ಮೂಲ್ಕಿ: ಗ್ರಾಮೀಣ ವಲಯದ ಜನರಿಗೆ ನಗರದ ಆರೋಗ್ಯ ಸೇವೆಗಳನ್ನು ಉಚಿತವಾಗಿ ನೀಡುವುದರೊಂದಿಗೆ ಆರೋಗ್ಯ ರಕ್ಷ್ಷಣಾ ಕಾರ್ಯವನ್ನು ಲಯನ್ಸ್ ಕ್ಲಬ್ ನಿರಂತರವಾಗಿ ವಾಡುತ್ತಿದೆ ಎಂದು ಲಯನ್ಸ್ ಕ್ಲಬ್ ಬಪ್ಪನಾಡು ಇನ್‌ಸ್ಪೈರ್ ಅಧ್ಯಕ್ಷ ಬಿ.ಶಿವಪ್ರಸಾದ್ ಹೇಳಿದರು.
ಲಯನ್ಸ್ ಕ್ಲಬ್ ಬಪ್ಪನಾಡು ಇನ್‌ಸ್ಪೈರ್, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಕೆರೆಕಾಡು, ಕಟ್ಟೆ ಪೂಜೋತ್ಸವ ಸಮಿತಿ ಪೂಪಾಡಿಕಟ್ಟೆ, ಕೆರೆಕಾಡು ಗಣೇಶೋತ್ಸವ ಸಮಿತಿ, ಅಕ್ಷಯ ಮಹಿಳಾ ಮಂಡಳಿ, ಯೂತ್ ಫ್ರೆಂಡ್ಸ್ ಹಾಗೂ ದುರ್ಗಾ ಶಕ್ತಿ ಮಹಿಳಾ ಮಂಡಳಿ ಆಶ್ರಯದಲ್ಲಿ ಎ.ಬಿ.ಶೆಟ್ಟಿ ಮೆಮೋರಿಯಲ್ ಡೆಂಟಲ್ ಸೈನ್ಸ್ ಹಾಗೂ ಮುಕ್ಕ ಶ್ರೀನಿವಾಸ್ ಆಸ್ಪತ್ರೆ ಸಹಯೋಗದೊಂದಿಗೆ ಇತ್ತೀಚೆಗೆ ಆಯೋಜಿಸಲಾಗಿದ್ದ ಆರೋಗ್ಯ ಶಿಬಿರ ಹಾಗೂ ದಂತ ವೈದ್ಯಕೀಯ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಲಯನ್ಸ್ ಕ್ಲಬ್ ಬಪ್ಪನಾಡು ಇನ್‌ಸ್ಪೈರ್ ಸ್ಥಾಪಕಾಧ್ಯಕ್ಷ ವೆಂಕಟೇಶ ಹೆಬ್ಬಾರ್ ಮಾತನಾಡಿದರು. ಭಜನಾ ಮಂದಿರದ ಪ್ರಧಾನ ಅರ್ಚಕ ರಾವೇಂದ್ರ ರಾವ್ ಅದ್ಯಕ್ಷತೆ ವಹಿಸಿದ್ದರು.
ದುರ್ಗಾಪರಮೇಶ್ವರೀ ಭಜನಾ ಮಂದಿರದ ಅಧ್ಯಕ್ಷ ಅನಂತಕೃಷ್ಣ, ಪ್ರಧಾನ ಅರ್ಚಕ ರಾವೇಂದ್ರ ರಾವ್ ಕೆರೆಕಾಡು, ಲಯನ್ಸ್ ಕ್ಲಬ್ ಕಾರ್ಯದರ್ಶಿ ಪ್ರತಿಭಾ ಹೆಬ್ಬಾರ್, ನಿಕಟಪೂರ್ವ ಅಧ್ಯಕ್ಷ ಸುಧೀರ್ ಎನ್.ಬಾಳಿಗ, ಕಲ್ಲಪ್ಪ ತಡವಲಗ, ಶ್ರೀನಿವಾಸ ಆಸ್ಪತ್ರೆಯ ಡಾ.ಮಲ್ಲಿಕಾರ್ಜುನ, ಎ.ಬಿ.ಶೆಟ್ಟಿ ದಂತ ವೈದ್ಯಕೀಯ ಆಸ್ಪತ್ರೆಯ ಡಾ.ಶೋಭಿತ್ ಮೊದಲಾದವರಿದ್ದರು.