

ಪ್ರಮುಖ ಮುಖ್ಯಾಂಶಗಳು
ಬಿಡದಿ
ಬಿಡದಿ ಸಮಗ್ರ ಉಪ ನಗರಯೋಜನೆಯ ಜಟಾಪಟಿ ದಿನದಿಂದ ದಿನಕ್ಕೆತಾರಕಕ್ಕೇರುತ್ತಿದ್ದು, ಪರ- ವಿರೋಧ ಚರ್ಚೆ ಕೂಡಜೋರಾಗಿದೆ. ಇದರ ನಡುವೆ ಯೋಜನೆವಿರುದ್ಧದ ರೈತರು ಹೋರಾಟವನ್ನು ತೀವ್ರಗೊಳಿಸಿದ್ದು,ಯಾವುದೇ ಕಾರಣಕ್ಕೂ ನಮ್ಮ ಜಮೀನಿನ ಮರಗಳನ್ನುಕಡಿಯಲು ಅವಕಾಶ ನೀಡುವುದಿಲ್ಲ ಎಂದುಮರಗಳನ್ನು ತಬ್ಬಿಕೊಳ್ಳುವ ಮೂಲಕ ಭಾನುವಾರ ಅಪ್ಪಿಕೋಚಳವಳಿ ನಡೆಸಿದರು.
ಹೌದು...ಟೌನ್ಶಿಪ್ಯೋಜನೆ ವಿರೋಧಿಸಿ ರೈತರು ವಿಭಿನ್ನವಾಗಿ ಸರ್ಕಾರಕ್ಕೆಚಾಟಿ ಬೀಸಲು ಮುಂದಾಗಿದ್ದಾರೆ. ಈಹಿನ್ನೆಲೆಯಲ್ಲಿ ರೈತರು, ರೈತ ಮಹಿಳೆಯರುಹಾಗೂ ಮಕ್ಕಳು ಬೈರಮಂಗಲ ಗ್ರಾಮದಿಂದಬನ್ನಿಗಿರಿವರೆಗೆ ಪಾದಯಾತ್ರೆಮಾಡಿ, ಬನ್ನಿಗಿರಿಯಲ್ಲಿ ಕಲ್ಪವೃಕ್ಷಕ್ಕೆ ಪೂಜೆ ಸಲ್ಲಿಸಿ ಜಮೀನಿನಲ್ಲಿದ್ದಮರಗಳನ್ನು ತಬ್ಬಿಕೊಂಡು ಪ್ರಕೃತಿ ನಮ್ಮ ತಾಯಿಎಂದು ಸರ್ಕಾರದ ವಿರುದ್ಧ ಘೋಷಣೆಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಮಹಿಳೆ ಸುಮಿತ್ರಾ ಮಾತನಾಡಿ,ಸರ್ಕಾರ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲುಮುಂದಾಗಿದೆ. ಯಾವುದೇ ಕಾರಣಕ್ಕೂ ನಾವುಮರಗಳನ್ನು ಕಡಿಯಲು ಬಿಡುವುದಿಲ್ಲ. ಮರಕಡಿಯುವುದಾದರೆ ನಮ್ಮ ಸಮಾಧಿ ಮೇಲೆಮರಗಳನ್ನು ಕಡಿಯಲಿ. ಬೆಂಗಳೂರಿನಲ್ಲಿ ನಡೆದಕಾರ್ಯಕ್ರಮದಲ್ಲಿ ಸರ್ಕಾರದವರು ಮರಗಳನ್ನು ಬೆಳೆಸಿ ಅಂತಾರೆ. ಆದರೆ,ಇಲ್ಲಿ ಕಡೀರಿ ಎನ್ನುತ್ತಿದ್ದಾರೆ. ನಾವುಹಲವು ವರ್ಷಗಳಿಂದ ಮರಗಳನ್ನು ಮಕ್ಕಳಂತೆ ಸಾಕಿದ್ದೇವೆ. ನಮಗೆ ಸರ್ಕಾರ ನೀಡುವಹಣ ಮುಖ್ಯವಲ್ಲ. ಹಾಗಾಗಿ ಯಾವುದೇ ಕಾರಣಕ್ಕೂಮರಗಳನ್ನು ಕಡಿಯಲು ಬಿಡುವುದಿಲ್ಲ ಎಂದುಆಕ್ರೋಶ ವ್ಯಕ್ತಪಡಿಸಿದರು.
ಹೋರಾಟ ಸಮಿತಿಯ ಖಜಾಂಚಿ ಮಂಡಲಹಳ್ಳಿನಾಗರಾಜು ಮಾತನಾಡಿ, ನಮ್ಮ ಭೂಮಿ ಉಳಿಸಿಕೊಳ್ಳಲುನಾವು ಮನೆ-ಮಠಗಳನ್ನು ಬಿಟ್ಟುರಸ್ತೆಯಲ್ಲಿ ಕುಳಿತು ಪ್ರತಿಭಟಿಸುವ ಸ್ಥಿತಿನಿರ್ಮಾಣವಾಗಿದೆ. ನಮ್ಮ ಭೂಮಿ ಉಳಿವಿಗಾಗಿಸರ್ಕಾರದ ಗಮನ ಸೆಳೆಯಲು, ಅವರಿಗೆಇಲ್ಲಿನ ವಸ್ತುಸ್ಥಿತಿಯ ಅರಿವು ಮೂಡಿಸಲು ಒಂದಲ್ಲಒಂದು ರೀತಿಯಲ್ಲಿ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಸರ್ಕಾರದ ಈ ಯೋಜನೆಯಿಂದನಾವು ನೀರು, ಗೊಬ್ಬರ ಹಾಕಿಬೆಳೆಸಿದ ಮರಗಳನ್ನು ನಮ್ಮ ಕಣ್ಣ ಮುಂದೆಯೇಕಡಿಯುವುದನ್ನು ನೋಡಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿಭಾಗಿಯಾಗಿದ್ದ ಬಾಲಕಿ ರಿಷಿಕಾ ಮಾತನಾಡಿ,ನಮ್ಮ ಜಮೀನಿನಲ್ಲಿರುವ ಮರಗಳನ್ನು ಕಡಿಯಬಾರದು. ಇವುಗಳು ಹಣ್ಣು ಬಿಡುತ್ತವೆ,ಉತ್ತಮ ಗಾಳಿ ಕೊಡುತ್ತವೆ. ಉತ್ತಮಮಳೆ ಬೇಕು ಎಂದರೆ ಮರಗಳುಬೇಕು. ಸರ್ಕಾರ ನೀಡುವ ಹಣದಲ್ಲಿಒಂದೊಂದು ದಿನಕ್ಕೆ ಒಂದೊಂದು ನೋಟುಖಾಲಿ ಆಗುತ್ತದೆ. ಇಲ್ಲಿ ನೂರಾರು ಸಂಖ್ಯೆಯಲ್ಲಿರೈತರು ಬಂದಿದ್ದಾರೆ. ನಮ್ಮ ಜಮೀನು ಉಳಿಸಿಕೊಳ್ತೇವೆ.ಮರಗಳನ್ನು ಕಡಿಯಲು ನಾವು ಬಿಡುವುದಿಲ್ಲಎಂದು ತಿಳಿಸಿದರು.