

ಕುಂದಾಣ :ಕಾರಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂ 2025&26ನೇ ಸಾಲಿನಲ್ಲಿ 21.82 ಲ ರೂ. ನಿವ್ವಳ ಆದಾಯಗಳಿಸುವ ಮೂಲಕ ಉತ್ತಮ ವಹಿವಾಟು ನಡೆಸಿದೆ ಎಂದು ಸಂಘದ ಅಧ್ಯಕ್ಷ್ಯ ಸಿ. ರಾಜೇಂದ್ರ ಹೇಳಿದರು.
ತಾಲೂಕಿನ ಕಾರಹಳ್ಳಿಯಲ್ಲಿ ಇತ್ತೀಚೆಗೆ ಕಾರಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂದ ವಾರ್ಷಿಕ ಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ರೈತರ ಅನುಕೂಲಕ್ಕಾಗಿ ಬೂಸಾ ವಿತರಣೆ, ಸಿಬ್ಬಂದಿ ನೇಮಕ ಹಾಗೂ ಹೊಸದಾಗಿ ಔಷಧ ಅಂಗಡಿ ತೆರೆಯಲಾಗುವುದು ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕಕಾಮೇನಹಳ್ಳಿ ರಮೇಶ್ ಮಾತನಾಡಿ, ಕಾರಹಳ್ಳಿ ಸೊಸೈಟಿಯ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಕಳೆದ ವರ್ಷ 8 ಲ ರೂ. ನೀಡಲಾಗಿದ್ದು, ಈ ಬಾರಿ ಹೆಚ್ಚುವರಿಯಾಗಿ 10 ಲ ರೂ.ಗಳನ್ನು ಉಚಿತವಾಗಿ ನೀಡಲಾಗುವುದು. ಸೊಸೈಟಿಯ ಅಭಿವೃದ್ಧಿಯಲ್ಲಿ ಗುಣಮಟ್ಟ ಮತ್ತು ಉತ್ತಮ ಹೆಗ್ಗಳಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ರೈತರ ಅಭಿವೃದ್ಧಿಗೆ ಸಹಕಾರ ಸಂಗಳು ಸದಾ ಬದ್ಧವಾಗಿರಬೇಕು ಎಂದು ಹೇಳಿದರು.
ವೃತ್ತಿಪರ ನಿರ್ದೇಶಕ ಎ.ಸಿ. ನಾಗರಾಜು ಮಾತನಾಡಿ, ರಸಗೊಬ್ಬರ ಸೇರಿದಂತೆ ರೈತರಿಗೆ ಬೇಕಾದ ಎಲ್ಲ ಸೌಲಭ್ಯ ಒದಗಿಸಲು ಬದ್ಧರಿದ್ದೇವೆ. ವಿಶೇಷ ಅನುದಾನಕ್ಕಾಗಿ 2 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಪಿಎಲ್ಡಿ ಬ್ಯಾಂಕ್ ಅಧ್ಯ ಆರ್. ಮುನೇಗೌಡ ಮಾತನಾಡಿದರು.ವೇದಿಕೆಯಲ್ಲಿ ಸಂದ ಉಪಾಧ್ಯ ಆನಂದಪ್ಪ, ನಿರ್ದೇಶಕರಾದ ದೇವರಾಜು, ದೊಡ್ಡಮಲ್ಲಾಚಾರ್, ಗಂಗಪ್ಪ, ಆರ್. ದೇವರಾಜು, ಮೀನಾ, ಮೀನಾ, ರಮೇಶ್, ಕೃಷ್ಣಮೂರ್ತಿ, ಮುನಿರಾಜು, ಸುಂದರೇಶ್, ಸಿಇಒ ತಾಯಮ್ಮ, ಮಾಜಿ ಅಧ್ಯ ರಮೇಶ್, ಸದಸ್ಯರಾದ ಕೆಂಪಣ್ಣ, ಸರಳಾ ಶಶಿಕುಮಾರ್, ಮೊಟಪ್ಪ, ಜೆಡಿಎಸ್ ಮುಖಂಡ ಮುನಿಕೃಷ್ಣ, ಕಾಂಗ್ರೆಸ್ ಮುಖಂಡ ಅಶೋಕ್ ಸೇರಿದಂತೆ ಹಲವರು ಇದ್ದರು.