4ರಂದು ಬೆಳ್ತಂಗಡಿಯಲ್ಲಿ ಭಜನಾ ಮೆರವಣಿಗೆ : ಚಂದ್ರಶೇಖರ್ ಸಾಲಿಯಾನ್ ಮಾಹಿತಿ : ಅರಣ್ಯಾಧಿಕಾರಿ ಸಂಜೀವ ಪೂಜಾರಿ ವಿರುದ್ಧ ಕ್ರಮಕ್ಕೆ ಆಗ್ರಹ

Published on

ಬೆಳ್ತಂಗಡಿ: ಅರಣ್ಯಾಧಿಕಾರಿ ಸಂಜೀವ ಪೂಜಾರಿ ಭಜಕ ಸಹೋದರಿಯರ ಕುರಿತು ಆಡಿದ ಕೀಳುಮಟ್ಟದ ಮಾತು ಖಂಡಿಸಿ ನ.4ರಂದು ಬೆಳಗ್ಗೆ 9.30ಕ್ಕೆ ಬೆಳ್ತಂಗಡಿ ಸಂತೆಕಟ್ಟೆ ಬಳಿಯ ಅಯ್ಯಪ್ಪ ದೇವಸ್ಥಾನದಿಂದ ಭಜನಾ ಮೆರವಣಿಗೆ ಮೂಲಕ ಬಂದು ಬೆಳ್ತಂಗಡಿ ಮಿನಿ ವಿಧಾನಸೌದದ ಬಳಿ ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ ಎಂದು ಭಜನಾ ಪರಿಷತ್ ರಾಜ್ಯ ಅಧ್ಯಕ್ಷ ಚಂದ್ರಶೇಖರ್ ಸಾಲಿಯಾನ್ ಹೇಳಿದರು.

ಮಂಗಳವಾರ ಬೆಳ್ತಂಗಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಜಕ ಸಹೋದರಿಯರು ಮತ್ತು ಭಜನೆಯ ಕುರಿತು ಕೀಳುಮಟ್ಟದ ಹೇಳಿಕೆ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ಇಂತಹ ಹೇಳಿಕೆ ನೀಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಭಜನಾ ಪರಿಷತ್ ಬೆಳ್ತಂಗಡಿ ಮತ್ತು ಕುಣಿತ ಭಜನಾ ತರಬೇತಿದಾರರ ಸಂಘ ಬೆಳ್ತಂಗಡಿ ನೇತೃತ್ವದಲ್ಲಿ ಎಲ್ಲ ಹಿಂದುಪರ ಸಂಘಟನೆಗಳ ಹಾಗೂ ಭಜನಾ ಮಂಡಳಿಗಳ ಸಹಕಾರದೊಂದಿಗೆ ಮೆರವಣಿಗೆ ನಡೆಯಲಿದೆ ಎಂದರು.

ಭಜಕರ ಸಮಾವೇಶದಲ್ಲಿ ವಕೀಲ ಬಿ.ಕೆ.ಧನಂಜಯ ರಾವ್, ಸುಬ್ರಹ್ಮಣ್ಯ ಕುಮಾರ್ ಆಗರ್ತ, ಕುಣಿತ ಭಜನಾ ತರಬೇತಿದಾರರ ಸಂಘ ಅಧ್ಯಕ್ಷ ಸಂದೇಶ ಸುವರ್ಣ, ತಾಲೂಕಿನ ಎಲ್ಲ ಭಜನಾ ಮಂಡಳಿಗಳ ಭಜಕರು ಉಪಸ್ಥಿತರಿರುತ್ತಾರೆ ಎಂದರು.

ವಿಶ್ವ ಹಿಂದು ಪರಿಷತ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಭಜನಾ ಪರಿಷತ್ ತಾಲೂಕು ಅಧ್ಯಕ್ಷ ವೆಂಕಟೇಶ್ವರ ಭಟ್ ಕಜೆ, ಕುಣಿತ ಭಜನಾ ತರಬೇತಿದಾರರ ಸಂಘದ ಕಾರ್ಯದರ್ಶಿ ಹರೀಶ್ ನೆರಿಯ, ಭಜನಾ ಪರಿಷತ್ ಸಂಘಟನಾ ಕಾರ್ಯದರ್ಶಿ ನಾಗೇಶ್ ನೆರಿಯ, ಭಜನಾ ಪರಿಷತ್ ಸಂಯೋಜಕಿ ಬೇಬಿ ಉಮೇಶ ಪೂಜಾರಿ, ಭಜನಾ ಪರಿಷತ್ ಸಂಯೋಜಕ ಸೋಮನಾಥ್, ಸದಸ್ಯೆ ಗೀತಾ ವಿ.ನಾಯ್ಕ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net