ಖಾಸಗಿ ಫೈನಾನ್ಸ್ ಕಂಪನಿಗೆ ದಂಡ

ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ
ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ
Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಹಕರ ಪರಿಹಾರ ವ್ಯಾಜ್ಯಗಳ ಆಯೋಗ ಆದೇಶ
  • ಸಾಲದ ಹಣ ಪಾವತಿ ಮಾಡಿದರೂ ನಿಲ್ಲದ ತೊಂದರೆ
  • ಸಿಬಿಲ್ ಸ್ಕೋರ್ ಮೇಲೆ ಹೊಡೆತ

ರಾಮನಗರ

ಸಾಲದ ಕಂತು ಸಮಯಕ್ಕೆ ಸರಿಯಾಗಿಪಾವತಿಸಿದರೂ ಋಣ ವಿಮೋಚನಾ ಪತ್ರನೀಡದೆ, ಸಿಬಿಲ್ ಸ್ಕೋರ್ ಅನ್ನುನಿಗದಿತ ಸಮಯದೊಳಗೆ ಸರಿಪಡಿಸದೆ ಸೇವಾ ನ್ಯೂನತೆ ಎಸಗಿದ್ದಕ್ಕಾಗಿಜಿಲ್ಲೆಯ ಗ್ರಾಹಕರ ಪರಿಹಾರ ವ್ಯಾಜ್ಯಗಳಆಯೋಗವು ಖಾಸಗಿ ಫೈನಾನ್ಸ್ ಕಂಪನಿಯೊಂದಕ್ಕೆಭಾರಿ ದಂಡ ವಿಧಿಸಿದೆ.

ಪ್ರಕರಣವೇನು?

ದೂರುದಾರಎಚ್.ಕೆ.ಮಹೇಂದ್ರ ಅವರುಕಾರು ಖರೀದಿಗಾಗಿ ಖಾಸಗಿ ಫೈನಾನ್ಸ್ನಲ್ಲಿ 5 ಲಕ್ಷ ರೂ.ಸಾಲ ಮಾಡಿದ್ದರು. ಸ್ವಯಂ ಆಗಿ ಸಾಲದಮೊತ್ತ ಕಡಿತದ ಆಯ್ಕೆಯನ್ನು ಮಾಡಿಕೊಂಡಿದ್ದರು.ಅಂತಿಮ ಇಎಂಐ 2025 .5ರೊಳಗೆಪಾವತಿಸಿ ಲೋನ್ ಮೊತ್ತ ಪೂರ್ಣಗೊಳಿಸಿದ್ದರು.ಆದರೂ ಮತ್ತೆ 43,976 ರೂ. ಸಾಲ ಬಾಕಿನೀಡುವಂತೆ ಮಹೇಂದ್ರ ಅವರಿಗೆ ನೋಟಿಸ್ನೀಡಿದ್ದಲ್ಲದೇ ಮೊತ್ತವನ್ನು ‘ತೀರಿಸುವಂತೆ ಮೌಕಿಕವಾಗಿ ಒತ್ತಾಯ ಬಂತು.

ಮಹೇಂದ್ರಅವರು ಬ್ಯಾಂಕ್ ಸಂಪರ್ಕಿಸಿದಾಗ, ತಮ್ಮಿಂದಾದಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿ ಕಾನೂನಿನನ್ವಯಬಾಕಿ ಇಲ್ಲವೆಂದು 2025 ಮಾ.15ರಂದುಎರಡು ಪತ್ರ ನೀಡಿದರು. 2025 ಜು.30ರೊಳಗೆ ಸಿಬಿಲ್ ಸ್ಕೋರ್ಸರಿಪಡಿಸುವುದಾಗಿ ‘ಭರವಸೆ ನೀಡಿದರು. ಆದರೆ ವರೆಗೂ ಸರಿಪಡಿಸಿಲ್ಲ.ಕಾರಿನ ಸಾಲ ಪಾವತಿಸಿದ ನಂತರದೂರುದಾರರು ಇತರ ಬ್ಯಾಂಕುಗಳಲ್ಲಿ 20,00,000 ರೂಪಾಯಿಗಳಿಗೆ 2025.1ರಂದು ಓವರ್ ಡ್ರ್ಟಾಮೊತ್ತ ಪಡೆಯಲು ಕೋರಿದಾಗ ಸಿಬಿಲ್ಸ್ಕೋರ್ ಸರಿಯಲ್ಲ ಎಂದು ತಿರಸ್ಕರಿಸಲಾಗಿತ್ತು.ನಂತರ ಮತ್ತೊಂದು ಬ್ಯಾಂಕ್ನಲ್ಲಿಓವರ್ ಡ್ರ್ಟಾಖಾತೆಯನ್ನು ಅವಧಿ ಸಾಲವಾಗಿ ಪರಿವರ್ತಿಸಲುಕೋರಿದಾಗ ಮತ್ತು ಕ್ರೆಡಿಟ್ ಕಾರ್ಡ್ವಿತರಿಸಲು ಕೇಳಿಕೊಂಡಾಗಲೂ ಸಿಬಿಲ್ ಸ್ಕೋರ್ ಕುಸಿದಕಾರಣ ತಿಸ್ಕೃತವಾಯಿತು.

ದಾಖಲೆ ಪರಿಶೀಲನೆ

ಸಿಬಿಲ್ಸ್ಕೋರ್ ಸಮಸ್ಯೆ ಸರಿಪಡಿಸುವಂತೆ ಮಹೇಂದ್ರಅವರು ಪದೇಪದೆ ಕೋರಿಕೊಂಡರೂ ಖಾಸಗಿಫೈನಾನ್ಸ್ ಸಮಸ್ಯೆ ಬಗೆಹರಿಸಲು ವಿಲವಾದಹಿನ್ನೆಲೆಯಲ್ಲಿ ಗ್ರಾಹಕರ ನ್ಯಾಯಲಯಕ್ಕೆ ದೂರುಸಲ್ಲಿಸಿದರು. ವಿಚಾರಣೆ ನಡೆಸಿದ ಗ್ರಾಹಕವ್ಯಾಜ್ಯಗಳ ಪರಿಹಾರ ಆಯೋಗದ ಫ್ರಭಾರ ಅಧ್ಯಕ್ಷೆ ರೇಣುಕಾದೇವಿ ದೇಶಪಾಂಡೆ ಮತ್ತು ಸದಸ್ಯೆ ಎಂ.ಎಸ್.ಲತಾ ಅವರುವಾದ ಪ್ರತಿವಾದ ಆಲಿಸಿ, ದಾಖಲೆ ಪರಿಶೀಲಿಸಿದರು.ಖಾಸಗಿ ೈನಾನ್ಸ್ ಕಂಪನಿಗೆ 15 ದಿನಗಳೊಳಗೆಖಾತೆಯ ನ್ಯೂನತೆ ಸರಿಪಡಿಸಿ ಸಂಬಂಪಟ್ಟ ಸಿಬಿಲ್ ಸ್ಕೋರ್ಸರಿಪಡಿಸಬೇಕು. ದೂರುದಾರರು ಅನುವಿಸಿದ ವಾನಸಿಕ,ದೈಹಿಕ ಹಾಗೂ ಆರ್ಥಿಕವಾಗಿ ಮತ್ತುಸಿಬಿಲ್ ಸ್ಕೋರ್ ಕುಸಿತದಿಂದ ಕ್ರೆಡಿಟ್ಕಾರ್ಡ್ ಸಿಗದೇ ಜೀವನದವಿಷ್ಯದವ್ಯವಹಾರಕ್ಕಾಗಿ ಅನುವಿಸಿದ ಯಾತನೆಗೆಪರಿಹಾರ ರೂಪವಾಗಿ 50 ಸಾವಿರ ರೂ. ಮತ್ತುನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದ ವರ್ತನೆಗೆಪರಿಹಾರ ರೂಪದಲ್ಲಿ 20 ಸಾವಿರ ರೂ. ಮತ್ತುನ್ಯಾಯಾಲಯದ ಖರ್ಚು 5 ಸಾವಿರ ರೂ.ಗಳನ್ನು 30 ದಿನದೊಳಗೆಶೇ.6 ಬಡ್ಡಿಯಂತೆ ದೂರುದಾರರಿಗೆ ಪಾವತಿಸುವಂತೆ ಆದೇಶಿಸಿದೆ.

ಸಾಲ ಮರುಪಾವತಿಸಿದ 30 ದಿನಗಳ ನಂತರವೂ ಸಿಬಿಲ್ಸ್ಕೋರ್ ಅನ್ನು ಸರಿಪಡಿಸದಿದ್ದಕ್ಕಾಗಿ ಸಿಬಿಲ್ಪರಿಹಾರ ಚೌಕಟ್ಟಿನ ಅನುಸಾರ ದೂರುದಾರರು ದಿನಕ್ಕೆನೂರು ರೂಪಾಯಿಗಳಂತೆ ಪಡೆಯಲು ಅರ್ಹರಾಗಿರುತ್ತಾರೆ. ಇದರಅನ್ವಯ 2025 ಜುಲೈ 30 ರಿಂದ ಇಲ್ಲಿಯವರೆಗೆಅಂದರೆ ಆದೇಶದ ದಿನಾಂಕದವರೆಗೆ ದಿನಕ್ಕೆ100 ರೂ.ನಂತೆ ಪರಿಹಾರ ರೂಪವಾಗಿನೀಡುವಂತೆ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net