ರಾಜ್ಯ ಬಂದ್ ಬೆಂಬಲಿಸಲು ವಾಟಾಳ್ ಮನವಿ

ರಾಮನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.
ರಾಮನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕಾವೇರಿ ವಿಚಾರನದಲ್ಲಿ ರಾಜ್ಯಕ್ಕೆ ಅನ್ಯಾಯ
  • ತಮಿಳುನಾಡಿಗೆ ನೀರು ಬಿಡುವಂತೆ ಆದೇಶ
  • ಸಿಡಬ್ಲ್ಯೂಸಿ ಕ್ರಮದ ವಿರುದ್ಧ ಬಂದ್ ಕರೆ
ರಾಮನಗರ: ‘ನಮಗೆ ಕನ್ನಡದ ಹುಚ್ಚು ಇದೆ ದಶಕಗಳಿಂದ ನೂರಾರು ಬಂದ್‌ಗಳನ್ನು ಮಾಡಿದ್ದೇವೆ. ಆಗಸ್ಟ್ 13 ಈ ಬಂದ್‌ನ್ನು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಶಾಂತಿಯುತವಾದ ಬಂದ್ ಕನ್ನಡ ಒಕ್ಕೂಟದ ವತಿಯಿಂದ ಕರೆಯಲಾಗಿದೆ. ರಾಜ್ಯದ ಜನತೆಗೆ ಕಳಕಳಿ ಮನವಿಯೆಂದರೆ ಇದು ಯಾರ ವಿರುದ್ಧವೂ ಅಲ್ಲ ಸಮಗ್ರ ಕನ್ನಡಿಗರ ಬಂದ್ ಆಗಿದೆ’ ಎಂದು ಕನ್ನಡ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕರುನಾಡು ಸೇನೆ ಮತ್ತು ಕನ್ನಡ ವಾಟಾಳ್ ಪಕ್ಷದಿಂದ ಮೇಕೆದಾಟು ಯೋಜನೆ ಜಾರಿಗೆ ಮತ್ತು ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದೆಂದು ಒತ್ತಾಯಿಸಿ ಮೇಕೆಗಳ ಸಮ್ಮೇಳನ ನಡೆಸುವುದರೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ‘ಆಗಸ್ಟ್ 13 ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಟೌನ್‌ಹಾಲ್‌ನಿಂದ ಸ್ವಾತಂತ್ರö್ಯ ಉದ್ಯಾನವನದವರೆವಿಗೂ ಭಾರಿ ಮೆರವಣಿಗೆ ಏರ್ಪಡಿಸಿದ್ದು ಈ ಪ್ರತಿಭಟನೆಯಿಂದ ರಾಜ್ಯಕ್ಕೆ ಮತ್ತು ಸರ್ಕಾರಕ್ಕೆ ಶಕ್ತಿ ನೀಡುವ ಕನ್ನಡಿಗರಿಗೆ ಅದ್ಭುತವಾದ ಸಂದೇಶ ರವಾನೆಯಾಗಿರುವುದರಿಂದ ರಾಜ್ಯವು ಸಂಪೂರ್ಣ ಬಂದ್ ಆಗಿರುತ್ತದೆ’ ಎಂದರು.
‘ಕನ್ನಡ ಒಕ್ಕೂಟದ ವತಿಯಿಂದ ಮಾಡುತ್ತಿರುವ ಬಂದ್ ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು ಎಂಬುದು ಮುಖ್ಯವಲ್ಲ ಇದರ ಜೊತೆಗೆ ಜ್ವಲಂತ ಸಮಸ್ಯೆಗಳಾದ ಕಾವೇರಿ ನ್ಯಾಯಮಂಡಳಿ ತೀರ್ಪನ್ನು ತೀವ್ರವಾಗಿ ವಿರೋಧಿಸುವುದು, ನಮಗೆ ನೀರಿಲ್ಲದಿರುವಾಗ ತಮಿಳುನಾಡಿಗೆ ನೀರು ಬೀಡುವ ಅವಶ್ಯಕತೆಯೇ ಇಲ್ಲ. ಮೇಕೆದಾಟು ಯೋಜನೆ ಮತ್ತು ಮಹದಾಯಿ ಮತ್ತು ಕಳಸ ಬಂಢೂರಿ ಯೋಜನೆ, ಬೆಳಗಾವಿ ನಗರ ಮಹಾಪಾಲಿಕೆ ಬಿಜೆಪಿ ಸದಸ್ಯರು ಕನ್ನಡದ ಮೇಯರ್ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಅಂತ ನಿರ್ಣಯ ಮಾಡಬೇಕೆಂದು ನಾಲ್ಕು ತಿಂಗಳಿನಿAದ ಕನ್ನಡಿಗರು ಸತ್ಯಾಗ್ರಹ ಮಾಡುತ್ತಿದ್ದಾರೆ. ಕೂಡಲೇ ಮಹಾನಗರಪಾಲಿಕೆಯನ್ನು ಸೂಪರ್‌ಸೈಡ್ ಮಾಡಬೇಕು ಹಾಗೂ ಎಂಇಎಸ್ ಮಹಾರಾಷ್ಟç ಏಕೀಕರಣ ಸಮಿತಿ ನಿಷೇಧ ಮಾಡಬೇಕು. ಗಡಿನಾಡು ಅಭಿವೃದ್ಧಿ ಮತ್ತು ಕನ್ನಡಿಗರಿ ಉದ್ಯೋಗ ಸಿಗಬೇಕು. ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಬಿಡುಗಡೆ ಈ ಮೂಲಕ ಉತ್ತರ ಕರ್ನಾಟಕದ ಅಭಿವೃದ್ಧಿ ಆಗಬೇಕಿದೆ. ಆಲಮಟ್ಟಿ ಜಲಾಶಯದ ಎತ್ತರವನ್ನು ಸಂಪೂರ್ಣವಾಗಿ ಏರಿಸಬೇಕು. ಕನ್ನಡದಲ್ಲಿ ನಾಮಫಲಕ, ಪರಭಾಷೀಕರಿಂದ ದಬ್ಬಾಳಿಕೆ ನಿಲ್ಲಬೇಕು. ಕರ್ನಾಟಕದಲ್ಲಿ ಪರಭಾಷೆ ಚಿತ್ರಗಳು ಬಹಿಷ್ಕಾರ ಮಾಡಬೇಕು. ಹಿಂದಿ ಬೇಡವೇ ಬೇಡ. ಬಿಡದಿಯ ಉಪನಗರ ಬೇಡ, ಆನೇಕಲ್ ಮತ್ತು ಬಿಡದಿಯ ರೈತರ ಜಮೀನುಗಳನ್ನು ಸ್ವಾಧೀನ ಕೈಬಿಡಬೇಕು. ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಉದ್ಯೋಗ, ಕನ್ನಡ ಶಾಲಾ ಕಾಲೇಜು, ಸಂಘಗಳನ್ನು ನಡೆಸಲು ಪ್ರತಿವರ್ಷ ೫೦೦ ಕೋಟಿ ಅನುದಾನ, ಕನ್ನಡ ಶಾಲೆಗಳನ್ನು ಖಾಸಗೀಕರಣ ಸಲ್ಲದು. ಕನ್ನಡ ಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಬೇಕು. ಪೊಲೀಸ್‌ರನ್ನು ಅವರವರ ಜಿಲ್ಲೆಯಲ್ಲಿಯೇ ನೇಮಕ ಮಾಡಬೇಕು. ಹಂಪಿ ವಿಶ್ವವಿದ್ಯಾಲಯಕ್ಕೆ ಬೆಂಬಲ ನೀಡಬೇಕಾಗಿದೆ. ಇವೆಲ್ಲದರ ಈಡೇರಿಕೆಗಾಗಿ ಕನ್ನಡ ಒಕ್ಕೂಟವು ಕರ್ನಾಟಕ ಬಂದ್‌ಗೆ ಕರೆ ನೀಡಿದೆ’ ಎಂದರು.
ಕರುನಾಡು ಸೇನೆ ರಾಜ್ಯ ಉಪಾಧ್ಯಕ್ಷ ಜಗದೀಶ್ ಎಂ.ಐಜೂರು, ರಾಜ್ಯ ಉಪಾಧ್ಯಕ್ಷ ಗಂಗಾಧರ್ ವಿ.ಎನ್, ಜಿಲ್ಲಾಧ್ಯಕ್ಷ ಜಯಕುಮಾರ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಲಕ್ಷಿö್ಮ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಹೇಮಂತ್, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಲತಾ, ದಲಿತ ಘಟಕದ ಜಿಲ್ಲಾಧ್ಯಕ್ಷ ಕೆ.ಜಯರಾಮ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಶ್ರೀನಿವಾಸ್, ತಾಲ್ಲೂಕು ಗೌರವಾಧ್ಯಕ್ಷ ಕೆಂಪರಾಜು, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕುಮಾರ್, ಕರುನಾಡು ತಾಲ್ಲೂಕು ಕಾರ್ಯಾಧ್ಯಕ್ಷ ಕುಮಾರ್, ತಾಲ್ಲೂಕು ಕಾರ್ಯದರ್ಶಿ ಪಿ.ಸುರೇಶ್ ಕೊತ್ತಿಪುರ, ವಾಟಾಳ್ ನಾಗರಾಜ್ ಅವರ ಆಪ್ತ ಕಾರ್ಯದರ್ಶಿ ಪಾರ್ಥಸಾರಥಿ, ಇನ್ನಿತರರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net