ಕೇಂದ್ರ ಸರ್ಕಾರ ರಚನೆಗಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಬಿಟ್ಟರೆ ರಾಜ್ಯದಲ್ಲಿ ಇವರ ಮೈತ್ರಿ ಇನ್ನೂ ಚಾಲ್ತಿಗೆ ಬಂದಿಲ್ಲ. ಇದೇ ದಾರಿಯನ್ನು ಜಿಲ್ಲಾಮಟ್ಟದ ನಾಯಕರೂ ಅನುಸರಿಸುತ್ತಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ತವರು ಜಿಲ್ಲೆ ಬೆಂಗಳೂರು ದಕ್ಷಿಣದಲ್ಲಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಪ್ರಬಲ ಅಸ್ತ್ರಗಳು ದೊರೆತರೂ, ಇವುಗಳನ್ನು ಬಳಸಿಕೊಳ್ಳುವಲ್ಲಿ ಎರಡೂ ಪಕ್ಷಗಳು ವಿಲವಾಗುವ ಮೂಲಕ ಮೈತ್ರಿಯ ಬಗ್ಗೆಯೇ ಕಾರ್ಯಕರ್ತರಲ್ಲಿ ಪ್ರಶ್ನೆ ಮೂಡುವಂತೆ ಮಾಡಿದೆ.