ಹೋಟೆಲ್ ಗೆ ನುಗ್ಗಿ ಸೆಕ್ಯೂರಿಟಿ ಗಾರ್ಡ್ ಕೊಂದರು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಬಿಡದಿ:
ಮಾರಕಾಸ್ತ್ರದಿಂದ ಚುಚ್ಚಿ ಯುವಕನನ್ನ ಬರ್ಭರವಾಗಿ ಹತ್ಯೆ ಮಾಡಿರುವ ಘಟನೆ ಲಕ್ಷ್ಮಿಸಾಗರ ಗೇಟ್ ಬಳಿಯ ಕದಂಬ ಹೋಟೆಲ್ ನಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ನಿಶಾಂತ್ (25) ಕೊಲೆಯಾದ ಯುವಕ ಚನ್ನಪಟ್ಟಣ ತಾಲೂಕಿನ ಕೊಂಡಾಪುರ ಗ್ರಾಮದವನಾದ ಈತ ಕಳೆದ ಎರಡು ತಿಂಗಳಿನಿಂದ ಇದೇ ಹೋಟೆಲ್ ನಲ್ಲಿ ರಾತ್ರಿ ಪಾಳಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಹಗಲಿನಲ್ಲಿ ಬೆಂಗಳೂರಿನಲ್ಲಿ ಕೋರಿಯರ್ ಬಾಯ್ ಆಗಿ ಕೆಲಸ ನಿರ್ವಹಿಸುತ್ತಿದ್ದ.
ಎಂದಿನಂತೆ ಗುರುವಾರ ರಾತ್ರಿ ಹೋಟೆಲ್ ಗೆ ಕೆಲಸ ಮಾಡುತ್ತಿದ್ದ ವೇಳೆ, ಸುಮಾರು 12 ಗಂಟೆ ವೇಳೆಗೆ 3-4 ಮಂದಿಯ ತಂಡವೊಂದು ಹೋಟೆಲ್ ನುಗ್ಗಿ ಕಿವಿಯ ಭಾಗದಲ್ಲಿ ಬಲವಾದ ಆಯುಧದಿಂದ ಚುಚ್ಚಿದ್ದಾರೆ. ಇದರಿಂದ ತೀವ್ರ ರಕ್ತ ಸ್ರಾವವಾಗಿ ಯುವಕ ಮೃತ ಪಟ್ಟಿದ್ದಾನೆ. ಈ ವೇಳೆ ಹೋಟೆಲ್ ನಲ್ಲಿದ್ದ ಇಬ್ಬರು ಅಡುಗೆ ಸಿಬ್ಬಂದಿಗಳು ನಿದ್ರೆಗೆ ಜಾರಿದ್ದರು. ಕೊಲೆ ಮಾಡಿದ ನಂತರ ಹೋಟೆಲ್ ನ ಸಿಸಿಟಿವಿ ಡಿವಿಆರ್ ಅನ್ನೂ ಕೊಲೆ ಮಾಡಿದವರು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಶುಕ್ರವಾರ ಮುಂಜಾನೆ ಹೋಟೆಲ್ ಸಿಬ್ಬಂದಿ ಎದ್ದು ನೋಡಲಾಗಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಬಿಡದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಿಡದಿ ಠಾಣೆ ಸಿಪಿಐ ಶಂಕರ್ ನಾಯಕ್ ಭೇಟಿ ನೀಡಿ ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳದ ಸಿಬ್ಬಂದಿಗಳನ್ನ ಕರೆಸಿ ತಪಾಸಣೆ ಮಾಡಿಸಿದ್ದರು.
ಘಟನಾ ಸ್ಥಳಕ್ಕೆ ಎಸ್.ಪಿ ಶ್ರೀನಿವಾಸ್ ಗೌಡ, ಎಎಸ್ಪಿ ರಾಮಚಂದ್ರಯ್ಯ, ಡಿವೈಎಸ್ಪಿ ಶ್ರೀನಿವಾಸ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.
ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕನನ್ನ ಹೋಟೆಲ್ ಒಳಗೆ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಯಾವ ವಿಚಾರಕ್ಕೆ ಕೊಲೆ ನಡೆದಿದೆ ಎಂಬುದರ ಬಗ್ಗೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಈತನ ವಿರುದ್ಧ ಬೆಂಗಳೂರಿನ ಒಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಬಗ್ಗೆ ಮಾಹಿತಿ ಇದೆ ಅದರ ಬಗ್ಗೆ ಕೂಡ ಮಾಹಿತಿ ಕಲೆ ಹಾಕಲಾಗುತ್ತಿದೆ.
ಶ್ರೀನಿವಾಸಗೌಡ, ಎಸ್.ಪಿ, ಬೆಂಗಳೂರು ದಕ್ಷಿಣ ಜಿಲ್ಲೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net