ಆ.29ಕ್ಕೆ ನಗರದಲ್ಲಿ 'ಪಂಜರ ಪಕ್ಷಿ' ಯಕ್ಷಗಾನ

ಯಕ್ಷಗಾನ
ಯಕ್ಷಗಾನ
Published on

ಬೆಂಗಳೂರು: ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ (ಆ.29)ರಾತ್ರಿ 10.30ರಿಂದ ಹಾಲಾಡಿ ಮೇಳದವರಿಂದ "ಪಂಜರ ಪಕ್ಷಿ' ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಯಕ್ಷಗಾನ ಅಭಿಮಾನಿಗಳಷ್ಟೇ ಅಲ್ಲದೆ, ಜೆನ್​ ಜಿ ಪ್ರೇಕ್ಷಕರ ಮನಸ್ಸನ್ನೂ ಸೆಳೆದಿರುವ ವಿಶಿಷ್ಟ ಕಥಾನಕ "ಪಂಜರ ಪಕ್ಷಿ' ಇದೀಗ ಬೆಂಗಳೂರಿನಲ್ಲಿ ಮತ್ತೊಮ್ಮೆ ರಂಗೇರಲಿದೆ. ಪ್ರಸಂಗದ ಪ್ರಮುಖ ಆಕರ್ಷಣೆಗಳಲ್ಲಿ "ಜೀವವೀಣೆ' ಕೂಡ ಒಂದಾಗಿದೆ. ಕಲಾವಿದರಾದ ಶ್ರೀಧರ ಹಾರ್ಸಿಕಟ್ಟೆ, ಗಣೇಶ್​ ಆಚಾರ್​ ಬಿಲ್ಲಾಡಿ, ಅಕ್ಷಯ ಆಚಾರ್ಯ ಬಿದ್ಕಲ್​ ಕಟ್ಟೆ, ಸುಜನ್​ ಹಾಲಡಿ, ವಿಶ್ವನಾಥ್​ ಆಚಾರ್ಯ ತೊಂಬಟ್ಟು, ಸುಧೀರ್​ ಉಪ್ಪೂರು ಮತ್ತಿತರರು ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net