ಹೊಂಡಕ್ಕೆ ಬಿದ್ಧ ಮರಿ ಆನೆ ರಕ್ಷಣೆ

ಕನಕಪುರದಲ್ಲಿ ಆನೆ ಮರಿ ರಕ್ಷಣೆ
ಕನಕಪುರದಲ್ಲಿ ಆನೆ ಮರಿ ರಕ್ಷಣೆ
Published on

ಪ್ರಮುಖ ಮುಖ್ಯಾಂಶಗಳು

  • ಹೊಂಡಕ್ಕೆ ಬಿದ್ಧ ಮರಿ ಆನೆ
  • ರಕ್ಷಣೆಗಾಗಿ ಗೀಳಿಟ್ಟ ತಾಯಿ ಆನೆ
  • ಅರಣ್ಯ ಇಲಾಖೆಯಿಂದ ರಕ್ಷಣಾ ಕಾರ್ಯ
ಕನಕಪುರ: ತಾಲೂಕಿನ ಕೋಡಿಹಳ್ಳಿ ವನ್ಯಜೀವಿ ವಿಭಾಗದ ಕೆಬ್ಬರೆ ಗ್ರಾಮದ ಕಾಡಂಚಿನ ಬಳಿ ರಂಗಪ್ಪನದೊಡ್ಡಿ ಹೊಂಡದಲ್ಲಿ ಬಿದ್ದ ಆನೆ ಮರಿಯನ್ನು ರಕ್ಷಣೆ ಮಾಡಿ ತಾಯಿ ಆನೆಯ ಜೊತೆ ಸೇರಿಸಿರುವ ಘಟನೆ ನಡೆದಿದೆ.
ರಂಗಪ್ಪನದೊಡ್ಡಿ ಕಾಂಡಂಚಿನ ಬಳಿ ತಾಯಿಯಿಂದ ಬೇರ್ಪಟ್ಟ 2 ತಿಂಗಳ ಮರಿ ಆನೆ ಒಂದು ಹೊಂದಡಲ್ಲಿ ಬಿದ್ದಿದೆ. ಹೊಂದಡದಲ್ಲಿ ಬಿದ್ದ ಮರಿ ಆನೆಯನ್ನು ನೋಡಿದ ತಾಯಿ ಮತ್ತು ಮತ್ತೊಂದು ಆನೆ ಅದನ್ನು ರಕ್ಷಣೆ ಮಾಡಲು ಆಗದೆ ರೋದಿಸುತ್ತಾ ಸಮೀಪದಲ್ಲೇ ನಿಂತಿವೆ. ಆನೆಗಳ ರೋಧನ ಕೇಳಿದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಅಂತೋಣಿ ರೆಘೋ ಮತ್ತು ಸಿಬ್ಬಂಧಿಗಳು ಸ್ಥಳಕ್ಕೆ ಧಾವಿಸಿ ಜೆ.ಸಿ.ಬಿ ಯಂತ್ರ ಹಾಗೂ ಗ್ರಾಮಸ್ಥರ ಸಹಾಯದಿಂದ ಹೊಂಡದಲ್ಲಿ ಬಿದಿದ್ದ ಆನೆ ಮರಿಗೆ ದಾರಿ ಮಾಡಿಕೊಟ್ಟು ಅದನ್ನು ಸುರಕ್ಷಿತವಾಗಿ ದೂರದಲ್ಲಿಯೇ ನಿಂತಿದ್ದ ತಾಯಿ ಆನೆಯ ಕಡೆಗೆ ಸಾಗಿಸಿದ್ದಾರೆ. ತಾಯಿಯಿಂದ ಬೇರ್ಪಟ್ಟಿದ್ದ ಮರಿ ಆನೆಯನ್ನು ಸುರಕ್ಷಿತವಾಗಿ ತಾಯಿ ಬಲಿ ಸೇರಿಸಲು ಯಶಸ್ವಿಯಾಗಿದ್ದಾರೆ.
ಹೊಂಡದಿಂದ ಹೊರ ಬಂದ ಮರಿ ಆನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಹರಸಾಹಸ ಮಾಡಬೇಕಾಯಿತು. ನಂತರ ಅದನ್ನು ಜೆ.ಸಿ.ಬಿ ಯಂತ್ರದ ಮೂಲಕ ರಕ್ಷಿಸಿ ತಾಯಿ ಸಮೀಪ ಬಿಡುವಲ್ಲಿ ಯಶಸ್ವಿಯಾದರು. ಗ್ರಾಮಸ್ಥರು ಸಹ ಅರಣ್ಯ ಇಲಾಖೆಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅರಣ್ಯ ರಕ್ಷಕರದ ಯರೀಶ್, ಶ್ರೀಕಾಂತ್, ಅನೆ ಕಾರ್ಯಪಡೆ ಸಿಬ್ಬಂಧಿಗಳಾದ ರವಿ, ಮುತ್ತುರಾಜು, ನಾಗೇಶ್, ರಂಗಪ್ಪನದೊಡ್ಡಿ ಗ್ರಾಮಸ್ಥರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net