ಬೇಜವಾಬ್ದಾರಿಗೆ ಕಾಮಗಾರಿಗಳು ಬಲಿ!

ಚನ್ನಪಟ್ಟಣದ ವಾರ್ಡ್ ಒಂದರಲ್ಲಿ  ಅಸಮರ್ಪಕ ಕಾಮಗಾರಿ ಮಾಡಿರುವುದನ್ನು ಪ್ರದರ್ಶಿಸುತ್ತಿರುವ ನಾಗರೀಕ.
ಚನ್ನಪಟ್ಟಣದ ವಾರ್ಡ್ ಒಂದರಲ್ಲಿ ಅಸಮರ್ಪಕ ಕಾಮಗಾರಿ ಮಾಡಿರುವುದನ್ನು ಪ್ರದರ್ಶಿಸುತ್ತಿರುವ ನಾಗರೀಕ.
Published on

ಪ್ರಮುಖ ಮುಖ್ಯಾಂಶಗಳು

  • ಕೋಟ್ಯಂತರ ರೂಪಾಯಿ ಅನುದಾನ ದುಂದುವೆಚ್ಚ
  • * ಅಧಿಕಾರಿ, ಗುತ್ತಿಗೆದಾರರ ರ್ನಿಲಕ್ಷ$್ಯ
ಚನ್ನಪಟ್ಟಣ
ನಗರಸಭೆ ವ್ಯಾಪ್ತಿಯಲ್ಲಿ ಕೋಟ್ಯಂತರ ರೂಪಾಯಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಇವುಗಳಲ್ಲಿ ಕೆಲವು ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರರ ಬೇಜವಾಬ್ದಾರಿಗೆ ಬಲಿಯಾಗುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ. ಇದಕ್ಕೆ ನಗರಸಭೆಯ 3ನೇ ವಾರ್ಡ್​ನಲ್ಲಿ ನಡೆದಿರುವ ಕಾಮಗಾರಿಗಳು ಉದಾಹರಣೆ.
ಹೌದು...., ಚನ್ನಪಟ್ಟಣ ನಗರಸಭೆ ವ್ಯಾಪ್ತಿಯಲ್ಲಿ ವಿಶೇಷ ಅನುದಾನ ಸೇರಿ ನಗರೋತ್ಥಾನ ನಿಧಿಯಿಂದ ಕೋಟ್ಯಂತರ ರೂಪಾಯಿ ಮೊತ್ತದ ಕಾಮಗಾರಿಗಳು ನಡೆಯುತ್ತಿವೆ. ಸಿಸಿ ರಸ್ತೆ, ಚರಂಡಿ, ಡಕ್​ ಹೀಗೆ ನಾನಾ ರೀತಿಯ ಕಾಮಗಾರಿಗಳು ಪ್ರಗತಿಯಲ್ಲಿವೆ. ಪ್ರತಿವಾರ್ಡ್​ನಲ್ಲೂ ಕೋಟಿಗೂ ಹೆಚ್ಚು ಅನುದಾನ ಬಿಡುಗಡೆಯಾಗಿದ್ದು, ಈ ಕಾಮಗಾರಿಗಳ ಪೈಕಿ ಕೆಲ ಕಾಮಗಾರಿಗಳು ಕಳಪೆಯಾಗಿದ್ದು, ಕಾಮಗಾರಿಗಳ ಅನುಷ್ಠಾನ ಜವಾಬ್ದಾರಿ ಹೊಂದಿರುವವರ ರ್ನಿಲ್ಯವೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ.
ಮೂರನೇ ವಾರ್ಡ್​ನಲ್ಲಿ ಕಳಪೆ
ನಗರದ ವಿವೇಕಾನಂದನಗರ ಸೇರಿ ದೊಡ್ಡ ವಾರ್ಡ್​ ಎಂಬ ಹೆಗ್ಗಳಿಕೆ ಹೊಂದಿರುವ 3ನೇ ವಾರ್ಡ್​ನಲ್ಲಿ ನಡೆದಿರುವ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂಬ ಆರೋಪ ಜೋರಿದೆ. ಖುದ್ದು ಈ ವಾರ್ಡ್​ ಸದಸ್ಯರೇ ಈ ಬಗ್ಗೆ ಗಂಭೀರ ಆರೋಪ ಮಾಡುತ್ತಿದ್ದು, ಗುತ್ತಿಗೆದಾರ ಹಾಗೂ ನಗರಸಭೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಎಲ್ಲ ವಾರ್ಡ್​ನಂತೆ ಈ ವಾರ್ಡ್​ ಅಭಿವೃದ್ಧಿಗೂ ಒಂದು ಕೋಟಿಗೂ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ. ಈ ಪೈಕಿ ನಗರಸಭೆಯ 31 ಲ ರೂ.ಗಳಲ್ಲಿ ಚರಂಡಿ ಕಾಮಗಾರಿ ನಡೆದಿದ್ದು, ಕಾಮಗಾರಿ ಸಂಪೂರ್ಣ ಕಳಪೆ ಎಂಬುದು ವಾರ್ಡ್​ ಸದಸ್ಯೆ ಸೇರಿ ಇಲ್ಲಿನ ನಿವಾಸಿಗಳ ಆರೋಪವಾಗಿದೆ. ಚರಂಡಿಗಳನ್ನು ಕೆಲವೆಡೆ ಅವೈಜ್ಱನಿಕವಾಗಿ ನಿರ್ಮಿಸಲಾಗಿದ್ದು, ಚರಂಡಿ ಮೇಲೆ ಹಾಕಲಾಗಿರುವ ಸ್ಲಾಬ್​ ಕೂಡ ಕಳಪೆಯಿಂದ ಕೂಡಿದೆ. ಕೆಲವು ಸ್ಲಾಬ್​ಗಳು ಮುರಿದುಬಿದ್ದಿರುವುದು ಅದರ ಗುಣಮಟ್ಟವನ್ನು ಸಾರಿ ಹೇಳುತ್ತಿವೆ. ಇನ್ನು ಇದೇ ವಾರ್ಡ್​ನಲ್ಲಿ ನಿರ್ಮಿಸಿರುವ ಡಕ್​ ಕಳಪೆಯ ಪರಮಾವಧಿಯಾಗಿದೆ ಎಂಬುದು ಇಲ್ಲಿನ ನಿವಾಸಿಗಳ ಆರೋಪವಾಗಿದೆ.


ನಗರವಾಸಿಗಳ ಆಕ್ರೋಶ

ಚರಂಡಿಗಳು ಅವೈಾನಿಕವಾಗಿರುವುದು ಒಂದೆಡೆಯಾದರೆ, ರಸ್ತೆ ಕಾಮಗಾರಿಗಾಗಿ ಅಗೆದು ತಿಂಗಳು ಕಳೆದರೂ ಕಾಮಗಾರಿ ಆರಂಭಿಸದ ಹಿನ್ನೆಲೆಯಲ್ಲಿ ಇಲ್ಲಿನ ನಿವಾಸಿಗಳು ಸಾಕಷ್ಟು ಸಮಸ್ಯೆ ಅನುಭವಿಸುವಂತಾಗಿದೆ. ಧೂಳಿನ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಕಾರಣವಾಗಿದೆ. ನಡೆದಿರುವ ಕಾಮಗಾರಿಗಳು ಗುಣಮಟ್ಟದ ಬಗ್ಗೆ ದೂರು ಸಲ್ಲಿಸಿದರೂ, ಈ ಬಗ್ಗೆ ನಗರಸಭೆ ಇಂಜಿನಿಯರ್​ಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಗುತ್ತಿಗೆದಾರ ಕೂಡ ಸ್ಪಂದಿಸುತ್ತಿಲ್ಲ ಎಂಬುದು ಈ ವಾರ್ಡ್​ ನಗರಸಭೆ ಸದಸ್ಯೆ ಲಕ್ಷ್ಮಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮ ವಾರ್ಡ್​ನಲ್ಲಿ ನಡೆದಿರುವ ಕಾಮಗಾರಿಗಳು ಕಳಪೆಯಾಗಿವೆ. ರಸ್ತೆ ಕಾಮಗಾರಿ ಆರಂಭಿಸದಿರುವುದು ಒಂದೆಡೆಯಾದರೆ, ಚರಂಡಿ, ಡಕ್​ ಹಾಗೂ ಸ್ಲಾಬ್​ಗಳು ಗುಣಮಟ್ಟದಿಂದ ಕೂಡಿಲ್ಲ. ಈ ಬಗ್ಗೆ ನಗರಸಭೆ ಇಂಜಿನಿಯರ್​ ಜಯಣ್ಣಗೆ ತಿಳಿಸಿದರೂ ಸ್ಪಂದಿಸಿಲ್ಲ. ಗುತ್ತಿಗೆದಾರರು ಉಡಾಫೆ ಉತ್ತರ ನೀಡುತ್ತಾರೆ. ವಾರ್ಡ್​ ಅಭಿವೃದ್ಧಿಗೆ ನೀಡಿರುವ ಅನುದಾನ ಸದ್ಬಳಕೆಯಾಗುತ್ತಿಲ್ಲ.
> ಲಕ್ಷ್ಮಮ್ಮ 3ನೇ ವಾರ್ಡ್​ ಸದಸ್ಯೆ
ಮೂರನೇ ವಾರ್ಡ್​ನಲ್ಲಿ ನಡೆದಿರುವ ಕಾಮಗಾರಿಗಳನ್ನು ಖುದ್ದಾಗಿ ಪರಿಶೀಲನೆ ನಡೆಸಿದ್ದೇವೆ. ದೊಡ್ಡ ವಾಹನಗಳು ಸಂಚರಿಸಿರುವ ಹಿನ್ನೆಲೆಯಲ್ಲಿ ಒಂದೆರಡು ಸ್ಲಾಬ್​ಗಳು ಒಡೆದಿವೆ. ಇನ್ನು ಡಕ್ ​ಅನ್ನು ಅವೈಜ್ಱನಿಕವಾಗಿ ನಿರ್ಮಿಸದಂತೆ ಗುತ್ತಿಗೆದಾರನಿಗೆ ಈಗಾಗಲೇ ಹೇಳಿದ್ದೇವೆ. ಸಿಸಿ ರಸ್ತೆ ಕಾಮಗಾರಿಯನ್ನು ಶ್ರೀಘ್ರವಾಗಿ ಆರಂಭಿಸಲಾಗುವುದು.
> ಜಯಣ್ಣ
ನಗರಸಭೆ ಎಇಇ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net