ಜಮೀನಿನ ರಸ್ತೆ ವಿಚಾರವಾಗಿ ಹತ್ಯೆಗೆ ಸಂಚು

ಕ್ರೈಂ
ಕ್ರೈಂ
Published on

ಪ್ರಮುಖ ಮುಖ್ಯಾಂಶಗಳು

  • ಜಮೀನು ವಿವಾದ ಹಿನ್ನೆಲೆಯಲ್ಲಿ ಹತ್ಯೆಗೆ ಸಂಚು
  • ಕೋಡಿಹಳ್ಳಿ ಪೊಲೀಸರಿಂದ ಇಬ್ಬರ ಬಂಧನ
  • ಹೈ ಕೋರ್ಟ್ ವಕೀಲ್ ಮೋಹನ್ ಅವರ ಮೇಲೆ ದಾಳಿ

ಕನಕಪುರ

ಜಮೀನಿನರಸ್ತೆ ವಿಚಾರವಾಗಿ ವಕೀಲನ ಮೇಲೆ ಶನಿವಾರನಾಡಬಂದೂಕಿನಿಂದ ೈಯರ್ ಮಾಡಿ ಹತ್ಯೆಗೆಯತ್ನಿಸಿದ್ದ ಇಬ್ಬರನ್ನು ಕೋಡಿಹಳ್ಳಿ ಪೊಲೀಸರು ಬಂಧಿಸಿ ನ್ಯಾಯಾಂಗಬಂಧನಕ್ಕೆ ಒಪ್ಪಿಸಿದ್ದಾರೆ.

ಸುಂಡಘಟ್ಟಗ್ರಾಮದ ಶಿವಣ್ಣ(55) ಹಾಗೂ ಕೆಬ್ಬರೆ ನಾಗರಾಜ್(56)ಬಂಧಿತರು. ವಕೀಲ ಎನ್.ಸಿ.ಮೋಹನ್ (53) ಬೆನ್ನಿಗೆ ಗುಂಡು ತಗುಲಿ ಗಂಭೀರಗಾಯಗೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.

ಪ್ರಕರಣವೇನು?:

ವಕೀಲ ಎನ್.ಸಿ.ಮೋಹನ್ಗೆ(53) 15 ವರ್ಷಗಳ ಹಿಂದೆ ಆರೋಪಿ ಶಿವಣ್ಣ2 ಎಕರೆ ಜಮೀನು ಮಾರಾಟ ಮಾಡಿದ್ದರು. ಜಮೀನಿನ ಪಕ್ಕದಲ್ಲೇಮಾದಪ್ಪ ಎಂಬುವವರಿಂದಲೂ 2 ಎಕರೆ ಜಮೀನು ಖರೀದಿಸಿಮೋಹನ್ ಮನೆ ನಿರ್ಮಿಸಿದ್ದರು. ಪಕ್ಕದಲ್ಲಿದ್ದಇನ್ನೂ 2 ಎಕರೆ ಜಮೀನನ್ನು ಶಿವಣ್ಣಮತ್ತೊಬ್ಬರಿಗೆ ಮಾರಾಟ ಮಾಡಿದ್ದ. ಆದರೆ,ಅವರಿಂದಲೂ ಜಮೀನನ್ನು ಮೋಹನ್ ಖರೀದಿಸಿದ್ದರು.

ಶಿವಣ್ಣತನ್ನ ಉಳಿದ ಜಮೀನಿಗೆ ಜಾಗದಲ್ಲಿಯೇ ಓಡಾಡಬೇಕಿತ್ತು. ಹಾಗಾಗಿ ಉಳಿಕೆ ಜಮೀನನ್ನುಬರೆದುಕೊಡುವಂತೆ ಶಿವಣ್ಣನಿಗೆ ವಕೀಲ ದಾರಿ ಬಿಡದೆಕಿರುಕುಳ ನೀಡುತ್ತಿದ್ದ. ಅಷ್ಟೇ ಅಲ್ಲದೆ, ವಕೀಲಮೋಹನ್ ಖರೀದಿಸಿ ಜಮೀನಿನ ಉಳಿಕೆಹಣವನ್ನು ಶಿವಣ್ಣನಿಗೆ ನೀಡಿರಲಿಲ್ಲ. ಇದರಿಂದ ಶಿವಣ್ಣ ಮತ್ತುವಕೀಲನ ನಡುವೆ ಆಗಾಗ್ಗೆ ಜಗಳನಡೆಯುತ್ತಿತ್ತು. ನ್ಯಾಯಪಂಚಾಯಿತಿಯನ್ನೂ ನಡೆಸಲಾಗಿತ್ತು. ವಕೀಲನ ಕಿರುಕುಳದಿಂದ ಬೇಸತ್ತಶಿವಣ್ಣ ಪಕ್ಕದ ಕೆಬ್ಬೆರೆ ಗ್ರಾಮದಪ್ರಕರಣವೊಂದರ ಕೊಲೆ ಆರೋಪಿ ನಾಗರಾಜ್ಎಂಬುವವನೊಂದಿಗೆ ಸೇರಿಕೊಂಡು ವಕೀಲನ ಕೊಲೆಗೆ ಸಂಚುರೂಪಿಸಿದ್ದರು. ಶನಿವಾರ ವಕೀಲನ ಾರ್ಮ್ಹೌಸ್ಬಳಿ ಹತ್ಯೆ ಮಾಡಲು ಇಬ್ಬರೂಕಾದು ಕುಳಿತಿದ್ದರು. ಮೋಹನ್ ಮನೆಯಿಂದ ಹೊರಬರುತ್ತಿದ್ದಂತೆಯೇ ನಾಗರಾಜು ನಾಡಬಂದೂಕಿನಿಂದ ಫೈಯರ್ಮಾಡಿದ್ದಾನೆ.

ಮೋಹನ್ ನೀಡಿದ ದೂರಿನ ಮೇರೆಗೆತನಿಖೆ ಕೈಗೊಂಡ ಸಬ್ಇನ್ಸ್ಪೆಕ್ಟರ್ಪ್ರದೀಪ್, ಮುಖ್ಯಪೇದೆಗಳಾದ ಮೋಹನ್, ನಂಜಯ್ಯ, ಕೈಲಾಶ್,ಗಿರೀಶ್ ಅವರು ಆರೋಪಿಗಳಿಬ್ಬರನ್ನು ಬಂಧಿಸಿನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net