ಕನಕಪುರ ತಾಲೂಕಿನ ಭಾಗವಾಗಿದ್ದ ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿಗಳನ್ನು ಬೇರ್ಪಡಿಸಿ ಹಾರೋಹಳ್ಳಿಯನ್ನು ತಾಲೂಕು ಕೇಂದ್ರವಾಗಿಸಿಕೊಂಡು ಹೊಸ ತಾಲೂಕು ರಚನೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಇದರಲ್ಲಿ 2 ಹೋಬಳಿಗಳ 26 ಕಂದಾಯ ವೃತ್ತಗಳು, 252 ಗ್ರಾಮಗಳನ್ನು ಬೇರ್ಪಡಿಸಿ ನೂತನ ತಾಲೂಕು ರಚಿಸಲಾಗಿದೆ. ಪೂರ್ವಕ್ಕೆ ತಮಿಳುನಾಡು ಗಡಿ ಮತ್ತು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕು ಗಡಿ, ಪಶ್ಚಿಮಕ್ಕೆ ರಾಮನಗರ ತಾಲೂಕು ಮತ್ತು ಕನಕಪುರ ತಾಲೂಕು ಗಡಿ, ಉತ್ತರಕ್ಕೆ ಬೆಂಗಳೂರು ದಕ್ಷಿಣ ತಾಲೂಕು, ಆನೇಕಲ್ ಹಾಗೂ ರಾಮನಗರ ತಾಲೂಕು ಗಡಿಗಳು, ದಕ್ಷಿಣಕ್ಕೆ ಕನಕಪುರ ತಾಲೂಕು ಗಡಿಯ ಪರಿದಿಯಲ್ಲಿ ಹೊಸ ತಾಲೂಕು ರಚನೆಯಾಗಿದೆ. ಸುಮಾರು ಒಂದು ಲಕ್ಷ ಜನ ಸಂಖ್ಯೆ ತಾಲೂಕಿನಲ್ಲಿದೆ.