ಪೌರಕಾರ್ಮಿಕರ ದಿನಾಚರಣೆಗೆ ಹೆಚ್ಚುವರಿ ಅನುದಾನ

 ಚನ್ನಪಟ್ಟಣ ನಗರಸಭೆ ಅಧ್ಯಕ್ಷ ಬಿ.ಎಂ.ನಾಗೇಶ್ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಯಿತು.  ಸ್ಥಾಯಿ ಸಮಿತಿ ಅ‘ಅಧ್ಯ್ಯಕ್ಷೆ ಜಯಮಾಲಾ, ಪೌರಾಯುಕ್ತ ಮಹೇಂದ್ರ ಇದ್ದರು.
ಚನ್ನಪಟ್ಟಣ ನಗರಸಭೆ ಅಧ್ಯಕ್ಷ ಬಿ.ಎಂ.ನಾಗೇಶ್ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಯಿತು. ಸ್ಥಾಯಿ ಸಮಿತಿ ಅ‘ಅಧ್ಯ್ಯಕ್ಷೆ ಜಯಮಾಲಾ, ಪೌರಾಯುಕ್ತ ಮಹೇಂದ್ರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಶೇಷ ಸಭೆಯಲ್ಲಿ ಚರ್ಚೆ
  • ಅಧ್ಯಕ್ಷ ಬಿ.ಎಂ ನಾಗೇಶ್ ನೇತೃತ್ವದಲ್ಲಿ ಸಭೆ

ಚನ್ನಪಟ್ಟಣ

ನಗರಸಭೆ ಅಧ್ಯಕ್ಷ ಬಿ.ಎಂ.ನಾಗೇಶ್ ಅಧ್ಯಕ್ಷಕ್ಷತೆಯಲ್ಲಿ ಸೋಮವಾರ ವಿಶೇಷ ಸಭೆ ನಡೆಯಿತು.

ಪೌರಕಾರ್ಮಿಕರ ದಿನಾಚರಣೆ ಹಾಗೂ ಸದಸ್ಯರು, ಅಧಿಕಾರಿಗಳು ಮತ್ತು ಪೌರ ಕಾರ್ಮಿಕರ ಅಧ್ಯಯನ ಪ್ರವಾಸದ ವಿಚಾರವಾಗಿ ಈ ವಿಶೇಷ ಸಭೆ ಕರೆಯಲಾಗಿತ್ತು. ಪೌರಕಾರ್ಮಿಕರ ದಿನಾಚರಣೆಗೆ ಹೆಚ್ಚುವರಿ ಅನುದಾನ ಒದಗಿಸುವ ಕುರಿತು ವಿಶೇಷ ಸಭೆಯಲ್ಲಿ ಚರ್ಚೆ ನಡೆಯಿತು.

2026-27ನೇ ಸಾಲಿನ ನಗರಸಭಾ ನಿಧಿಯ ಶೇ.24.10ರ ಅನುದಾನದಲ್ಲಿ ಪೌರಕಾರ್ಮಿಕರ ದಿನಾಚರಣೆಗಾಗಿ ಈಗಾಗಲೇ 2 ಲಕ್ಷ ರೂ. ಕಾಯ್ದಿರಿಸಲಾಗಿದೆ. ಇದರೊಂದಿಗೆ ನಗರಸಭೆಯ ನಿಧಿಯಿಂದ 3 ಲಕ್ಷ ಕೊಡಲಾಗುತ್ತದೆ. ಆದರೆ, ಈ ಮೊತ್ತದಲ್ಲಿ ಕಾರ್ಯಕ್ರಮ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಪೌರ ನೌಕರರ ಸಂಘ ಮನವಿ ನೀಡಿದ್ದಾರೆ. ನಗರಸಭಾ ನಿಧಿಯಿಂದ ಹೆಚ್ಚುವರಿಯಾಗಿ 3 ಲಕ್ಷ ರೂ. ಅನುದಾನ ಒದಗಿಸಿ, ಒಟ್ಟು 8 ಲಕ್ಷ ವೆಚ್ಚದಲ್ಲಿ ಪೌರಕಾರ್ಮಿಕರ ದಿನಾಚರಣೆ ನಡೆಸುವಂತೆ ಮನವಿ ಮಾಡಿದ್ದಾರೆ ಎಂದು ಪೌರಾಯುಕ್ತರು ಸಭೆಯ ಗಮನಕ್ಕೆ ತಂದರು.

ನಗರದ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡುವಲ್ಲಿ ಪ್ರತಿನಿತ್ಯ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರ ಕಾರ್ಯವನ್ನು ಪರಿಗಣಿಸಿ, ಅವರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವುದು ಹಾಗೂ ಅಗತ್ಯ ಅನುದಾನ ಒದಗಿಸುವ ಕುರಿತು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಇದರೊಂದಿಗೆ, ನಗರಸಭೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರವಾಸದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಪ್ರವಾಸದ ಸ್ಥಳ ಹಾಗೂ ದಿನಾಂಕ ಸೇರಿ ಪ್ರವಾಸದ ಬಗ್ಗೆ ಚರ್ಚೆ ನಡೆಯಿತು. ಚನ್ನಪಟ್ಟಣ ನಗರಸಭೆ ವ್ಯಾಪ್ತಿಯಲ್ಲಿ 51 ಖಾಯಂ ಪೌರಕಾರ್ಮಿಕರು, 24 ನೇರ ಪಾವತಿ ಪೌರಕಾರ್ಮಿಕರು ಹಾಗೂ 73 ಹೊರಗುತ್ತಿಗೆ ಸಿಬ್ಬಂದಿ ಸೇರಿ ಒಟ್ಟು 148 ಮಂದಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದುವರೆಗೂ ಇವರಿಗೆ ಅಧ್ಯಯನ ಪ್ರವಾಸ ಮಾಡಿಸಿಲ್ಲ. ಈ ಹಿನ್ನೆಲೆಯಲ್ಲಿ ಪ್ರವಾಸ ಯೋಜನೆ ಮಾಡಿಸುವ ನಿರ್ಧಾರ ಕೈಗೊಳ್ಳಲಾಯಿತು.

ನಗರಸಭೆಯ ಸದಸ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net