ಮಜ್ಜಾರು ಕಡವು ತಾತ್ಕಾಲಿಕ ಸೇತುವೆ ನೀರುಪಾಲು

kdb_may.26_1
Published on

ಕಡಬ: ಕೋಡಿಂಬಾಳ ಮತ್ತು ಕೇನ್ಯ ಗ್ರಾಮಗಳ ನಡುವೆ ಹರಿಯುತ್ತಿರುವ ಕುಮಾರಧಾರಾ ನದಿಗೆ ಮಜ್ಜಾರು ಕಡವು ಎಂಬಲ್ಲಿ ಗ್ರಾಮಸ್ಥರೇ ಸೇರಿ ಶ್ರಮದಾನದ ಮೂಲಕ ನಿರ್ಮಿಸಿರುವ ತಾತ್ಕಾಲಿಕ ಸೇತುವೆ ನೀರುಪಾಲಾಗಿದೆ.

ಇತ್ತೀಚೆಗೆ ಕುಮಾರಪರ್ವತ ತಪ್ಪಲಿನ ಘಟ್ಟಪ್ರದೇಶದಲ್ಲಿ ನಿರಂತರ ಮಳೆಯಾದ ಕಾರಣ ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಹೀಗಾಗಿ ನದಿ ಮೂಲಕ ನಿರ್ಮಿಸಿದ್ದ ಈ ಸೇತುವೆ ಸಂಪೂರ್ಣ ಮುಳುಗಡೆಯಾಗಿತ್ತು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಬಳ್ಪ ಮತ್ತು ಕೇನ್ಯ ಗ್ರಾಮಸ್ಥರು ಆಸ್ಪತ್ರೆ, ತಾಲೂಕು ಕಚೇರಿ, ವ್ಯಾಪಾರ ವ್ಯವಹಾರ, ಶಾಲಾ ಕಾಲೇಜು ಸೇರಿದಂತೆ ತಮ್ಮ ಅಗತ್ಯತೆಗಳಿಗಾಗಿ ತಾಲೂಕು ಕೇಂದ್ರ ಕಡಬವನ್ನು ಸಂಪರ್ಕಿಸಬೇಕಾದರೆ ಸುಳ್ಯ ತಾಲೂಕಿನ ಪಂಜ ಮೂಲಕ ಸುವಾರು 20 ಕಿ.ಮೀ. ಸುತ್ತುಬಳಸಿ ಸಂಚರಿಸಬೇಕು. ಆದರೆ ತಮ್ಮ ಗ್ರಾಮದಲ್ಲಿ ಹರಿಯುತ್ತಿರುವ ಕುಮಾರಧಾರಾ ನದಿಯನ್ನು ದಾಟಿ ಕೇವಲ 6 ಕಿ.ಮೀ. ಕ್ರಮಿಸಿದರೆ ಕಡಬ ತಾಲೂಕು ಕೇಂದ್ರವನ್ನು ಮತ್ತು 3 ಕಿ.ಮೀ. ಸಂಚರಿಸಿದರೆ ಮಂಗಳೂರು - ಬೆಂಗಳೂರು ನಡುವಿನ ಕೋಡಿಂಬಾಳ ರೈಲು ನಿಲ್ದಾಣವನ್ನು ತಲುಪಲು ಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net