ಐಟಿಐ ತಂತ್ರಜ್ಞರಿಗಿದೆ ಉಜ್ವಲ ಭವಿಷ್ಯ: ಬೆಥನಿ ವಾರ್ಷಿಕ ದಿನದಲ್ಲಿ ಕೇಶವ ಅಮೈ ಅನಿಸಿಕೆ

New Project (4)
Published on

ನೆಲ್ಯಾಡಿ: ಭಾರತದ ಭವಿಷ್ಯಕ್ಕೆ ಐಟಿಐ ಕಲಿತ ತಂತ್ರಜ್ಞರಿಗೆ ಬಹು ಬೇಡಿಕೆ ಇದೆ. ದೇಶದ ಪ್ರಗತಿಯ ತಾಂತ್ರಿಕತೆಯಲ್ಲೂ, ಕೃಷಿ ತಾಂತ್ರಿಕತೆಯಲ್ಲೂ ಐಟಿಐ ಕಲಿತ ವಿದ್ಯಾರ್ಥಿಗಳಿಗೆ ಇತರ ತಾಂತ್ರಿಕ ವಿದ್ಯಾಭ್ಯಾಸಗಳಿಂತಲೂ ದುಪ್ಪಟ್ಟು ಅವಕಾಶಗಳು ಮತ್ತು ಉತ್ತಮ ವೇತನ ದೊರಕಲಿದೆ ಎಂದು ಪುತ್ತೂರಿನ ಎಸ್‌ಆರ್‌ಕೆ ಇಂಡಸ್ಟ್ರಿಯ ಮ್ಯಾನೇಜಿಂಗ್ ಡೈರೆಕ್ಟರ್ ಕೇಶವ ಅಮೈ ಹೇಳಿದರು.

ಬೆಥನಿ ಐಟಿಐ ಸಂಸ್ಥೆಯ 29ನೇ ವರ್ಷದ ವಾರ್ಷಿಕ ದಿನದಲ್ಲಿ ಮಾತನಾಡಿದರು.

ಸಂಸ್ಥೆಯ ನಿರ್ದೇಶಕ ಜೈಸನ್ ಸೈಮನ್, ಮಾರ್ಗದರ್ಶಕ ವರ್ಗಿಸ್ ಕೈಪನಡ್ಕ, ಕಾಲೇಜಿನ ಪೂರ್ವ ವಿದ್ಯಾರ್ಥಿ ಅವಿನಾಶ್ ಡಿಸೋಜ ಶುಭ ಹಾರೈಸಿದರು. ಪ್ರಾಚಾರ್ಯ ಸಜಿ ಕೆ.ತೋಮಸ್ ವಾರ್ಷಿಕ ವರದಿ ಮಂಡಿಸಿದರು. ತರಬೇತಿ ಅಧಿಕಾರಿ ಜಾನ್ ಪಿ.ಎಸ್. ಸ್ವಾಗತಿಸಿದರು. ಹರಿಪ್ರಸಾದ್ ರೈ ನಿರೂಪಿಸಿದರು. ಹಿರಿಯ ತರಬೇತಿ ಅಧಿಕಾರಿ ಸುಬ್ರಾಯ ನಾಯಕ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net