

ಉಡುಪಿ: ರಾಜ್ಯದಲ್ಲಿ 2022ರ ವರದಿ ಪ್ರಕಾರ 1.80 ಲಕ್ಷ ಮಕ್ಕಳು ಶಾಲೆ ಬಿಟ್ಟಿದ್ದಾರೆ. ಇಷ್ಟು ಮಂದಿಯನ್ನು ಮತ್ತೆ ಬಡತನಕ್ಕೆ ದೂಡಿದಂತಾಗಿದೆ. ರಾಜ್ಯದಲ್ಲಿ ಶೇ. 21ರಷ್ಟು ಬಾಲ್ಯವಿವಾಹ ನಡೆಯುತ್ತಿದೆ. 1.33 ಲಕ್ಷ ಬಾಲ ಗರ್ಭಿಣಿಯರು ಪತ್ತೆಯಾಗಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತ ಹಿಂದೆ ಬೀಳಲಿದೆ ಎಂದು ಯುನಿಸ್ೆ ಮಕ್ಕಳ ರಕ್ಷಣಾ ಯೋಜನೆ ಪ್ರಾದೇಶಿಕ ಸಂಯೋಜಕ ಡಾ. ಕೊಣಿಲ್ ರಾವೇಂದ್ರ ಭಟ್ ಹೇಳಿದರು.
ಗುರುವಾರ ತಾಪಂ ಸಭಾಂಗಣದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಟಕ ಸಿಬ್ಬಂದಿ ಹಾಗೂ ಸರ್ಕಾರಿ ಪಾಲನಾ ಸಂಸ್ಥೆ ಅಧೀಕ್ಷಕರು, ಸರ್ಕಾರೇತರ ಪಾಲನಾ ಸಂಸ್ಥೆ ಸಿಬ್ಬಂದಿಗೆ ನಡೆದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಮಾತನಾಡಿದರು.
ಮಾನವ ಅಭಿವೃದ್ಧಿಯನ್ನು ದುಡ್ಡಿನಿಂದ ಅಳೆಯಲು ಸಾಧ್ಯವಿಲ್ಲ. ಶಿಕ್ಷಣ, ಆರೋಗ್ಯ, ನೆಮ್ಮದಿ, ಧಾರಣಾ ಸಾಮರ್ಥ್ಯದ ಮೇಲೆ ಮಾನವ ಅಭಿವೃದ್ಧಿ ಸೂಚ್ಯಂಕ ರ್ನಿಣಯಿಸಲಾಗುತ್ತದೆ. ಮಕ್ಕಳು ಮತ್ತು ಮಹಿಳೆಯರ ಜೀವನ ಮಟ್ಟ ಸುಧಾರಣೆಯಾಗದೆ ಮಾನವ ಅಭಿವೃದ್ಧಿ ಸೂಚ್ಯಂಕ ಗ್ರ್ಾ ಮೇಲೆ ಏಳುವುದಿಲ್ಲ. ದುರದೃಷ್ಟವಶಾತ್ ಸರ್ಕಾರಗಳಿಗೆ ಸಿಮೆಂಟ್ ಮೇಲಿರುವ ಪ್ರೀತಿ ಮಕ್ಕಳು ಮತ್ತು ಮಹಿಳೆಯರ ಮೇಲಿಲ್ಲ ಎಂದು ಖೇದವ್ಯಕ್ತಪಡಿಸಿದರು.
ಮಿಷನ್ ವಾತ್ಸಲ್ಯ
ಕೇಂದ್ರ ಸರ್ಕಾರ 2021ರಲ್ಲಿ 12 ಕಾನೂನುಗಳನ್ನು ಒಂದೇ ಪರಿಧಿಯೊಳಗೆ ಸೇರಿಸಿ ಮಿಷನ್ ವಾತ್ಸಲ್ಯ ಎಂಬ ಯೋಜನೆ ಜಾರಿಗೊಳಿಸಿದೆ. ಭಾರತ ವಿಶ್ವದ ಏಕೈಕ ಕುಟುಂಬ ಆಧಾರಿತ ರಾಷ್ಟ್ರ. ಹೀಗಾಗಿ ಕಾನೂನು ಸಂರ್ಷಕ್ಕೊಳಗಾದ ಮಕ್ಕಳ ವರ್ತನೆ ಸುಧಾರಿಸಿ ಆದಷ್ಟು ಬೇಗ ಕುಟುಂಬದೊಂದಿಗೆ ಸೇರಿಸುವುದು ಯೋಜನೆ ಮುಖ್ಯ ಉದ್ದೇಶ. ರಕ್ಷಣಾ ಟಕದಿಂದ ಸ್ವೀಕರಿಸಿದ ಮಗುವಿನ ಪಾಲಕರನ್ನು ಪಾಲನಾ ಕೇಂದ್ರದ ಅಧಿಕಾರಿಗಳು 15 ದಿನದೊಳಗೆ ಕಡ್ಡಾಯ ಭೇಟಿ ಮಾಡಿ ವರದಿ ಸಲ್ಲಿಸಬೇಕು. ಯಾವುದೇ ಮಗು ಕುಟುಂಬದೊಂದಿಗೆ ನತೆಯಿಂದ ಬದುಕು ಕಟ್ಟಿಕೊಡುವುದು ಪಾಲನಾ ಸಂಸ್ಥೆಗಳ ಜವಾಬ್ದಾರಿಯಾಗಿದೆ. ಕ್ಯಾರ್ ಆ್ಯಂಡ್ ಪ್ರೊಟೆಕ್ಷನ್ ಅಗತ್ಯವಿಲ್ಲದ ಮಕ್ಕಳನ್ನು ಪಾಲನಾ ಕೇಂದ್ರಗಳಲ್ಲಿ ಹೆಚ್ಚು ದಿನ ಉಳಿಸಿಕೊಳ್ಳಬಾರದು. ಅವರನ್ನು ಸರ್ಕಾರದ ವಿವಿಧ ಹಾಸ್ಟೆಲ್ಗಳಿಗೆ ಸೇರಿಸಿ, ಶಿಕ್ಷಣ ಕೊಡಿಸಬೇಕು. ಇಂಥ ಮಕ್ಕಳಿಗಾಗಿ ಶೇ.25ರಷ್ಟು ಸೀಟುಗಳನ್ನು ಮೀಸಲಿಡಲಾಗಿದ್ದು, ಜಿಲ್ಲಾಧಿಕಾರಿಗಳ ಶಿಾರಸ್ಸಿನ ಮೇರೆಗೆ ಸೇರ್ಪಡೆಗೊಳಿಸಬಹುದು ಎಂದರು.
2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸಂತೋಷ್ ಶ್ರೀವಾಸ್ತವ್ ಕಾರ್ಯಾಗಾರ ಉದ್ಘಾಟಿಸಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ನಗರಠಾಣೆ ಉಪನಿರೀಕ್ಷಕ ಗೋಪಾಲಕೃಷ್ಣ ಜೋಗಿ ಉಪಸ್ಥಿತರಿದ್ದರು. ಸುರಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.