ಆನೆಗುಡ್ಡೆ ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ ಮಾತನಾಡಿ ದೇವರು, ಧರ್ಮ ಹಾಗೂ ದೇವಸ್ಥಾನಗಳ ಕುರಿತು ಮುಂದಿನ ಪೀಳಿಗೆಗೆ ಅರಿವು ಮೂಡಿಸಬೇಕು ಎಂದರು.

ವಿಶ್ವ ಹಿಂದು ಪರಿಷತ್ ದಕ್ಷಿಣ ಪ್ರಾಂತ್ಯದ ಮಂದಿರ ,ಅರ್ಚಕ ಪುರೋಹಿತ್ ಪ್ರಮುಖರಾದ ಪ್ರೇಮಾನಂದ ಶೆಟ್ಟಿ ದೇವಳಗಳ ಉಳಿವಿಗಾಗಿ ಕರೆ ನೀಡಿದರು. ಕ್ಷೇತ್ರ ಪುರೋಹಿತ್ ಸಂಪರ್ಕ ಪ್ರಮುಖರಾದ ಬಸವರಾಜ್ ಪ್ರಸ್ತಾವನೆಗೈದರು. ಹಲವು ದೇವಸ್ಥಾನಗಳ ಅರ್ಚಕರು ಹಾಗೂ ಆಡಳಿತ ಪ್ರಮುಖರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net