ಐದು ವರ್ಷಗಳ ನಂತರವಲ್ಲ, 10 ವರ್ಷದ ನಂತರವೂ ಅಲ್ಲ. ಮೊದಲ ದಿನವೇ ಯೋಜನೆಯ ವರದಿಯೇ ಇದು ಟ್ರಾಫಿಕ್ ಜಾಮ್‌ನೊಂದಿಗೆ ತನ್ನ ಯಾನ ಆರಂಭಿಸುತ್ತದೆ ಎಂದು ಹೇಳುವುದಾದರೆ, ಈ ಯೋಜನೆಯಿಂದ ಯಾರಿಗೆ ಉಪಯೋಗವಾಗಲಿದೆ. ಪ್ರಯಾಣಿಕರ ಬದಲು ಕೆಲವು ಪ್ರಭಾವಿ ವ್ಯಕ್ತಿಗಳಿಗೆ ಮಾತ್ರ ಪ್ರಯೋಜನವಾಗುತ್ತದೆ. ಆದರೆ, ಇದರ ವೆಚ್ಚವನ್ನು ಇಡೀ ನಗರದ ಜನರು ಭರಿಸಬೇಕಾಗುತ್ತದೆ ಎಂದು ಸಂಸದರು ತಿಳಿಸಿದ್ದಾರೆ.