ಸೂರಿಲ್ಲದೆ ಬಯಲಲ್ಲೇ ಬದುಕು

ಮನೆ ಸಾಂದರ್ಭಿಕ ಚಿತ್ರ
ಮನೆ ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ರಾಜೀವ್ ಗಾಂಧಿ ವಸತಿ ನಿಗಮದ ಸಮೀಕ್ಷೆ
  • ಜಿಲ್ಲೆಯಲ್ಲಿ ಸಾವಿರಾರು ಮಂದಿಗೆ ಇಲ್ಲದೆ ಸ್ವಂತ ಸೂರು
  • ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕಿದೆ
ರಾಮನಗರ: ರಾಜಧಾನಿ ಬೆಂಗಳೂರಿಗೆ ಹತ್ತಿರದಲ್ಲೇ ಇರುವ ಈಗಿನ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಇನ್ನು ಸಾವಿರಾರು ಮಂದಿಗೆ ಸ್ವಂತ ಸೂರು ಇಲ್ಲ ಎನ್ನುವ ಸತ್ಯ ಅಧಿಕಾರಿಗಳು ಸಭೆಯಲ್ಲಿ ನೀಡುವ ಮಾಹಿತಿಯಿಂದಲೇ ಬಹಿರಂಗಗೊಂಡಿದೆ.
ಹಿಂದಿನ ರಾಮನಗರ ಈಗಿನ ಬೆಂಗಳೂರು ದಕ್ಷಿಣ ಜಿಲ್ಲೆ ಘಟಾಣುಘಟಿ ರಾಜಕಾರಣಿಗಳನ್ನು ರಾಜ್ಯಕ್ಕೆ ದೇಶಕ್ಕೆ ಕೊಡುಗೆ ನೀಡಿದ ಜಿಲ್ಲೆ. ಈಗಲೂ ರಾಜ್ಯದಲ್ಲಿ ಛಾಪು ಮೂಡಿಸುತ್ತಿರುವ ರಾಜಕಾರಣಗಳಲ್ಲಿ ಇಲ್ಲಿನವರೇ ಹೆಚ್ಚು. ಆದರೆ ಸ್ವಂತ ಮನೆ ಕಟ್ಟಿಕೊಳ್ಳಬೇಕು ಎನ್ನುವ ಬಡ ಜೀವಿಗಳ ಕನಸನ್ನು ನನಸು ಮಾಡುವಲ್ಲಿ ಇವರು ಹಿಂದೆ ಬಿದ್ದಿದ್ದಾರೆ ಎನ್ನುವುದು ಸತ್ಯವಾಗಿದೆ.
ಹೌದು.., ಜಿಲ್ಲೆಯಲ್ಲಿ ರಾಜೀವ್‌ಗಾಂಧಿ ವಸತಿ ನಿಗಮದ ವತಿಯಿಂದ ನಡೆಸಿರುವ ಸಮೀಕ್ಷೆಯ ಪ್ರಕಾರ 68572 ಕುಟುಂಬಗಳಿಗೆ ಇಂದಿಗೂ ಸ್ವಂತ ವಸತಿ ಇಲ್ಲ. ಈ ಪೈಕಿ 27504 ಕುಟುಂಬಗಳಿಗೆ ಸ್ವಂತ ನಿವೇಶನವೇ ಇಲ್ಲವಾಗಿದ್ದು, ತಮ್ಮದೊಂದು ನೆಲೆ ವಾಡಿಕೊಳ್ಳಲು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಗ್ರಾಮೀಣದಲ್ಲೇ ಹೆಚ್ಚು

ಜಿಲ್ಲೆಯಲ್ಲಿ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದಲ್ಲೇ ಅತಿಹೆಚ್ಚು ಮಂದಿ ವಸಿ ರಹಿತರು ಇದ್ದಾರೆ. ನಗರ ಪ್ರದೇಶದಲ್ಲಿ 26902 ಕುಟುಂಬಗಳು ನಿವೇಶವಿದ್ದು ವಸತಿ ನಿರ್ವಾಣ ಸಾಧ್ಯವಾಗದಿರುವವರು ಇದ್ದರೆ, 18629 ಕುಟುಂಬಗಳಿಗೆ ಸ್ವಂತ ನಿವೇಶನವೇ ಇಲ್ಲವಾಗಿದೆ. ಇನ್ನು ಜಿಲ್ಲೆಯ ನಗರ ಪ್ರದೇಶದಲ್ಲಿ 14166 ಕುಟುಂಬಗಳು ಸ್ವಂತ ನಿವೇಶನ ಹೊಂದಿದ್ದರು ವಸತಿ ರಹಿತವಾಗಿವೆ. 8885 ಕಟುಂಬಗಳ ಬಳಿ ವಸತಿಯೂ ಇಲ್ಲ ನಿವೇಶನವೂ ಇಲ್ಲ ಎಂಬಂತಾಗಿದೆ.

ಕನಸಾಗೇ ಉಳಿದ ವಸತಿ ಯೋಜನೆ:

ರಾಜ್ಯ ಸರ್ಕಾರ ಪ್ರತಿವರ್ಷ ಇಂದಿರಾ ಆವಾಸ್, ಬಸವ ವಸತಿ ಯೋಜನೆ, ಅಂಬೇಡ್ಕರ್ ವಸತಿ ಯೋಜನೆ ಇವೇ ಮೊದಲಾದ ವಸತಿ ಯೋಜನೆಗಳ ಮೂಲಕ ಮನೆಗಳ ನಿರ್ವಾಣಕ್ಕೆ ನೆರವು ನೀಡುತ್ತಿದೆ. ಇದರಲ್ಲಿ ಕೇಂದ್ರದ ಪಾಲೂ ಇರುತ್ತದೆ. ಆದರೆ ಕೊಡುವ ಅಷ್ಟಿಷ್ಟು ಹಣದಲ್ಲಿಯೇ ಸಣ್ಣದೊಂದಿಗೆ ಮನೆ ಕಟ್ಟಿಕೊಳ್ಳಬೇಕು ಎಂದು ಹಂಬಿಲಿಸುವರಿಗೆ ಸರ್ಕಾರದಿಂದ ಬಿಡುಗಡೆಯಾಗುವ ವಸತಿ ಯೋಜನೆ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಕೆಲ ರಾಜಕೀಯ ಪ್ರಭಾವ, ಕೆಳಹಂತದ ಅಧಿಕಾರಸ್ಥರ ಸ್ವಜನ ಪಕ್ಷಪಾತ ಕೆಲ ಕಡು ಬಡ ಕುಟುಂಬಗಳಿಗೆ ವಸತಿ ಯೋಜನೆ ತಲುಪದಂತೆ ವಾಡಿವೆ.

ರಾಜಕೀಯವಾದ ನಿವೇಶನ ಹಂಚಿಕೆ:

ಕಳೆದ ಹಲವಾರು ವರ್ಷಗಳಲ್ಲಿಂದಲೂ ಜಿಲ್ಲೆಯ ಜನತೆ ಸೂರು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ರಾಜಕಾರಣಿಗಳ ಬಣ್ಣದ ಮಾತುಗಳು ಬಣ್ಣ ಕಳೆದುಕೊಳ್ಳುತ್ತಿವೆ. ಪ್ರತಿ ಚುನಾವಣೆ ಸಂದರ್ಭದಲ್ಲಿ ಇದು ರಾಜಕೀಯ ಪಕ್ಷಗಳ ನಡುವಿನ ಕೆಸರೆರಚಾಟವಾಗಿಯೇ ಉಳಿದುಕೊಂಡಿದೆ.
ಜಿಲ್ಲೆಯಲ್ಲಿ ಈಗ ಭೂಮಿಗೆ ಭಾರೀ ಬೇಡಿಕೆ ಇದೆ. ಮತ್ತೊಂದೆಡೆ ಸರ್ಕಾರಿ ಜಾಗದ ಕೊರತೆ ಸಹ ರಾಜಕಾರಣಿಗಳ ಭರವಸೆಗಳು ಈಡೇರಡದಂತೆ ಮಾಡುವಲ್ಲಿ ತಡೆಯೊಡ್ಡಿವೆ. ಇದರಿಂದಾಗಿ ಜಿಲ್ಲೆಯಲ್ಲಿ ಬಡವರಿಗೆ ನಿವೇಶನ ಕಲ್ಪಿಸುವ ಯೋಜನೆ ಇತ್ತೀಚಿನ ವರ್ಷಗಳಲ್ಲಿ ರೂಪು ಗೊಂಡೇ ಇಲ್ಲ.
ಕಳೆದ ವರ್ಷ ನಡೆದ ಚನ್ನಪಟ್ಟಣ ಉಪಚುನಾವಣೆಯ ಸಮಯದಲ್ಲಿ ವಸತಿ ಯೋಜನೆಯ ಬಗ್ಗೆ ಸಾಕಷ್ಟು ಭರವಸೆಗಳು ಹರಿದು ಬಂದವಾದರೂ ವರ್ಷ ಕಳೆದರೂ ಇನ್ನೂ ಒಂದೇ ಒಂದು ಬಡಾವಣೆ ನಿರ್ಮಿಸಿ ವಸತಿ ಹಂಚಿಕೆ ಕಾರ್ಯ ನಡೆದಿಲ್ಲ. ಇಂದಿಗೂ ವಸತಿ ಯೋಜನೆಗಳು ರಾಜಕಾರಣಿಗಳ ಭಾಷಣಕ್ಕೆ ಸೀಮಿತವಾಗಿದ್ದು, ನಮಗೆ ಹಕ್ಕು ಪತ್ರ ಎಂದಿಗೆ ಸಿಗಲಿದೆ ಎಂದು ಜನತೆ ಎದುರು ನೋಡುತ್ತಿದ್ದಾರೆ. ರಾಮನಗರದಲ್ಲಿ ಜಾಗ ಗುರ್ತಿಸುವಿಕೆ ಕೆಲಸ ನಡೆದಿದೆಯಾದರ ಯೋಜನೆ ಯಾವ ಹಂತಕ್ಕೆ ತಲುಪಿದೆ ಎನ್ನುವ ಮಾಹಿತಿಯೇ ಇಲ್ಲ.

ಮನೆ ಕೊಟ್ಟೇ ಇಲ್ಲ

ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ರಾಮನಗರದ ದೊಡ್ಡ ಮಣ್ಣುಗುಡ್ಡೆ ಪ್ರದೇಶದಲ್ಲಿ ರಾಮನಗರದ ವಸತಿ ರಹಿತರಿಗಾಗಿ 242 ಮನೆಗಳನ್ನು ನಿರ್ಮಾಣ ಮಾಡಿದರು. ಆದರೆ ಈ ಮನೆಗಳು ಇನ್ನು ಮಣ್ಣು ಹಿಡಿಯುವ ಹಂತಕ್ಕೆ ಬಂದಿವೆಯಾದರೂ ಅವುಗಳನ್ನು ಅರ್ಹರಿಗೆ ತಲುಪಿಸುವ ಕೆಲಸ ಮಾಡಲೇ ಇಲ್ಲ.
"

ವಸತಿ ರಹಿತರಿಗೆ ಸೂರುಕಟ್ಟಿಕೊಳ್ಳಲು ಬೇಕಾದ ನೆರವು ನೀಡಬೇಕು ಎನ್ನುವುದು ನನ್ನ ಕನಸು. ಈಗಾಗಲೇ ರಾಮನಗರ ಕ್ಷೇತ್ರ ವ್ಯಾಪ್ತಿಯಲ್ಲಿ ನಿವೇಶನ ರಹಿತ ಬಡವರಿಗೆ 5 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಕ್ಷೇತ್ರದಲ್ಲಿ ಹಂಚಿಕೆ ವಾಡಲಾಗುವುದು. ಈ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುವಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರ ಜೊತೆಯೂ ಚರ್ಚಿಸಲಾಗಿದೆ. ಸದ್ಯದಲ್ಲೇ ನಿವೇಶನ ನಿರ್ವಾಣಕ್ಕೆ ಕ್ರಮವಹಿಸಲಾಗುವುದು. ಎಚ್.ಎ. ಇಕ್ಬಾಲ್‌ಹುಸೇನ್, ಶಾಸಕ ರಾಮನಗರ

ಜಿಲ್ಲೆಯಲ್ಲಿ ನಿವೇಶನ ಮತ್ತು ವಸತಿ ರಹಿತರ ವಿವರ
ವಸತಿ ರಹಿತರು ನಿವೇಶನ ರಹಿತರು
ನಗರ 14166 8885
ಗ್ರಾವಾಂತರ 26902 18629
ಒಟ್ಟು 41068 27504
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net