ಹೈಟೆಕ್​ ಶೌಚಗೃಹ ಪೂರ್ಣಗೊಳಿಸಲು ಮೀನಮೇಷ

ಶೌಚಾಲಯ ಸಾಂದರ್ಭಿಕ ಚಿತ್ರ
ಶೌಚಾಲಯ ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ರಾಮನಗರದಲ್ಲಿ ಸಾರ್ವಜನಿಕರ ಪರದಾಟ
  • 2 ವರ್ಷ ಕಳೆದರೂ ಪೂರ್ಣಗೊಳ್ಳದ ಕಾಮಗಾರಿ





ರಾಮನಗರ
ಹಳೇ ಬಸ್​ ನಿಲ್ದಾಣ ಸಮೀಪದ ಕೆಂಗಲ್​ ಹನುಮಂತಯ್ಯ ವೃತ್ತದ ಬಳಿ ಅರ್ಕಾವತಿ ನದಿ ದಂಡೆಗೆ ಹೊಂದಿಕೊಂಡಂತೆ ನಗರಸಭೆ ನಿರ್ಮಿಸುತ್ತಿರುವ ಸುಸಜ್ಜಿತ ಹೈಟೆಕ್​ ಶೌಚಗೃಹ ಕಾಮಗಾರಿ ಶುರುವಾಗಿ 2 ವರ್ಷ ಕಳೆದರೂ ಪೂರ್ಣಗೊಂಡಿಲ್ಲ,

ಇದೇ ಸ್ಥಳದಲ್ಲಿ ಇದ್ದ ಶೌಚಗೃಹ ಹಳೆಯದಾದ ಕಾರಣ ನಗರಸಭೆ ಹೊಸ ಕಟ್ಟಡ ನಿರ್ಮಾಣಕ್ಕೆ ಟೆಂಡರ್​ ನೀಡಿ ಕೆಲಸ ಪ್ರಾರಂಭಿಸಿತ್ತು. ಆದರೆ, ಗುತ್ತಿಗೆದಾರರು ಕೆಲಸ ನಿಧಾನವಾಗಿ ಮಾಡುತ್ತಿದ್ದು, ಉದ್ಘಾಟನೆ ತಡವಾಗುತ್ತಿದೆ ಎನ್ನಲಾಗಿದೆ.
ಹಳೇ ಬಸ್​ ನಿಲ್ದಾಣ ಜನರಿಗೆ ಪ್ರಮುಖ ಸಂಪರ್ಕ ಕೇಂದ್ರ. ಈ ಸ್ಥಳದಲ್ಲಿ ಸರ್ಕಾರಿ ಕಚೇರಿಗಳು, ಹೋಟೆಲ್​, ದಿನಸಿ ಅಂಗಡಿ,
ವಾಣಿಜ್ಯ ಅಂಗಡಿ ಮಳಿಗೆಗಳು, ನೂರಾರು ಬೀದಿ ಬದಿ ವ್ಯಾಪಾರಿಗಳು, ಆಟೋ ರೀಾ ಸ್ಟಾ$ಂಡ್​, ಪಶು ಆಸ್ಪತ್ರೆ, ಖಾಸಗಿ ಕಾರ್ಖಾನೆ, ಆಸ್ಪತ್ರೆಗಳಿವೆ. ಆಟೋ ಚಾಲಕರು, ವ್ಯಾಪಾರಕ್ಕೆ ಬರುವ ಜನರು, ರೈಲು, ಬಸ್​ ನಿಲ್ದಾಣಕ್ಕೆ ತೆರಳುವ ಸಾರ್ವಜನಿಕರಿಗೆ, ಕಚೇರಿ ಕೆಲಸಗಳಿಗೆ ಬರುವ ಜನರಿಗೆ, ಪ್ರಯಾಣಿಕರಿಗೆ ಇಲ್ಲಿ ಶೌಚಗೃಹ ಅತ್ಯಗತ್ಯ. ಆದರೆ ಕಾಮಗಾರಿ ಪೂರ್ಣಗೊಳ್ಳದೆ ಜನ ಪರದಾಡುವಂತಾಗಿದೆ. ಕಾಮಗಾರಿ ಮುಗಿಯುವವರೆಗೂ ಪ್ರಮುಖ ರಸ್ತೆಗಳಲ್ಲಿ ತಾತ್ಕಾಲಿಕ ಮೊಬೈಲ್​ ಶೌಚಗೃಹ ವ್ಯವಸ್ಥೆ ಮಾಡಲು ನಗರಸಭೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಬೇರೆ ಶೌಚಗೃಹ ಇಲ್ಲ


ಹಳೇ ಬಸ್​ ನಿಲ್ದಾಣ ಶೌಚಗೃಹ ಕಾಮಗಾರಿ ಮಾಡುತ್ತಿರುವ ಸ್ಥಳದ ಅಕ್ಕಪಕ್ಕದಲ್ಲಿ ಬೇರೆ ಶೌಚಗೃಹ ಇಲ್ಲ. 500 ಮೀಟರ್​ಗೂ ದೂರದ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿದೆ. ಸ್ವಲ್ಪ ದೂರದಲ್ಲೇ ಅರ್ಕಾವತಿ ನದಿಯ ಇನ್ನೊಂದು ದಂಡೆಯ ಡಾ.ರಾಜ್​ಕುಮಾರ್​ ಕಾಂಪ್ಲೆಕ್ಸ್​ ಆವರಣದಲ್ಲಿ ನಿರ್ಮಾಣ ಮಾಡಿದ್ದ ಶೌಚಗೃಹ ನೀರಿನ ವ್ಯವಸ್ಥೆ ಇಲ್ಲದೆ ಬಾಗಿಲು ಹಾಕಿ ಅನೇಕ ವರ್ಷಗಳೇ ಕಳೆದಿವೆ. ಅದಾದರೂ ಇದ್ದರೆ ಅನುಕೂಲ ಆಗುತ್ತಿತ್ತು ಎನ್ನುತ್ತಾರೆ ರಾಮನಗರದ ನಾರಾಯಣ್​.

ವೃದ್ಧರು, ಮಹಿಳೆಯರಿಗೆ ಸಮಸ್ಯೆ


ಸುತ್ತಮುತ್ತಲೂ ಯಾವುದೇ ಶೌಚಗೃಹ ಇಲ್ಲದ ಕಾರಣ ನಗರಕ್ಕೆ ಬರುವ ಮಹಿಳೆಯರು, ವೃದ್ಧರಿಗೆ, ಬೀದಿ ಬದಿ ವ್ಯಾಪಾರಿ ಮಹಿಳೆಯರಿಗೆ ಸಮಸ್ಯೆ ಉಂಟಾಗುತ್ತಿದೆ. ಶೌಚಗೃಹ ಕಟ್ಟಡ ನಿರ್ಮಾಣ ಶ್ರೀ ಆಗಬೇಕು ಎನ್ನುತ್ತಾರೆ ಮಹಿಳೆ ಗೌರಮ್ಮ.


ಖಾಲಿಜಾಗ ಹುಡುಕುವ ಪುರುಷರು


ನಗರಸಭೆ ಹಳೇ ಬಸ್​ ನಿಲ್ದಾಣದಲ್ಲಿ ಶೌಚಗೃಹ ನಿರ್ಮಾಣ 2 ವರ್ಷಗಳಿಂದಲೂ ಕುಂಟುತ್ತ ಸಾಗಿದೆ. ಹೀಗಾಗಿ ಪುರುಷರು ಎಪಿಎಂಸಿ&ಕೋರ್ಟ್​ರಸ್ತೆ ಖಾಲಿ ಜಾಗ, ಕರಗದಬೀದಿ ಸಂಪರ್ಕ ಕಲ್ಪಿಸುವ ಅರ್ಕಾವತಿ ಸೇತುವೆ ಅಕ್ಕಪಕ್ಕದಲ್ಲಿ ಜಲಭಾಧೆ ತೀರಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.


ಹಳೇ ಬಸ್​ ನಿಲ್ದಾಣದ ಶೌಚಗೃಹ ಕಟ್ಟಡ ಹಳೆಯದಾಗಿದ್ದು, ಜನರ ಬಳಕೆಗೆ ಸಮಸ್ಯೆಯಾಗುತ್ತಿದ್ದ ಕಾರಣ ವೈಜ್ಞಾನಿಕವಾಗಿ ಸುಸಜ್ಜಿತ ಹೊಸ ಕಟ್ಟಡ ನಿರ್ಮಾಣ ಮಾಡಲು ಅಗತ್ಯ ಕಾಮಗಾರಿ ಕೈಗೊಳ್ಳಲಾಗಿದೆ. ಹೊಸ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಮುಂದಿನ ತಿಂಗಳು ಉದ್ಘಾಟನೆ ಕಾಣಲಿದೆ.
> ಕೆ. ಶೇಷಾದ್ರಿ (ಶಶಿ) ಅಧ್ಯಕ್ಷರು, ನಗರಸಭೆ, ರಾಮನಗರ


ರೇಷ್ಮೆ ಮಾರುಕಟ್ಟೆ ಸಮೀಪ, ಗಾಂಧಿ ಪಾರ್ಕ್​, ಕಂದಾಯ ಭವನದ ಮುಂಭಾಗ ಶೌಚಗೃಹಗಳನ್ನು ನಿರ್ಮಾಣ ಮಾಡಲಾಗಿದ್ದು, ಶ್ರೀದಲ್ಲೇ ಸಾರ್ವಜನಿಕ ಬಳಕೆಗೆ ಬರಲಿವೆ. ಹಳೇ ಬಸ್​ ನಿಲ್ದಾಣದ ಶೌಚಗೃಹ ಕಾಮಗಾರಿ ಖಾಸಗಿ ಸರ್ಕಾರಿ ಸಹಭಾಗಿತ್ವದಲ್ಲಿ ನಿರ್ವಹಣೆ ಮಾಡಿ ನಡೆಸಲು ಉದ್ದೇಶಿಸಲಾಗಿದೆ. ಶ್ರೀ ಉದ್ಘಾಟನೆ ಕಾಣಲಿದೆ.
> ಡಾ. ಜಯಣ್ಣ, ಆಯುಕ್ತರು, ನಗರಸಭೆ, ರಾಮನಗರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net