ಒಳಚರಂಡಿ, ಮ್ಯಾನ್‌ಹೋಲ್‌ಗಳು ಒಡೆದು ಹಾಳಾಗಿರುವುದರಿಂದ ರಸ್ತೆಯಲ್ಲಿ ಕೊಳಚೆ ನೀರು ನಿಂತು ಕೆರೆಯಂತಾಗಿದೆ. ಇದರಿಂದಾಗಿ ಸುತ್ತಮುತ್ತಲ ಪ್ರದೇಶ ಗಬ್ಬು ನಾರುತ್ತಿದೆ. ಈ ರಸ್ತೆಯಲ್ಲಿ ನಿತ್ಯ ಓಡಾಡುವ ಸಾವಿರಾರು ವಿದ್ಯಾರ್ಥಿಗಳು, ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ. ಇದೇ ರಸ್ತೆ ಬದಿಯಲ್ಲಿ ಹೋಟೆಲ್ ಇದೆ. ಮೂಗು ಮುಚ್ಚಿಕೊಂಡೇ ಉಪಾಹಾರ, ಊಟ ಸೇವಿಸಬೇಕು, ಸುತ್ತಮುತ್ತಲ ಮನೆಯವರು ದುರ್ವಾಸನೆಗೆ ಸದಾ ಮನೆಬಾಗಿಲು ಮುಚ್ಚಿದ್ದಾರೆ.