ರೈತನಿಗೆ ನಿಂದಿಸಿ ಕ್ಷಮೆಯಾಚಿಸಿದ ಉಪನಿರ್ದೇಶಕ

ರಾಮನಗರದ ರೇಷ್ಮೆ ಗೂಡಿನ ವಾರುಕಟ್ಟೆಯಲ್ಲಿ ರೈತನಿಗೆ ಮಾರುಕಟ್ಟೆ ಉಪನಿರ್ದೇಶಕರು ಅವಮಾನಿಸಿದ್ದಾರೆ ಎಂದು ರೈತ ಮುಖಂಡರು ಪ್ರತಿಭಟನೆ ನಡೆಸಿ ಜಂಟಿ ನಿರ್ದೇಶಕರಿಗೆ ಮಾಹಿತಿ ನೀಡಿದರು. ಮಂಡ್ಯ ಜಿಲ್ಲಾ ರೇಷ್ಮೆ ಬೆಳೆಗಾರ ಸಂಘದ ಮುಖಂಡ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ, ಮುಖಂಡರುಗಳಾದ ಬೈರಾಪಟ್ಟಣ ಪ್ರಕಾಶ್, ರವಿ, ಗೌತಮ್ ಇತರರಿದ್ದರು.
ರಾಮನಗರದ ರೇಷ್ಮೆ ಗೂಡಿನ ವಾರುಕಟ್ಟೆಯಲ್ಲಿ ರೈತನಿಗೆ ಮಾರುಕಟ್ಟೆ ಉಪನಿರ್ದೇಶಕರು ಅವಮಾನಿಸಿದ್ದಾರೆ ಎಂದು ರೈತ ಮುಖಂಡರು ಪ್ರತಿಭಟನೆ ನಡೆಸಿ ಜಂಟಿ ನಿರ್ದೇಶಕರಿಗೆ ಮಾಹಿತಿ ನೀಡಿದರು. ಮಂಡ್ಯ ಜಿಲ್ಲಾ ರೇಷ್ಮೆ ಬೆಳೆಗಾರ ಸಂಘದ ಮುಖಂಡ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ, ಮುಖಂಡರುಗಳಾದ ಬೈರಾಪಟ್ಟಣ ಪ್ರಕಾಶ್, ರವಿ, ಗೌತಮ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • *ರೇಷ್ಮೆ ಮಾರುಕಟ್ಟೆಯಲ್ಲಿ ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿ
  • ಮಾದರಿ ರೈತರನ್ನು ಅಪಮಾನಿಸಿದ ಅಧಿಕಾರಿ

ರಾಮನಗರ

ರೇಷ್ಮೆಗೂಡಿನ ವಾರುಕಟ್ಟೆಯಲ್ಲಿ ರೀಲರ್ಸ್‌ಗಳಿಂದ ತೊಂದರೆಯಾಗಿದೆ ಎಂದು ಬಂದ ರೈತನಿಗೆ ನಗರದ ರೇಷ್ಮೆಗೂಡಿನ ವಾರುಕಟ್ಟೆ ಉಪನಿರ್ದೇಶಕ ನಿಂದಿಸಿ ಅವವಾನಿಸಿದ್ದಾರೆ ಎಂದು ಆರೋಪಿಸಿ ವಾರುಕಟ್ಟೆಯಲ್ಲಿ ರೇಷ್ಮೆ ಬೆಳೆಗಾರರ ಸಂಘ ಹಾಗೂ ರೈತ ಮುಖಂಡರು ಪ್ರತಿಭಟನೆಗೆ ಮುಂದಾದರು. ಇದಕ್ಕೆ ಮಣಿದ ಉಪನಿರ್ದೇಶಕರು ಕ್ಷಮೆಯಾಚಿಸಿದ್ದಾರೆ.

ಘಟನೆ ವಿವರ: ಜು.12ರಂದು ಮದ್ದೂರು ತಾಲೂಕಿನ ಸೊಳ್ಳೇಪುರದ ರೈತ ಶಿವನಂಜಪ್ಪ ಅವರು ರಾಮನಗರದ ರೇಷ್ಮೆ ಗೂಡಿನ ವಾರುಕಟ್ಟೆಗೆ ಬಂದು ರೇಷ್ಮೆಗೂಡನ್ನು ಕೆಜಿಗೆ 800 ರೂ. ನಂತೆ ಹರಾಜು ಕೂಗಿದ್ದಾರೆ. ಆದರೆ, ಈ ಬೆಲೆಗೆ ಸಮ್ಮತಿಸದ ಶಿವನಂಜಪ್ಪ ಹರಾಜು ರದ್ದು ವಾಡಿದ್ದಾರೆ. ಹರಾಜು ಕೂಗಿದ ರೀಲರ್ ಬಿಡ್ಡಿಂಗ್ ಚೀಟಿಯನ್ನು ತಾನೇ ಎತ್ತಿಕೊಂಡು ಹೋಗಿದ್ದಾನೆ. ಬಳಿಕ ನಡೆದ 2ನೇ ಹಂತದ ಹರಾಜಿನಲ್ಲಿ ಇದೇ ಗೂಡು 870 ರೂ.ಗೆ ಹರಾಜಾಗಿದೆ. ಆದರೆ, ಗೂಡನ್ನು ಅಳತೆ ವಾಡುವ ವೇಳೆ ಮೊದಲ ಹರಾಜಿನಲ್ಲಿ ಚೀಟಿ ಎತ್ತಿಕೊಂಡು ಹೋಗಿದ್ದ ರೀಲರ್ 800 ರೂ.ಗೆ ಗೂಡನ್ನು ಮರಾಟ ಮಾಡಿರುವುದಾಗಿ ಚೀಟಿ ತೋರಿಸಿದ್ದಾನೆ. ಈ ಸಂದರ್ಭದಲ್ಲಿ ಮಾರುಕಟ್ಟೆ ಅಧಿಕಾರಿಗಳು ಮಧ್ಯಪ್ರವೇಶಿಸಿ ರಾಜಿ ಮೂಲಕ 820 ರೂ.ಗೆ ಬೆಲೆ ನಿಗಧಿಮಾಡಿಸಿದ್ದಾರೆ. ಈ ಬಗ್ಗೆ ಶಿವನಂಜಪ್ಪ ದೂರು ನೀಡಲು ಬಂದಾಗ ಮಾರುಕಟ್ಟೆ ಉಪನಿರ್ದೇಶಕ ಕೈಲಾಶ್ ಮೂರ್ತಿ ರೈತನಿಗೆ ಬೈಯ್ದು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದರು.

ರೈತನನ್ನು ಬ್ಲಾಕ್ ವಾಡಿದ ಮಾರುಕಟ್ಟೆ ಅಧಿಕಾರಿ

ಮತ್ತೆ ಆ.14ರಂದು ಶಿವನಂಜಪ್ಪ ರೇಷ್ಮೆಗೂಡನ್ನು ರಾಮನಗರ ಮಾರುಕಟ್ಟೆಗೆ ತಂದಾಗ ಅವರು ಈತನ ಬಿಡ್ಡಿಂಗ್ ಚೀಟಿಯೇ ಬ್ಲಾಕ್ ಆಗಿದೆ. ಈತನ ಹೆಸರು ಮತ್ತು ರೇಷ್ಮೆ ಬೆಳೆಗಾರರ ಸಂಖ್ಯೆಯನ್ನು ಬ್ಲಾಕ್ ಮಾಡಿದ ಮಾರುಕಟ್ಟೆ ಅಧಿಕಾರಿಗಳು ಮಾರುಕಟ್ಟೆಯಲ್ಲಿ ರೇಷ್ಮೆ ಗೂಡು ಮಾರಾಟ ಮಾಡದಂತೆ ಮಾಡಿದ್ದಾರೆ. ಇದರಿಂದಾಗಿ ಆತಂಕಗೊಂಡ ಶಿವನಂಜಪ್ಪ, ಮಂಡ್ಯ ಜಿಲ್ಲಾ ರೇಷ್ಮೆಬೆಳೆಗಾರರ ಸಂಘದ ಅಧ್ಯಕ್ಷ ಗುಡಿದೊಡ್ಡಿ ಶಿವಲಿಂಗಯ್ಯ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ತಕ್ಷಣ ಉಪನಿರ್ದೇಶಕರಿಗೆ ಕರೆಮಾಡಿ ಸಮಸ್ಯೆ ಸರಿಪಡಿಸುವಂತೆ ತಿಳಿಸಿದ್ದಾರೆ.

ಅಧ್ಯಕ್ಷರ ಜತೆ ಸಂಪರ್ಕದಲ್ಲಿದ್ದಂತೆ ಉಪನಿರ್ದೇಶಕರ ಕೊಠಡಿಗೆ ಶಿವನಂಜಯ್ಯ ಹೋಗುತ್ತಿದ್ದಂತೆ ಗರಂ ಆದ ಡಿಡಿ ಬಾಯಿಗೆ ಬಂದಂತೆ ಬೈಯ್ದಿದ್ದಾರೆ. ಇದರಿಂದ ಉಪನಿರ್ದೇಶಕ ಕೈಲಾಸ್‌ಗೆ ಮತ್ತೆ ಕರೆ ಮಾಡಿದ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ ಅವರು, ರೈತರ ಗೂಡನ್ನು ಹರಾಜು ಮಾಡಿಸುವಂತೆ ತಾಕೀತು ವಾಡಿದ್ದಾರೆ. ಬಳಿಕ ಶಿವನಂಜಪ್ಪ ಅವರ ಗೂಡನ್ನು ಹರಾಜು ಮಾಡಿಸಲಾಗಿತ್ತು.

ರೇಷ್ಮೆಬೆಳೆಗಾರರಿಂದ ಘೇರಾವ್

ಆ.14ರಂದು ನಡೆದಿದ್ದ ಘಟನೆ ಹಿನ್ನೆಲೆಯಲ್ಲಿ ರೇಷ್ಮೆ ವಾರುಕಟ್ಟೆ ಆಯುಕ್ತರಿಗೆ ರೇಷ್ಮೆಬೆಳೆಗಾರರ ಸಂದ ಪದಾಧಿಕಾರಿಗಳು ವಾಹಿತಿ ನೀಡಿದ್ದಾರೆ. ಮಾರುಕಟ್ಟೆ ಉಪನಿರ್ದೇಶಕರ ಕಚೇರಿಗೆ ಘೇರಾವ್ ಮಾಡಿದ ರೈತರು, ಉಪನಿರ್ದೇಶಕರ ನಡವಳಿಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 75ನೇ ವಯಸ್ಸಿನಲ್ಲೂ ನಿರಂತರವಾಗಿ ರೇಷ್ಮೆ ಬೆಳೆಯುತ್ತಿರುವ ಶಿವನಂಜಪ್ಪ ಕೇಂದ್ರ ರೇಷ್ಮೆಮಂಡಳಿಯಿಂದ ಉತ್ತಮ ಬೆಳೆಗಾರ ಎಂದು ಪ್ರಶಸ್ತಿ ಪಡೆದಿದ್ದಾರೆ. ಅಂಥವರನ್ನು ಅವಮಾನಿಸಿದ ಉಪನಿರ್ದೇಶಕರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕಾಗಮಿಸಿದ ರೇಷ್ಮೆ ವಾರುಕಟ್ಟೆ ಇಲಾಖೆಯ ಜಂಟಿ ನಿರ್ದೇಶಕ ಕೆ.ಎನ್.ರವಿ ಮಾತನಾಡಿ, ಅಧಿಕಾರಿಯು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಈ ಸಂಬಂಧ ಇಲಾಖೆಗೆ ವರದಿ ನೀಡುವುದಾಗಿ ಭರವಸೆ ನೀಡಿದ್ದರಿಂದ ರೈತರು ಪ್ರತಿಭಟನೆ ಹಿಂಪಡೆದರು.

ರೇಷ್ಮೆ ಮಾರುಕಟ್ಟೆಯಲ್ಲಿ ಆಗಿರುವ ಘಟನೆ ಸಂಬಂಧ ಮಾಹಿತಿ ಪಡೆಯಲಾಗಿದ್ದು, ಉಪ ನಿರ್ದೇಶಕರನ್ನು ನೇಮಿಸಿ ವರದಿ ತರಿಸಿಕೊಳ್ಳಲಾಗುತ್ತದೆ. ಅಧಿಕಾರಿಗಳು ತಪ್ಪು ಮಾಡಿದ್ದು ವರದಿಯಲ್ಲಿ ಕಂಡು ಬಂದರೆ ಆಯುಕ್ತರಿಗೆ ಸೂಕ್ತ ಕ್ರಮಕ್ಕಾಗಿ ವರದಿ ಸಲ್ಲಿಸಲಾಗುತ್ತದೆ.

ಕೆ.ಎನ್. ರವಿ, ಜಂಟಿ ನಿರ್ದೇಶಕರು, ರೇಷ್ಮೆ ಇಲಾಖೆ, ಬೆಂಗಳೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net