ರಾಜಕೀಯಕ್ಕಾಗಿ ಆರೋಪ ಬೇಡ

ಎಚ್.ಸಿ. ಬಾಲಕೃಷ್ಣ
ಎಚ್.ಸಿ. ಬಾಲಕೃಷ್ಣ
Published on

ಪ್ರಮುಖ ಮುಖ್ಯಾಂಶಗಳು

  • ಎಚ್ ಡಿಕೆ ವಿರುದ್ಧ ಬಾಲಕೃಷ್ಣ ಗರಂ
  • ರಾಜಕೀಯಕ್ಕಾಗಿ ಒಂದು ವರ್ಗದ ಮೇಲೆ ಗೂಬೆ ಕೂರಿಸಬೇಡಿ
ರಾಮನಗರ: ರಾಜಕೀಯ ಕಾರಣಕ್ಕಾಗಿ ಕುಮಾರಸ್ವಾಮಿ ಅವರು ಒಂದು ವರ್ಗದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು  ಶಾಸಕ ಎಚ್.ಸಿ. ಬಾಲಕೃಷ್ಣ ಟೀಕಿಸಿದರು. 
ಜಿಬಿಡಿಎ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮತ ಹಾಕಿಸಿಕೊಳ್ಳುತ್ತಿದ್ದಾಗ ಮುಸ್ಲಿಮರೆಲ್ಲರೂ ಅವರ ಪಾಲಿಗೆ ಸ್ಥಳೀಯರಾಗಿದ್ದರು. ಆದರೆ ಈಗ ಎಸ್‌ಐಆರ್ ಕಾರಣಕ್ಕೆ ಬಾಂಗ್ಲಾದೇಶದವರಾಗಿ ಕಾಣುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರನ್ನು  ಬಾಲಕೃಷ್ಣ ಜರಿದರು.  
ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ಕರ್ತವ್ಯಗಳಲ್ಲಿ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಯೋಗದ ನಿಯಂತ್ರಣದಲ್ಲಿರುತ್ತಾರೆ. ಮಾನದಂಡಕ್ಕೆ ಅನುಗುಣವಾಗಿಯೇ ಎಸ್‌ಐಆರ್ ನಡೆಯುತ್ತಿದೆ. ಅಗತ್ಯ ದಾಖಲೆ ಕೊಟ್ಟರಷ್ಟೇ ಪ್ರಕ್ರಿಯೆ ನಡೆಸಲು ಸಾಧ್ಯ. ಹೀಗಿರುವಾಗ ಅಕ್ರಮ ಎಸಗಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದರು. 
ಎಸ್‌ಐಆರ್ ವಿಷಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನವರು ಗೊಂದಲ ಸೃಷ್ಟಿಸುತ್ತಾ ಉದ್ದೇಶಪೂರ್ವಕವಾಗಿ ಒಂದು ಕೋಮಿನ ವಿರುದ್ದ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ತಳಮಟ್ಟದಲ್ಲಿ ಎಸ್‌ಐಆರ್ ಕೆಲಸ ಮಾಡುತ್ತಿರುವ ಶಿಕ್ಷಕರ ಮೇಲೆ ಗೂಬೆ ಕೂರಿಸಿ, ಅವರಿಗೆ ಅವಮಾನ ಮಾಡುತ್ತಿದ್ದಾರೆ. ಇಷ್ಟಕ್ಕೂ ಇಡೀ ಪ್ರಕ್ರಿಯೆ ನಡೆಯುತ್ತಿರುವುದು ಸ್ವತಂತ್ರ ಸಂಸ್ಥೆಯಾದ ಕೇಂದ್ರ ಚುನಾವಣಾ ಆಯೋಗದಿಂದಲೇ ಹೊರತು ರಾಜ್ಯ ಸರ್ಕಾರದಿಂದಲ್ಲ ಎಂದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net