ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಡಿಎ ಮತ್ತು ಬಿಎಂಆರ್‌ಡಿಎ ಸಂಸ್ಥೆಗಳ ನೇರ ನಿಯಂತ್ರಣವನ್ನು ತಮ್ಮ ಬಳಿಯೇ ಇಟ್ಟುಕೊಂಡು, 5 ಪಾಲಿಕೆಗಳು, ಜಲಮಂಡಳಿ ಹಾಗೂ ಬಿಎಂಆರ್‌ಸಿಎಲ್ ಸಂಸ್ಥೆಗಳ ಜವಾಬ್ದಾರಿಯನ್ನು ಮಾತ್ರ ಬೆಂಗಳೂರು ಅಭಿವೃದ್ಧಿಗೆ ಸಚಿವರಿಗೆ ವಹಿಸಿದ್ದಾರೆ. ಇದು ಯಾರಿಗಾದರೂ ಕಾರು ಚಲಾಯಿಸಲು ಕೊಟ್ಟು, ಅದರ ಇಂಜಿನ್ ಅನ್ನು ತಾವೇ ಇಟ್ಟುಕೊಂಡ ಹಾಗೆ. ಹೀಗಾದರೆ ಬೆಂಗಳೂರು ಅಭಿವೃದ್ಧಿ ಸಚಿವರು ಹೇಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯ? ಎಂದು ಸೂರ್ಯ ಪ್ರಶ್ನಿಸಿದರು.