ರಾಸುಗಳ ಮೂಳೆ ಸಾಗಿಸುತ್ತಿದ್ಧ ವಾಹನ ಜಫ್ತಿ

ಚನ್ನಪಟ್ಟಣದ ಬೈರಾಪಟ್ಟಣ ಬಳಿ ಜಫ್ತಿ ಮಾಡಲಾದ ರಾಸುಗಳ ಮೂಳೆಗಳನ್ನು ಹೂಳಲಾಗುತ್ತಿರುವುದು.
ಚನ್ನಪಟ್ಟಣದ ಬೈರಾಪಟ್ಟಣ ಬಳಿ ಜಫ್ತಿ ಮಾಡಲಾದ ರಾಸುಗಳ ಮೂಳೆಗಳನ್ನು ಹೂಳಲಾಗುತ್ತಿರುವುದು.
Published on

ಚನ್ನಪಟ್ಟಣ:

ರಾಸುಗಳ ಮೂಳೆಗಳನ್ನು ಸಾಗಿಸುತ್ತಿದ್ದ ವಾಹನವನ್ನು ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣ ಗ್ರಾಮದ ಬಳಿ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಾಹನದಲ್ಲಿ ಅಪಾರ ಪ್ರಮಾಣದ ರಾಸುಗಳ ಮೂಳೆಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಗ್ರಾಮಾಂತರ ಠಾಣೆಯ ಪೊಲೀಸರು ಬೈರಾಪಟ್ಟಣ ಗ್ರಾಮದ ಬಳಿ ಇರುವ ಅಯೋಧ್ಯೆ ಹೋಟೆಲ್ ಹತ್ತಿರ ವಾಹನವನ್ನು ಪರಿಶೀಲನೆ ಮಾಡಿದಾಗ ಮೂಳೆಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ಈ ವೇಳೆ ವಾಹನದ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಕೂಡಲೇ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮೂಳೆಗಳ ಮೂಲ, ಅವುಗಳನ್ನು ಎಲ್ಲಿಂದ ಸಂಗ್ರಹಿಸಲಾಗಿದೆ ಹಾಗೂ ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ..

ಇನ್ನು ವಶಪಡಿಸಿಕೊಂಡಿದ್ದ ರಾಸುಗಳ ಮೂಳೆಗಳನ್ನು ನಿಯಮಾನುಸಾರ ಚನ್ನಪಟ್ಟಣದ ಕೋಟೆ ಸ್ಮಶಾನದಲ್ಲಿ ಹೂಳಲಾಗಿದೆ. ಹೆದ್ದಾರಿಯಲ್ಲಿ ಇಂತಹ ಅನುಮಾನಾಸ್ಪದವಾಗಿ ರಾಸುಗಳ ಮೂಳೆ ಸಾಗಾಟ ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಪ್ರಕರಣದ ಸಂಪೂರ್ಣ ಹಿನ್ನೆಲೆಯನ್ನು ಪೊಲೀಸರು ತನಿಖೆ ಮೂಲಕ ಬಹಿರಂಗಪಡಿಸಬೇಕಿದೆ. ವಾಹನದ ಮಾಲೀಕರು ಹಾಗೂ ಸಾಗಾಟದಲ್ಲಿ ಭಾಗಿಯಾಗಿರುವವರ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಈ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net