ಸನಾತನ ಹಿಂದೂ ಧರ್ಮ ರಕ್ಷಣೆಗೆ ಸಂಟಿತರಾಗೋಣ

ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಕರೆ
ನೆಲಮಂಗಲ ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್​ ಹಾಗೂ ಬಜರಂಗದಳದಿಂದ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಮಾಡಲಾಯಿತು. ಸಮಿತಿ ಅಧ್ಯಕ್ಷ ಡಾ.ರಮೇಶ್​, ಮಾಜಿ ಅಧ್ಯಕ್ಷ ಮಧುಸೂದನ್​, ನಗರಸಭೆ ನಿಟಕಪೂರ್ವ ಅಧ್ಯಕ್ಷೆ ಪೂರ್ಣಿಮಾ ಸುಗ್ಗರಾಜು, ಸದಸ್ಯೆ ಪುಷ್ಪಲತಾ ಮಾರೇಗೌಡ, ರೋಟರಿ ಸಂಸ್ಥಾಪಕ ಅಧ್ಯಕ್ಷ ಎಚ್​.ಜಿ.ರಾಜು, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸತೀಶ್​ ಇದ್ದರು.
ನೆಲಮಂಗಲ ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್​ ಹಾಗೂ ಬಜರಂಗದಳದಿಂದ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಮಾಡಲಾಯಿತು. ಸಮಿತಿ ಅಧ್ಯಕ್ಷ ಡಾ.ರಮೇಶ್​, ಮಾಜಿ ಅಧ್ಯಕ್ಷ ಮಧುಸೂದನ್​, ನಗರಸಭೆ ನಿಟಕಪೂರ್ವ ಅಧ್ಯಕ್ಷೆ ಪೂರ್ಣಿಮಾ ಸುಗ್ಗರಾಜು, ಸದಸ್ಯೆ ಪುಷ್ಪಲತಾ ಮಾರೇಗೌಡ, ರೋಟರಿ ಸಂಸ್ಥಾಪಕ ಅಧ್ಯಕ್ಷ ಎಚ್​.ಜಿ.ರಾಜು, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸತೀಶ್​ ಇದ್ದರು.
Published on: 

ನೆಲಮಂಗಲ : ಪ್ರತಿಯೊಬ್ಬ ಹಿಂದೂ ಒಗ್ಗೂಡಿದಾಗ ಸನಾತನ ಹಿಂದೂ ಧರ್ಮದ ಉಳಿಯುತ್ತದೆ ಎಂದು ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.

ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್​, ಬಜರಂಗದಳದಿಂದ ಹಮ್ಮಿಕೊಂಡಿದ್ದ ಗಣೇಶ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಆಶೀರ್ವಚನ ನೀಡಿದರು.

ವಿಶ್ವ ಹಿಂದೂ ಪರಿಷತ್​ ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಎಂ.ಎನ್​.ರಾಮ್​ ಮಾತನಾಡಿ, ಹಿಂದೂ ಸಮಾಜದ ಜಾಗೃತಿ ಹಾಗೂ ಒಳಿತಿಗೆ ಹಿಂದೂ ಮಹಾಗಣಪತಿ ಸ್ಥಾಪನೆ ಮಾಡಲಾಗುತ್ತಿದೆ. ನಗರದಲ್ಲಿ 3 ದಿನ ಸಾಂಸತಿಕ ಹಾಗೂ ಧರ್ಮ ಜಾತಿ ಕಾರ್ಯಕ್ರಮ ನಡೆಯಲಿದೆ. ಸೆ.27ರಂದು 3ನೇ ದಿನ ನಗರದಲ್ಲಿ ಶೋಭಾಯಾತ್ರೆ ಇರಲಿದೆ ಎಂದು ತಿಳಿಸಿದರು.

ನಗರದ ಅರಿಶಿಣಕುಂಟೆ ಗ್ರಾಮದಲ್ಲಿ ಗುರುವಾರ ಶ್ರೀ ಆಂಜನೇಯ ಸ್ವಾಮಿ ದೇವಾಲಯ ಮುಂಭಾಗದಲ್ಲಿ ಯುವಕರ ತಂಡ ಹಿಂದೂ ಮಹಾಗಣಪತಿ ಸ್ವಾಗತಿಸಿ ಬೈಕ್​ ರ್ಯಾಲಿ ಮೂಲಕ ಬಸವಣ್ಣ ದೇವರ ಮಠ ತಲುಪಿದರು. ಮೂರ್ತಿ ಪ್ರತಿಷ್ಠಾಣೆ ಪ್ರಯುಕ್ತ ಗಣಹೋಮ, ವಿಶೇಷ ಅಲಂಕಾರ, ಗೋಪೂಜೆ, ಗಂಗಾ ಪೂಜೆ ಸೇರಿ ಧಾರ್ಮಿಕ ಕಾರ್ಯ ನೆರವೇರಿಸಲಾಯಿತು. ಅಪಾರ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಸಮಿತಿಯಿಂದ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಸ್ವಾಗತ ಸಮಿತಿ ಅಧ್ಯಕ್ಷ ಡಾ.ರಮೇಶ್​, ಮಾಜಿ ಅಧ್ಯಕ್ಷ ಮಧುಸೂದನ್​, ನಗರಸಭೆ ನಿಟಕಪೂರ್ವ ಅಧ್ಯಕ್ಷೆ ಪೂರ್ಣಿಮಾ ಸುಗ್ಗರಾಜು, ಸದಸ್ಯೆ ಪುಷ್ಪಲತಾ ಮಾರೇಗೌಡ, ರೋಟರಿ ಸಂಸ್ಥಾಪಕ ಅಧ್ಯಕ್ಷ ಎಚ್​.ಜಿ.ರಾಜು, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸತೀಶ್​, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಸುರೇಶ್​, ಎಸ್ಟಿ ಮೋರ್ಚಾ ಅಧ್ಯಕ್ಷ ಕೆಂಪರಾಮಯ್ಯ, ಎಸ್ಸಿ ಮೋರ್ಚಾ ಅಧ್ಯಕ್ಷ ಉಮೇಶ್​, ಮುಖಂಡ ಡಿ.ಸಿದ್ದರಾಜು, ಸುಬ್ರಮಣಿ, ರಾಜಮ್ಮ, ಸೌಮ್ಯಾ, ಲೀಲಾಕುಮಾರ್​, ವೇದಾವತಿ, ಮಂಜುಳಾ, ಯುವಕರಾದ ಚಂದನ್​, ಯಶವಂತ್​, ಚಂದ್ರಶೆಟ್ಟಿ, ಸುರೇಶ್​, ರಂಗನಾಥ್​, ನಿತೀನ್​, ಸುಬ್ರಮಣಿ, ಗೋಪಾಲಕೃಷ್ಣ, ಅರುಣ್​ ಕುಮಾರ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net