ಬೆಳಿಗ್ಗೆ ಎದ್ದರೆ ಕ್ಷೇತ್ರಕ್ಕೆ ಬರುವ ನನಗೆ ಇಲ್ಲಿನ ಜನರೇ ತಂದೆ ತಾಯಿ, ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಎಂದು ಹೇಳಿದರು. ಬಾಲವೇ ನಾಯಿಯನ್ನು ಅಲ್ಲಾಡಿಸಲು ಸಾಧ್ಯವಿಲ್ಲ ಎಂಬ ಸಚಿವ ಎಚ್.ಸಿ. ಮಹದೇವಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಹುಸೇನ್, ನಮ್ಮ ನಾಯಕರಾದ ಮಹದೇವಪ್ಪ ಅವರು ಯಾವ ಅರ್ಥದಲ್ಲಿ ಆ ರೀತಿ ಹೇಳಿದ್ದಾರೊ, ನಾಯಿ ಯಾರು ಹಾಗೂ ಬಾಲ ಯಾರು ಎಂದು ಕರೆದಿದ್ದಾರೋ ಗೊತ್ತಿಲ್ಲ. ಅವರಷ್ಟು ಅನುಭವ ನನಗಿಲ್ಲ. ಆದರೆ, ಡಿ.ಕೆ. ಶಿವಕುಮಾರ್ ಅವರು ಸಿ.ಎಂ ಆಗುತ್ತಾರೆಂಬ ನನ್ನ ಹೇಳಿಕೆಗೆ ಈಗಲೂ ನಾನು ಬದ್ಧ ಎಂದರು ಎಂದು ವಿಶ್ವಾಸ ವ್ಯಕ್ತಪಡಿಸಿದರು.