ಜಾಲಮಂಗಲ ಶಾಲೆಗೆ ಸ್ಮಾರ್ಟ್ ಬೋರ್ಡ್

ರಾಮನಗರ ತಾಲೂಕು ಜಾಲಮಂಗಲ ಸರ್ಕಾರಿ ಕೆಪಿಎಸ್ ಶಾಲೆಯಲ್ಲಿ ಐಡಿಬಿಐ-ಸಿಎಂಸಿಎ ಸಹಯೋಗದಲ್ಲಿ ಅಳವಡಿಸಲಾದ ಸ್ಮಾರ್ಟ್ ಬೋರ್ಡ್‌ನ್ನು ಡಿಡಿಪಿಐ ಸ್ವಾಮಿ ಉದ್ಘಾಟಿಸಿದರು. ಬಿಇಓ ಸೋಮಲಿಂಗಯ್ಯ ಮುಂತಾದವರು ಇದ್ದರು.
ರಾಮನಗರ ತಾಲೂಕು ಜಾಲಮಂಗಲ ಸರ್ಕಾರಿ ಕೆಪಿಎಸ್ ಶಾಲೆಯಲ್ಲಿ ಐಡಿಬಿಐ-ಸಿಎಂಸಿಎ ಸಹಯೋಗದಲ್ಲಿ ಅಳವಡಿಸಲಾದ ಸ್ಮಾರ್ಟ್ ಬೋರ್ಡ್‌ನ್ನು ಡಿಡಿಪಿಐ ಸ್ವಾಮಿ ಉದ್ಘಾಟಿಸಿದರು. ಬಿಇಓ ಸೋಮಲಿಂಗಯ್ಯ ಮುಂತಾದವರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬ್ಯಾಂಕ್ ಮತ್ತು ಸಿಎಂಸಿಎ ಸಂಸ್ಥೆಯಿಂದ ವಿತರಣೆ
  • ಕಾರ್ಯವನ್ನು ಶ್ಲಾಘಿಸಿದ ಡಿಡಿಪಿಐ ಸ್ವಾಮಿ
ರಾಮನಗರ: ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಬಲಪಡಿಸುವ ನಿಟ್ಟಿನಲ್ಲಿ ಸಿಎಂಸಿಎ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ದಕ್ಷಿಣ ಜಿಲ್ಲೆಯ ಉಪ ನಿರ್ದೇಶಕ ಸ್ವಾಮಿ ಹೇಳಿದರು.
ತಾಲೂಕಿನ ಜಾಲಮಂಗಲ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಖಾಸಗಿ ಬ್ಯಾಂಕ್ ಮತ್ತು ಸಿಎಂಸಿಎ ಸಂಸ್ಥೆ ನೀಡಿರುವ ಸ್ಮಾರ್ಟ್ ಬೋರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಲ್ಲಿ ನಾಗರಿಕ ಪ್ರಜ್ಞೆ, ಪ್ರಜಾಸತ್ತಾತ್ಮಕ ಹಾಗೂ ಸಾಂವಿಧಾನಿಕ ಮೌಲ್ಯಗಳು, ಜೀವನ ಕೌಶಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವಲ್ಲಿ ಸಿಎಂಸಿಎ ಸಂಸ್ಥೆಯ ಮಕ್ಕಳ ಸಿವಿಕ್ ಕ್ಲಬ್ ಕಾರ್ಯಕ್ರಮ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇಂತಹ ಕಾರ್ಯಕ್ರಮಗಳು ಶಿಕ್ಷಣವನ್ನು ಪಠ್ಯಕ್ಕೆ ಸೀಮಿತಗೊಳಿಸದೆ ಬದುಕಿನ ಮೌಲ್ಯಗಳೊಂದಿಗೆ ಜೋಡಿಸುವ ಕೆಲಸ ಮಾಡುತ್ತಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸ್ಮಾರ್ಟ್ ಬೋರ್ಡ್‌ಗಳಂತಹ ಡಿಜಿಟಲ್ ಕಲಿಕಾ ಸಾಧನಗಳಿಂದ ಬೋಧನೆ ಮತ್ತು ಕಲಿಕೆ ಇನ್ನಷ್ಟು ಪರಿಣಾಮಕಾರಿಯಾಗಲಿದ್ದು, ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟ ಹೆಚ್ಚುವುದರೊಂದಿಗೆ ಶಿಕ್ಷಕರ ಬೋಧನಾ ವಿಧಾನಕ್ಕೂ ಹೊಸ ಆಯಾಮ ಸಿಗಲಿದೆ ಎಂದು ಅಭಿಪ್ರಾಯಪಟ್ಟರು. ಈ ಸೌಲಭ್ಯವನ್ನು ಶಿಕ್ಷಕರು ಸಮರ್ಪಕವಾಗಿ ಬಳಸಿಕೊಂಡು ಮಕ್ಕಳಲ್ಲಿ ಡಿಜಿಟಲ್ ಕೌಶಲ್ಯ ಬೆಳೆಸಬೇಕು ಎಂದು ಕರೆ ನೀಡಿದರು.
ಸಿಎಂಸಿಎ ಜಿಲ್ಲಾ ಸಂಯೋಜಕ ವೆಂಕಟೇಶ್ ಮಾತನಾಡಿ, ಶಾಲೆಗೆ ಅಳವಡಿಸಿರುವ 65 ಇಂಚಿನ ಸ್ಮಾರ್ಟ್ ಬೋರ್ಡ್ ಜೊತೆಗೆ ನಿರಂತರ ವಿದ್ಯುತ್ ಪೂರೈಕೆಗೆ ಯುಪಿಎಸ್ ಹಾಗೂ ಒಂದು ವರ್ಷದ ಉಚಿತ ಇಂಟರ್ನೆಟ್ ಸಂಪರ್ಕವನ್ನೂ ಒದಗಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಾದ್ಯಂತ ಸರ್ಕಾರಿ ಶಾಲೆಗಳು, ಕೆಆರ್‌ಐಇಎಸ್ (ಕ್ರೈಸ್) ವಸತಿ ಶಾಲೆಗಳು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಶಾಲೆಗಳು ಸೇರಿ 100 ಸ್ಮಾರ್ಟ್ ಬೋರ್ಡ್‌ಗಳನ್ನು ವಿತರಿಸಲಾಗಿದ್ದು, ಅದರಲ್ಲಿ ಜಿಲ್ಲೆಯಲ್ಲಿ 19 ಶಾಲೆಗಳು ಈ ಸೌಲಭ್ಯ ಪಡೆದಿವೆ ಎಂದು ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿಯೂ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಇನ್ನಷ್ಟು ಶಾಲೆಗಳಿಗೆ ಈ ಯೋಜನೆಯನ್ನು ವಿಸ್ತರಿಸುವ ಆಶಯವಿದೆ ಎಂದರು.
ಕಾರ್ಯಕ್ರಮದಲ್ಲಿ ರಾಮನಗರ ಬಿಇಒ ಸೋಮಲಿಂಗಯ್ಯ, ಶಾಲೆಯ ಮುಖ್ಯ ಶಿಕ್ಷಕ ಚಂದ್ರಯ್ಯ, ಸಹ ಶಿಕ್ಷಕರು, ಸಿಬ್ಬಂದಿ, ಸಿಎಂಸಿಎ ಸೀನಿಯರ್ ಅಸೋಸಿಯೇಟ್ ಸುನೀತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

12 ಶಾಲೆಗಳಿಗೆ ಬೋರ್ಡ್

ಸರ್ಕಾರಿ ಶಾಲೆಗಳಲ್ಲೂ ಅತ್ಯಾಧುನಿಕ ಡಿಜಿಟಲ್ ಶಿಕ್ಷಣವನ್ನು ವಿಸ್ತರಿಸುವ ಮಹತ್ವದ ಹೆಜ್ಜೆಯಾಗಿ, ಐಡಿಬಿಐ ಬ್ಯಾಂಕ್‌ನ ಸಹಯೋಗದಲ್ಲಿ ಸಿಎಂಸಿಎ ಸಂಸ್ಥೆ ಜಾಲಮಂಗಲ ಸರ್ಕಾರಿ ಕೆಪಿಎಸ್ ಶಾಲೆಗೆ 65 ಇಂಚಿನ ಸ್ಮಾರ್ಟ್ ಬೋರ್ಡ್‌ನ್ನು ಕೊಡುಗೆಯಾಗಿ ನೀಡಿದ್ದು, ವಿದ್ಯಾರ್ಥಿಗಳ ಕಲಿಕೆಗೆ ಹೊಸ ದಿಕ್ಕು ತೆರೆದಿದೆ. ಈ ಯೋಜನೆಯಡಿ ಬೆಂಗಳೂರು ದಕ್ಷಿಣ ಜಿಲ್ಲೆಯ 12 ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್‌ಗಳನ್ನು ವಿತರಿಸಲಾಗಿದ್ದು, ಜಾಲಮಂಗಲ ಶಾಲೆಯೂ ಅದರ ಪ್ರಯೋಜನ ಪಡೆದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net