ಕಾಸರಗೋಡು: ಮಾಜಿ ಪ್ರಧಾನಿ ಇಂದಿರಾಗಾಂಧಿ ವಿಶ್ವರಾಷ್ಟ್ರಗಳ ಮುಂದೆ ಭಾರತದ ಘನತೆ ಎತ್ತಿ ಹಿಡಿಯಲು ಶ್ರಮಿಸಿದ ಕೆಚ್ಚೆದೆಯ ನಾಯಕಿ ಎಂದು ಐಕ್ಯರಂಗ ಜಿಲ್ಲಾ ಸಂಚಾಲಕ ಎ.ಗೋವಿಂದನ್ ನಾಯರ್ ಹೇಳಿದರು.
ಕಾಸರಗೋಡು ಬ್ಲಾಕ್ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸಂಸ್ಮರಣಾ ಸಭೆ ಉದ್ಘಾಟಿಸಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀವ ನಂಬಿಯಾರ್ ಅಧ್ಯಕ್ಷತೆ ವಹಿಸಿದ್ದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಜನ್ಮದಿನ ಆಚರಿಸಲಾಯಿತು. ಕೆಪಿಸಿಸಿ ಕಾರ್ಯದರ್ಶಿ ಕೆ.ನೀಲಕಂಠನ್, ಯುಡಿಎಫ್ ಜಿಲ್ಲಾ ಕಾರ್ಯದರ್ಶಿ ವಕೀಲ ಎ.ಗೋವಿಂದನ್ ನಾಯರ್, ಅರ್ಜುನನ್ ತಾಯಲಂಗಾಡಿ, ಚಂದ್ರಶೇಖರನ್, ಕೆ.ಪಿ.ನಾರಾಯಣನ್ ನಾಯರ್, ಪಿ.ಕೆ.ವಿಜಯನ್, ಉಮೇಶ್ ಅಣಂಗೂರು, ಹನೀಫ ಚೇರಂಗೈ, ಸಿ.ಜಿ.ಟೋನಿ, ಕೆ.ವಿ.ಜೋಶಿ, ಎಸ್.ಉಷಾ, ರಫೀಕ್ ಚೌಕಿ, ವೇಲಾಯುಧನ್, ಕುಞಿಕಣ್ಣನ್, ಮುಕುಂದನ್, ಪ್ರಣವ್ ಆಳ್ವ, ಶಾಹಿದ್ ಪುಲಿಕ್ಕುನ್ನು, ದಿಲೀಪ್ ಪುಳಿಕ್ಕುನ್ನು, ಚಂದ್ರನ್ ಮೊದಲಾದವರು ಉಪಸ್ಥಿತರಿದ್ದರು.